ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ತೊಡಲಿರುವ ಹೊಸ ಜರ್ಸಿ ಹೇಗಿದೆ ಗೊತ್ತಾ?

First look of Team indias alternate jersey at WC

ಲಂಡನ್‌, ಜೂನ್‌ 02: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿಯಲ್ಲಿ ಭಾರತ ತಂಡ ಮೊದಲ ಆಡುವುದು ಇನ್ನೂ ಬಾಕಿ ಇದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ ಹೊಸ ನಿಯಮದ ಅನ್ವಯ ಎಲ್ಲಾ ತಂಡಗಳು ವಿಶ್ವಕಪ್‌ನಲ್ಲಿ ಎರಡು ರೀತಿಯ ಜರ್ಸಿಗಳನ್ನು ತೊಡಬೇಕಾಗಿದೆ. ಅಂದಹಾಗೆ ಈಗಾಗಲೇ ವಿಶ್ವಕಪ್‌ನಲ್ಲಿ ಭಾರತ ತಂಡ ತೊಡಲಿರುವ ಸಮವಸ್ತ್ರ ಅನಾವರಣಗೊಂಡಿದೆ ಆದರೂ, ಬದಲೀ ಸಮವಸ್ತ್ರದ ಸುಳಿವು ಎಲ್ಲಿಯೂ ಹೊರಬಂದಿಲ್ಲ. ಆದರೂ ಅಭಿಮಾನಿಗಳಲ್ಲಿ ತಂಡದ ನೂತನ ಜರ್ಸಿ ವೀಕ್ಷಣೆಯ ಕಾತುರ ಹೆಚ್ಚಾಗಿದೆ.

ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಮಧ್ಯಮ ವೇಗಿ ಅಲ್ಲವಂತೆ!ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಮಧ್ಯಮ ವೇಗಿ ಅಲ್ಲವಂತೆ!

ವರದಿಗಳ ಪ್ರಕಾರ ಟೀಮ್‌ ಇಂಡಿಯಾದ ಜರ್ಸಿಯಲ್ಲಿ ನೀಲಿ ಬಣ್ಣವನ್ನೇ ಹೆಚ್ಚು ಬಳಕೆ ಮಾಡಲಾಗುತ್ತಿತ್ತು. ಆದರೆ ತಂಡದ ಬದಲಿ ಸಮವಸ್ತ್ರದಲ್ಲಿ ಕೇಸರಿ ಬಣ್ಣಕ್ಕೆ ಆದ್ಯತೆ ನೀಡಲಾಗಿದೆ.

ವಿಶ್ವಕಪ್‌: ಇಂಡೊ-ಪಾಕ್‌ ಪಂದ್ಯದ ಬಗ್ಗೆ ರೈನಾ ಹೇಳಿದ್ದೇನು ಗೊತ್ತಾ?ವಿಶ್ವಕಪ್‌: ಇಂಡೊ-ಪಾಕ್‌ ಪಂದ್ಯದ ಬಗ್ಗೆ ರೈನಾ ಹೇಳಿದ್ದೇನು ಗೊತ್ತಾ?

"ತವರಿನಾಚೆ ಟೀಮ್‌ ಇಂಡಿಯಾ ತೊಡಲಿರುವ ಜರ್ಸಿ ಇದಾಗಿದೆ ಎಂದು ಈಗಾಗಲೇ ಮಾತನಾಡಲಾಗುತ್ತದೆ. ಆದರೆ ಅಲ್ಲ. ಜೂನ್‌ 30ರಂದು ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಈ ಬದಲಿ ಜರ್ಸಿ ತೊಟ್ಟು ಆಡಲಿದೆ ಅಷ್ಟೇ. ಐಸಿಸಿ ನಿಯಮದ ಪ್ರಕಾರ ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ ಅದರ ಆಯ್ಕೆಯ ಬಣ್ಣವನ್ನು ಉಳಿಸಿಕೊಳ್ಳಲು ಅನುಮತಿ ಇದೆ. ಹೀಗಾಗಿ ಎದುರಾಳಿ ಭಾರತ ತಂಡವೂ ನೀಲಿ ಬಣ್ಣವನ್ನೇ ಹೊಂದಿರುವ ಕಾರಣ ಕೊಂಚ ಬದಲಾವಣೆ ತಂದುಕೊಳ್ಳಬೇಕಿದೆ. ಹೀಗಾಗಿ ಬದಲಿ ಜರ್ಸಿ ತೊಟ್ಟ ಭಾರತ ತಂಡ ಕಣಕ್ಕಿಳಿಯಲಿದೆ,'' ಎಂದಿ ಮೂಲಗಳು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿವೆ.

ವಿಶ್ವಕಪ್‌: 'ದಿ ಯೂನಿವರ್ಸ್‌ ಬಾಸ್‌' ಮುಡಿಗೆ ಅಪರೂಪದ ವಿಶ್ವದಾಖಲೆವಿಶ್ವಕಪ್‌: 'ದಿ ಯೂನಿವರ್ಸ್‌ ಬಾಸ್‌' ಮುಡಿಗೆ ಅಪರೂಪದ ವಿಶ್ವದಾಖಲೆ

ಟೂರ್ನಿ ಶುರುವಾಗಿ ಈಗಾಗಲೇ 5 ಪಂದ್ಯಗಳು ನಡೆದಿವೆ. ಭಾರತ ತಂಡ ತನ್ನ ಮೊದಲ ಪಂದ್ಯಕ್ಕಾಗಿ ಜೂನ್‌ 5ರವರೆಗೆ ಕಾಯಬೇಕಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಹರಿಣ ಪಡೆ ಮೇ 30ರಂದು ನಡೆದ ಉದ್ಘಾಟನಾ ಪಂದ್ಯದಲ್ಲಿಆತಿಥೇಯ ಇಂಗ್ಲೆಂಡ್‌ ನಿರಾಸೆ ಅನುಭವಿಸಿತ್ತು.

Story first published: Sunday, June 2, 2019, 19:09 [IST]
Other articles published on Jun 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X