ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಅಭಿಮಾನಿಗಳು ತಿಳಿದಿರಬೇಕಾದ 5 ಕುತೂಹಲಕಾರಿ ಸಂಗತಿಗಳು

Five interesting facts every IPL fan should know

ಬೆಂಗಳೂರು: ಭಾರತದ ಅದ್ದೂರಿ ಕ್ರಿಕೆಟ್‌ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ಗೆ ವಿಶ್ವದಲ್ಲೆಡೆ ಅಭಿಮಾನಿಗಳಿದ್ದಾರೆ. ಖ್ಯಾತ ಅಂತಾರಾಷ್ಟ್ರೀಯ ಆಟಗಾರರು ಈ ಆಕರ್ಷಣೀಯ ಟೂರ್ನಿಯಲ್ಲಿ ಪಾಲ್ಗೊಳ್ಳುವುದರಿಂದ ಐಪಿಎಲ್‌ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಐಪಿಎಲ್ ಕೂಡ ವಿವಾದಗಳಿಗೆ ಗುರಿಯಾಗಿದೆ. ಪ್ರತೀ ಸೀನನ್‌ನಲ್ಲೂ ಒಂದಿಲ್ಲೊಂದು ಕಪ್ಪುಚುಕ್ಕೆ ಕಾಣಸಿಕ್ಕಿದೆ. ಹಾಗಂತ ಐಪಿಎಲ್ ಬಗೆಗಿನ ಆಕರ್ಷಣೆ ಕಡಿಮೆಯಾಗಿಲ್ಲ. ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿರುವುದರಿಂದ ಯುವ ಆಟಗಾರರಿಗೂ ಐಪಿಎಲ್ ಸಹಾಯಕವಾಗಿದೆ.

'ಕೊಹ್ಲಿಯಲ್ಲಿ ಅಹಂ ಇದೆ': ವಿರಾಟ್ ಔಟ್‌ಗೆ ಐಡಿಯಾಗಳ ಕೊಟ್ಟ ಮುಷ್ತಾಕ್!'ಕೊಹ್ಲಿಯಲ್ಲಿ ಅಹಂ ಇದೆ': ವಿರಾಟ್ ಔಟ್‌ಗೆ ಐಡಿಯಾಗಳ ಕೊಟ್ಟ ಮುಷ್ತಾಕ್!

ಅಪರೂಪದ ದಾಖಲೆಗಳಿಗೇ ಐಪಿಎಲ್ ಸೀಸನ್‌ ಗಮನ ಸೆಳೆದಿದ್ದಿದೆ. ಇಷ್ಟನೇ ಆವೃತ್ತಿ ಅಂತ ಹೇಳಿಬಿಟ್ಟರೆ ಸಾಕು ಆ ವರ್ಷದಲ್ಲಾದ ದಾಖಲೆಗಳ ಮಾಹಿತಿಯನ್ನು ಅಭಿಮಾನಿಗಳು ಸುಲಭವಾಗಿ ಹೇಳಿಬಿಡುತ್ತಾರೆ. ಆದರೆ ಹೆಚ್ಚಿನ ಅಭಿಮಾನಿಗಳಿಗೆ ಗೊತ್ತಿರದ ಒಂದಿಷ್ಟು ಅಪರೂಪದ ದಾಖಲೆಗಳು, ಸಂಗತಿಗಳು.

ಪಾಕಿಸ್ತಾನ ಸ್ಫೋಟಕ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿಗೆ ಕೊರೊನಾ ಸೋಂಕು!ಪಾಕಿಸ್ತಾನ ಸ್ಫೋಟಕ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿಗೆ ಕೊರೊನಾ ಸೋಂಕು!

ಪ್ರತೀ ಐಪಿಎಲ್ ಅಭಿಮಾನಿಗಳಿಗೆ ಗೊತ್ತಿರಬೇಕಾದ 5 ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

1. 4 ಓವರ್‌ಗಳಲ್ಲಿ ಅತೀ ಕಡಿಮೆ ರನ್

1. 4 ಓವರ್‌ಗಳಲ್ಲಿ ಅತೀ ಕಡಿಮೆ ರನ್

ನಾಲ್ಕು ಓವರ್‌ಗಳನ್ನು ಎಸೆದು ಅತೀ ಕಡಿಮೆ ರನ್ ನೀಡಿದ ದಾಖಲೆ ಡೆಕ್ಕನ್ ಚಾರ್ಜರ್ಸ್‌ನ ಫಿಡೆಲ್ ಎಡ್ವರ್ಡ್ಸ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್‌ನ ಆಶಿಷ್ ನೆಹ್ರಾ ಹೆಸರಿನಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಎಡ್ವರ್ಡ್ಸ್ 4 ಓವರ್‌ ಎಸೆದು 1 ಮೇಡಿನ್ ಓವರ್‌ನೊಂದಿಗೆ 6 ರನ್ ನೀಡಿ ಸೊನ್ನೆ ವಿಕೆಟ್ ಪಡೆದಿದ್ದರು. ಇದರಲ್ಲಿ ಡೆಕ್ಕನ್ ಗೆದ್ದಿತ್ತು. ನೆಹ್ರಾ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 4-1-6-1 ಬೌಲಿಂಗ್ ಸಾಧನೆ ತೋರಿದ್ದರು. ಇದರಲ್ಲಿ ಪಂಜಾಬ್ ಗೆದ್ದಿತ್ತು.

2. ಅತೀ ವೇಗದ ಶತಕ

2. ಅತೀ ವೇಗದ ಶತಕ

2010ರಲ್ಲಿ ಮುಂಬೈ ಇಂಡಿಯನ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಯೂಸುಫ್ ಪಠಾಣ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಮುಂಬೈ ನೀಡಿದ್ದ 213 ರನ್ ಗುರಿ ಬೆನ್ನಟ್ಟಿದ್ದ ರಾಜಸ್ಥಾನ್ ಪರ ಪಠಾಣ್, 37 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದರಲ್ಲಿ 9 ಫೋರ್‌ಗಳು, 8 ಸಿಕ್ಸರ್‌ಗಳನ್ನು ಸೇರಿದ್ದವು. ಆದರೂ ಮುಂಬೈ ಇಂಡಿಯನ್ಸ್ ಪಂದ್ಯವನ್ನು 4 ರನ್‌ಗಳಿಂದ ಗೆದ್ದಿತ್ತು.

3. ಸೀಸನ್‌ನಲ್ಲಿ ಅತೀ ಹೆಚ್ಚು ವಿಕೆಟ್‌ಗಳು

3. ಸೀಸನ್‌ನಲ್ಲಿ ಅತೀ ಹೆಚ್ಚು ವಿಕೆಟ್‌ಗಳು

ಮುಂಬೈ ಇಂಡಿಯನ್ಸ್ ವೇಗಿ ಲಸಿತ್ ಮಾಲಿಂಗ 2011ರ ಸೀಸನ್‌ನಲ್ಲಿ ಒಟ್ಟು 16 ಪಂದ್ಯಗಳನ್ನಾಡಿ 28 ವಿಕೆಟ್‌ಗಳನ್ನು ಮುರಿದಿದ್ದರು. ಇದರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ 13 ರನ್‌ಗೆ 5 ವಿಕೆಟ್ ಸಾಧನೆಯೂ ಸೇರಿದೆ. ದ್ವಿತೀಯ ಅತ್ಯಧಿಕ ವಿಕೆಟ್‌ ಎಂದರೆ ಆರ್‌ ಸಿಂಗ್ ಅವರದ್ದು. 2009ರಲ್ಲಿ ಸಿಂಗ್ 23 ವಿಕೆಟ್ ಕೆಡವಿದ್ದರು.

4. ತಂಡದ ಅತೀ ಕಡಿಮೆ ಟೋಟಲ್

4. ತಂಡದ ಅತೀ ಕಡಿಮೆ ಟೋಟಲ್

ರಾಜಸ್ಥಾನ್ ರಾಯಲ್ಸ್ ತಂಡದ ಹಣೆಯಲ್ಲಿ ಅತೀ ಕಡಿಮೆ ಟೋಟಲ್ ರನ್ ದಾಖಲೆಯಿದೆ. 2009ರಲ್ಲಿ ಕೇಪ್‌ಟೌನ್‌ (ದಕ್ಷಿಣ ಆಫ್ರಿಕಾ)ನಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಬೆಂಗಳೂರು ವಿರುದ್ಧ ರಾಜಸ್ಥಾನ ಕೇವಲ 58 ರನ್ ಬಾರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಬೆಂಗಳೂರು 134 ರನ್ ಬಾರಿಸಿತ್ತು.

5. ಇನ್ನಿಂಗ್ಸ್‌ ಒಂದರಲ್ಲಿ ಅತ್ಯಧಿಕ ರನ್

5. ಇನ್ನಿಂಗ್ಸ್‌ ಒಂದರಲ್ಲಿ ಅತ್ಯಧಿಕ ರನ್

ಇನ್ನಿಂಗ್ಸ್‌ ಒಂದರಲ್ಲಿ ಅತ್ಯಧಿಕ ರನ್ ನೀಡಿದ ದಾಖಲೆ ಆರ್‌ಪಿ ಸಿಂಗ್ ಹೆಸರಿನಲ್ಲಿದೆ. ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿದ್ದ ಸಿಂಗ್, 2008ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ಓವರ್‌ಗೆ 59 ರನ್ ನೀಡಿದ್ದರು. ಪ್ರತೀ ಓವರ್‌ಗೆ 10, 10, 20 ಮತ್ತು 19ರಂತೆ ಸಿಂಗ್ 59 ರನ್ ನೀಡಿದ್ದರು.

Story first published: Saturday, June 13, 2020, 20:14 [IST]
Other articles published on Jun 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X