ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಆಟಗಾರರು ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿಯಲು ಕಾರಣವೇನು?

First Test: England wear black armbands in memory Sir Captain Tom Moore

ಚೆನ್ನೈ, ಫೆಬ್ರವರಿ 5: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಚೆಪಾಕ್ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.ಇಂಗ್ಲೆಂಡ್ ಆರಂಭಿಕ ಆಟಗಾರ ಸಿಬ್ಲಿ ಅರ್ಧಶತಕ ಗಳಿಸಿ ಉತ್ತಮ ಕೊಡುಗೆ ನೀಡಿದ್ದಾರೆ. ಈ ನಡುವೆ ಇಂದು ಇಂಗ್ಲೆಂಡ್ ಆಟಗಾರರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ.

ಎಂಎ ಚಿದಂಬರಂ ಮೈದಾನದಲ್ಲಿ ಶುಕ್ರವಾರದಂದು ಸಿಬ್ಲಿ ಹಾಗೂ ಬರ್ನ್ಸ್ ತಮ್ಮ ತೋಳಿಗೆ ಕಪ್ಪು ಬ್ಯಾಂಡ್ ಧರಿಸಿ ಇನ್ನಿಂಗ್ಸ್ ಆರಂಭಿಸಿದರು. ಸಾಮಾನ್ಯವಾಗಿ ಶೋಕಚಾರಣೆಯ ಸಂಕೇತವಾಗಿ ಈ ರೀತಿ ಬ್ಯಾಂಡ್ ಧರಿಸಲಾಗುತ್ತದೆ. ಈ ಬಾರಿ ಇಂಗ್ಲೆಂಡ್ ಆಟಗಾರರು ಇತ್ತೀಚೆಗೆ ನಿಧನರಾದ ಕ್ಯಾಪ್ಟನ್ ಸರ್ ಟಾಮ್ ಮೂರ್ ಅವರ ನಿಧನದ ಶೋಕಾಚರಣೆ ಸಂಕೇತವಾಗಿ ಕಪ್ಪು ಬ್ಯಾಂಡ್ ಧರಿಸಿದ್ದಾರೆ.

ಚೆನ್ನೈ ಟೆಸ್ಟ್: ಗಾಯಾಳು ಸ್ಪಿನ್ನರ್ ಅಕ್ಷರ್ ಪಟೇಲ್ ಬದಲಿಗೆ ನದೀಂ ಕಣಕ್ಕೆ ಚೆನ್ನೈ ಟೆಸ್ಟ್: ಗಾಯಾಳು ಸ್ಪಿನ್ನರ್ ಅಕ್ಷರ್ ಪಟೇಲ್ ಬದಲಿಗೆ ನದೀಂ ಕಣಕ್ಕೆ

''ಮಾಜಿ ಯೋಧರಾಗಿದ್ದ ಟಾಮ್ ಅವರು ತಮ್ಮ ಇಳಿವಯಸ್ಸಿನಲ್ಲೂ ಕೊರೊನಾವೈರಸ್ ಗಾಗಿ ನಿಧಿ ಸಂಗ್ರಹದಲ್ಲಿ ತೊಡಗಿದ್ದರು, ಕಳೆದ ವಾರ ತಮ್ಮ ನೂರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ನಂತರ ಕೊವಿಡ್ 19 ಕಾರಣದಿಂದ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಅವರ ಗೌರವಾರ್ಥ ಇಂಗ್ಲೆಂಡ್ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಲಿದ್ದಾರೆ'' ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹೇಳಿದೆ.

ಸುಮಾರು 11ತಿಂಗಳ ಬಳಿಕ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಿದೆ. ಕೊವಿಡ್ 19 ನಿಯಮಕ್ಕನುಸಾರವಾಗಿ ಮೈದಾನದಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆಸ್ಟ್ರೇಲಿಯಾವನ್ನು 2-1ರಲ್ಲಿ ಮಣಿಸಿರುವ ಭಾರತ ಹಾಗೂ ಶ್ರೀಲಂಕಾವನ್ನು 2-0ರಲ್ಲಿ ಮಣಿಸಿರುವ ಇಂಗ್ಲೆಂಡ್ ಕೊವಿಡ್ 19 ನಡುವೆ ಕ್ರಿಕೆಟ್ ಕದನಕ್ಕೆ ಮುನ್ನುಡಿ ಬರೆದಿವೆ.

ಮೊದಲ ಟೆಸ್ಟ್ ಸಂಪೂರ್ಣ ಅಪ್ಡೇಟ್ಸ್, ಲೈವ್ ಸ್ಕೋರ್ ಕಾರ್ಡ್ ಇಲ್ಲಿದೆ:

ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಯಾಗಿದ್ದು, ಕೊನೆ ಕ್ಷಣದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಬದಲಿಗೆ ಇಬ್ಬರು ಸ್ಪಿನ್ನರ್ ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ತಮಿಳುನಾಡಿನ ವಾಷಿಂಗ್ಟನ್ ಸುಂದರ್ ಹಾಗೂ ಜಸ್ ಪ್ರೀತ್ ಬೂಮ್ರಾ ಅವರು ಭಾರತದಲ್ಲಿ ಮೊದಲ ಟೆಸ್ಟ್ ಪಂದ್ಯವಾಡುತ್ತಿರುವುದು ವಿಶೇಷವಾಗಿದೆ. ಆಡುವ XIರಲ್ಲಿ ಶಾಬಾಜ್ ನದೀಂಗೂ ಇದು ಪೂರ್ಣ ಪ್ರಮಾಣ ಮೊದಲ ಪಂದ್ಯ ಎನ್ನಬಹುದು. ಇದೇ ರೀತಿ ಇಂಗ್ಲೆಂಡ್ ತಂಡದಲ್ಲಿ ಕ್ರಾವ್ಲೆ ಬದಲಿಗೆ ಬರ್ನ್ಸ್ ತಂಡ ಸೇರಿದ್ದಾರೆ. ಜೊತೆಗೆ ಬೆನ್ ಸ್ಟೋಕ್ಸ್ ,ಜೋಫ್ರಾ ಆರ್ಚರ್, ಓಲಿ ಪೋಪ್ ತಂಡಕ್ಕೆ ಬಂದಿದ್ದಾರೆ.

Story first published: Friday, February 5, 2021, 14:16 [IST]
Other articles published on Feb 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X