ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಮುಂದಿನ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಸೌರವ್ ಗಂಗೂಲಿ

First priority is safety, Sourav Ganguly reacted on IPL suspend
Sourav Ganguly Issues First Statement After IPL Gets Postponed |ONEINDIA KANNADA

ಮುಂಬೈ, ಮಾರ್ಚ್ 14: ಸುರಕ್ಷತೆಗೆ ಮೊದಲ ಆದ್ಯತೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್‌ ಇನ್ ಇಂಡಿಯಾದ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಕೊರೊನಾ ವೈರಸ್ ಕಾರಣದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಆರಂಭವನ್ನು ಮಾರ್ಚ್ 29ರಿಂದ ಏಪ್ರಿಲ್ 15ಕ್ಕೆ ಮುಂದೂಡಿರುವ ಬಗ್ಗೆ ಗಂಗೂಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಕೊರೊನಾ ಎಫೆಕ್ಟ್: ತೊಂದರೆಗೀಡಾದ ಪ್ರಮುಖ ಕ್ರೀಡಾ ಸ್ಪರ್ಧೆಗಳ ಪಟ್ಟಿಕೊರೊನಾ ಎಫೆಕ್ಟ್: ತೊಂದರೆಗೀಡಾದ ಪ್ರಮುಖ ಕ್ರೀಡಾ ಸ್ಪರ್ಧೆಗಳ ಪಟ್ಟಿ

'ಇಂಥ ಸಂದರ್ಭದಲ್ಲಿ ನಾವು ಟೂರ್ನಿಯನ್ನು ಮುಂದೂಡುವ ನಿರ್ಧಾರಕ್ಕೇ ಗಟ್ಟಿಯಾಗಬೇಕಿದೆ. ಯಾಕೆಂದರೆ ನಾವು ಸುರಕ್ಷೆಗೆ ಮೊದಲ ಆದ್ಯತೆ ನೀಡುತ್ತೇವೆ. ಹೀಗಾಗಿ 2020ರ ಐಪಿಎಲ್ ಟೂರ್ನಿ ಮುಂದೂಡಿದ್ದೇವೆ,' ಎಂದು ಐಪಿಎಲ್ ಮುಂದೂಡಿದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗಂಗೂಲಿ ಮೊದಲ ಪ್ರತಿಕ್ರಿಯೆಯಿತ್ತಿದ್ದಾರೆ.

ಕೊರೊನಾವೈರಸ್ ಪರೀಕ್ಷೆಗಾಗಿ ಕಿವೀಸ್ ವೇಗಿ ಲಾಕಿ ಫರ್ಗುಸನ್‌ಗೆ ನಿರ್ಬಂಧ!ಕೊರೊನಾವೈರಸ್ ಪರೀಕ್ಷೆಗಾಗಿ ಕಿವೀಸ್ ವೇಗಿ ಲಾಕಿ ಫರ್ಗುಸನ್‌ಗೆ ನಿರ್ಬಂಧ!

ಐಪಿಎಲ್ ಮುಂದಿನ ಬೆಳವಣಿಗೆಗಳಿಗೆ ಸಂಬಂಧಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ದಾದಾ ನೀಡಿದ ಉತ್ತರಗಳು ಕೆಳಗಿವೆ.

ದಿನಕ್ಕೆರಡು ಪಂದ್ಯಗಳಾ?

ದಿನಕ್ಕೆರಡು ಪಂದ್ಯಗಳಾ?

ಏಪ್ರಿಲ್ 15ರ ಬಳಿಕ ಐಪಿಎಲ್ ಪಂದ್ಯಗಳನ್ನು ದಿನಕ್ಕೆರಡರಂತೆ ಮಾಡುವ ಆಲೋಚನೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ 'ಬಂಗಾಳ ಹುಲಿ' ಗಂಗೂಲಿ, 'ಏನಾಗಲಿದೆ ಎಂದು ಕೊಂಚ ಕಾದು ನೋಡೋಣ. ಈಗಲೇ ಉತ್ತರಿಸುವುದು ಸರಿಯಾಗಲ್ಲ,' ಎಂದರು.

ದ.ಆಫ್ರಿಕಾ ವಿರುದ್ಧದ ಸರಣಿ ರದ್ದು

ದ.ಆಫ್ರಿಕಾ ವಿರುದ್ಧದ ಸರಣಿ ರದ್ದು

ವಿಶ್ವದಾದ್ಯಂತ ಆತಂಕಕಾರಿಯಾಗಿ ಕಂಡು ಬರುತ್ತಿರುವ ಕೊರೊನಾ ವೈರಸ್‌ನಿಂದಾಗಿ ವಿಶ್ವದ ಪ್ರಮುಖ ಕ್ರೀಡಾಕೂಟಗಳೆಲ್ಲ ರದ್ದಾಗುತ್ತಿವೆ ಇಲ್ಲವೆ ಮುಂದೂಡಲ್ಪಡುತ್ತಿವೆ. ಭಾರತಕ್ಕೆ ದಕ್ಷಿಣ ಆಫ್ರಿಕಾದ ಪ್ರವಾಸ ಸರಣಿಯೂ ರದ್ದಾಗಿದೆ. ಆರಂಭಿಕ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನೆರಡು ಪಂದ್ಯಗಳು ವೈರಸ್ ಸೋಂಕಿನ ಭೀತಿಯ ತೀವ್ರತೆಗೆ ರದ್ದಾದವು.

ಫ್ರಾಂಚೈಸಿಗಳು ಏನನ್ನುತ್ತವೆ?

ಫ್ರಾಂಚೈಸಿಗಳು ಏನನ್ನುತ್ತವೆ?

ಐಪಿಎಲ್ ಟೂರ್ನಿ ಈ ಮೊದಲು ನಿಗದಿಯಾಗಿದ್ದ ದಿನಾಂಕಕ್ಕೆ ಆರಂಭವಾಗುತ್ತಿಲ್ಲ, ಬೇರೆ ದಿನಾಂಕಕ್ಕೆ ಮುಂದೂಡಿರುವ ಬಗ್ಗೆ ಫ್ರಾಂಚೈಸಿಗಳಿಗೆ ಖುಷಿಯಿದೆಯೆ ಎಂಬ ಪ್ರಶ್ನೆಗೆ, 'ಇದನ್ನು ಒಪ್ಪಿಕೊಳ್ಳದ ಹೊರತಾಗಿ ಯಾರಿಗೂ ಬೇರೆ ಆಯ್ಕೆಗಳೇ ಇಲ್ಲ,' ಎಂದು ಗಂಗೂಲಿ ಉತ್ತರಿಸಿದರು.

ಮುಂದೂಡಿಕೆಗೆ ಅಸಲಿ ಕಾರಣ

ಮುಂದೂಡಿಕೆಗೆ ಅಸಲಿ ಕಾರಣ

ಕೊರೊನಾ ವೈರಸ್ ಬಗ್ಗೆ ನಿಗಾವಹಿಸುತ್ತೇವೆ ಆದರೆ ಐಪಿಎಲ್ ಬದಲಾವಣೆಯಿಲ್ಲದೆ ನಡೆಯಲಿದೆ ಎಂದು ಗಂಗೂಲಿ ಈ ಮೊದಲು ಹೇಳಿದ್ದರು. ಆದರೆ ಭಾರತದ ಕೇಂದ್ರ, ದೆಹಲಿ ಸರ್ಕಾರ ತನ್ನ ರಾಜ್ಯದಲ್ಲಿ ನಡೆಯಲಿದ್ದ ಎಲ್ಲಾ ಕ್ರೀಡಾಕೂಟಗಳನ್ನು ರದ್ದುಗೊಳಿಸಿತ್ತು. ಆ ಬಳಿಕ ಐಪಿಎಲ್ ಅನ್ನು ಕೂಡ ಬಿಸಿಸಿಐ ಮುಂದೂಡಿತ್ತು. ಅಂದ್ಹಾಗೆ, ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ; ಐಪಿಎಲ್ ಆರಂಭದ ದಿನಾಂಕ ಸದ್ಯ ಬದಲಾಗಿದೆಯಷ್ಟೇ. ಇನ್ನೆಲ್ಲಾ ಸಂಗತಿಗಳು ಹಿಂದಿನ ಯೋಜನೆಯಂತೆಯೇ ನಡೆಯಲಿವೆಯಂತೆ.

Story first published: Saturday, March 14, 2020, 12:30 [IST]
Other articles published on Mar 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X