ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20ಐ ಕ್ರಿಕೆಟ್‌ನ ಒಂದೇ ಪಂದ್ಯದಲ್ಲಿ ನಾಯಕತ್ವ ವಹಿಸಿಕೊಂಡ 5 ಕ್ರಿಕೆಟಿಗರು: ಓರ್ವ ಭಾರತೀಯ ದಿಗ್ಗಜ ಕ್ರಿಕೆಟಿಗ

Five legendary cricketers who have lead their nation in only one T20I match

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡಬೇಕು ಎನ್ನುವುದು ಎಲ್ಲಾ ಕ್ರಿಕೆಟ್ ಆಟಗಾರರ ದೊಡ್ಡ ಮಟ್ಟದ ಕನಸಾಗಿರುತ್ತದೆ. ಅದರಲ್ಲೂ ಭಾರತದಂತಾ ರಾಷ್ಟ್ರಗಳಲ್ಲಿ ಬಹುತೇಕರು ಒಂದಲ್ಲಾ ಒಂದು ಸಂದರ್ಭದಲ್ಲಿ ಕ್ರಿಕೆಟ್ ಆಡಿರುವ ನೆನಪುಗಳನ್ನು ಹೊಂದಿರುತ್ತಾರೆ. ಇನ್ನು ಕ್ರಿಕೆಟ್‌ನಲ್ಲಿ ಆಸಕ್ತಿಯನ್ನು ಹೊಂದಿದ ಹೆಚ್ಚಿನ ಆಟಗಾರರು ರಾಷ್ಟ್ರೀಯ ತಂಡದ ಪರವಾಗಿ ಆಡುವ ಕನಸನ್ನು ಕೂಡ ಕಂಡಿರುತ್ತಾರೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶ ಗಳಿಸಿಕೊಂಡ ಆಟಗಾರರು ತಮ್ಮ ತಂಡವನ್ನು ಒಮ್ಮೆಯಾದರೂ ನಾಯಕನಾಗಿ ಮುನ್ನಡೆಸಬೇಕು ಎಂಬ ಕನಸು ಕಾಣುತ್ತಾರೆ.

ಆದರೆ ಇಂಥಾ ಅವಕಾಶಗಳು ಕೆಲವೇ ಕೆಲವು ಆಟಗಾರರಿಗೆ ಮಾತ್ರವೇ ಲಭಿಸುತ್ತದೆ. ಇನ್ನು ಟಿ20 ಕ್ರಿಕೆಟ್ ಮಾದರಿ ಬಂದ ಬಳಿಕ ಯುವ ಆಟಗಾರರಿಗೆ ಕೂಡ ತಮ್ಮ ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸತೊಡಗಿದೆ. ಅದರಲ್ಲಿ ಕೆಲ ಆಟಗಾರರು ಬೆರಳೆಣಿಕೆಯ ಪಂದ್ಯಗಳಲ್ಲಿ ಮಾತ್ರವೇ ನಾಯಕತ್ವ ವಹಿಸಿಕೊಳ್ಳುವ ಅವಕಾಶ ಪಡೆದುಕೊಂಡರೆ ಕೆಲವರು ಅನೇಕ ಪಂದ್ಯಗಳಲ್ಲಿ ತಮ್ಮ ತಂಡವನ್ನು ಮುನ್ನಡೆಸಿದ್ದಾರೆ.

IRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳುIRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಆದರೆ ಇಂದಿನ ಈ ವರದಿಯಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಕೇವಲ ಒಂದು ಬಾರಿ ಮಾತ್ರವೇ ತಂಡವನ್ನು ಮುನ್ನಡೆಸುವ ಅವಕಾಶ ಪಡೆದುಕೊಂಡ ಐವರು ಆಟಗಾರರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮುಂದೆ ಓದಿ..

ಅಲೆಸ್ಟರ್ ಕುಕ್

ಅಲೆಸ್ಟರ್ ಕುಕ್

ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ಸು ಸಾಧಿಸಿ ಇಂಗ್ಲೆಂಡ್‌ ಕಂಡ ಶ್ರೇಷ್ಠ ಟೆಸ್ಟ್ ಆಟಗಾರ ಎನಿಸಿಕೊಂಡ ಅಲೆಸ್ಟರ್ ಕುಕ್ ಸೀಮಿತ ಓವರ್‌ಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಗಾರ ಎನಿಸಿದರೂ ಸೀಮಿತ ಓವರ್‌ಗಳ ಮಾದರಿಯಲ್ಲಿ ಕುಕ್ ಆಡಿದ್ದು ಕೇವಲ 96 ಪಂದ್ಯಗಳನ್ನು ಮಾತ್ರ. ಇನ್ನು ಟಿ20 ಕ್ರಿಕೆಟ್ ಮಾದರಿಯಲ್ಲಿ ಇಂಗ್ಲೆಂಡ್ ಪರವಾಗಿ ಕೇವಲ 4 ಪಂದ್ಯಗಳಲ್ಲಿ ಮಾತ್ರವೇ ಆಡಿದ್ದಾರೆ. ಅದರಲ್ಲಿ 2009ರಲ್ಲಿ ಇಂಗ್ಲೆಂಡ್ ನಾಯಕನಾಗಿದ್ದ ಪಾಲ್ ಕಾಲಿಂಗ್‌ವುಡ್ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಡಲು ಅಲಭ್ಯವಾಗಿದ್ದಾಗ ಅಲೆಸ್ಟರ್ ಕುಕ್ ಇಂಗ್ಲೆಂಡ್ ತಂಡದ ನಾಯಕನಾಗಿ ಜವಾಬ್ಧಾರಿ ವಹಿಸಿಕೊಂಡಿದ್ದರು. ಈ ಮೂಲಕ ಕುಕ್ ಇಂಗ್ಲೆಂಡ್ ತಂಡವನ್ನು ಏಕೈಕ ಬಾರಿ ಮುನ್ನಡೆಸುವ ಅವಕಾಶ ಪಡೆದುಕೊಂಡರು.

ಇನ್ಜಮಾಮ್ ಉಲ್ ಹಕ್

ಇನ್ಜಮಾಮ್ ಉಲ್ ಹಕ್

ಪಾಕಿಸ್ತಾನ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಆಟಗಾರ ಹಾಗೂ ನಾಯಕನ ಪೈಕಿ ಇನ್ಜಮಾಮ್ ಉಲ್ ಹಕ್ ಕೂಡ ಒಬ್ಬರು. 2003ರಿಂದ 2007ರ ವರೆಗೆ ಪಾಕಿಸ್ತಾನ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿದ್ದರು ಇನ್ಜಮಾಮ್ ಉಲ್ ಹಕ್. 2006ರಲ್ಲಿ ಇಂಗ್ಲೆಂಡ್ ವಿರುದ್ಧ ಇನ್ಜಮಾಮ್ ಉಲ್ ಹಕ್ ತಮ್ಮ ವೃತ್ತಿ ಜೀವನದ ಏಕೈಕ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕನೂ ಆಗಿದ್ದರು ಇನ್ಜಮಾಮ್ ಉಲ್ ಹಕ್.

ಐಪಿಎಲ್ ಬಗ್ಗೆ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಐರ್ಲೆಂಡ್ ತಂಡದ ನಾಯಕ

ಶಾನ್ ಪೊಲಾಕ್

ಶಾನ್ ಪೊಲಾಕ್

ದಕ್ಷಿಣ ಆಫ್ರಿಕಾದ ದಿಗ್ಗಜ ವೇಗದ ಬೌಲರ್ ಶಾನ್ ಪೊಲಾಕ್ 2005ರಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದಾರೆ. ಮೂರು ವರ್ಷಗಳ ಅವಧಿಯಲ್ಲಿ ಶಾನ್ ಪೊಲಾಕ್ ಕೇವಲ 12 ಪಂದ್ಯಗಳಲ್ಲಿ ಮಾತ್ರವೇ ಆಡಿದ್ದಾರೆ. ಈ ಸಂದರ್ಭದಲ್ಲಿ ಒಂದು ಬಾರಿ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿಯೂ ಶಾನ್ ಪೊಲಾಕ್ ಜವಾಬ್ಧಾರಿ ವಹಿಸಿಕೊಂಡಿದ್ದರು. 2007ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧಧ ಪಂದ್ಯದಲ್ಲಿ ಖಾಯಂ ನಾಯಕ ಗ್ರೇಮ್ ಸ್ಮಿತ್ ಅಲಭ್ಯವಾಗಿದ್ದಾಗ ಈ ಅವಕಾಶ ಶಾನ್ ಪೊಲಾಕ್ ಪಾಲಿಗೆ ಬಂದಿತ್ತು. ಆದರೆ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋಲು ಅನುಭವಿಸಿತು

ಶೇನ್ ವಾಟ್ಸನ್

ಶೇನ್ ವಾಟ್ಸನ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಆಲ್‌ರೌಂಡರ್‌ಗಳ ಪೈಕಿ ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ ವಾಟ್ಸನ್ ಕೂಡ ಒಬ್ಬರು. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಪರಿಣಾಮಕಾರಿ ಬೌಲಿಂಗ್ ದಾಳಿಯ ಮೂಲಕ ಖ್ಯಾತವಾಗಿದ್ದರು ವಾಟ್ಸನ್. 2016ರಲ್ಲಿ ಭಾರತದ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಖಾಯಂ ನಾಯಕ ಆರೋನ್ ಫಿಂಚ್ ಅಲಭ್ಯವಾಗಿದ್ದಾಗ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುವ ಏಕೈಕ ಅವಕಾಶ ಶೇನ್ ವಾಟ್ಸನ್‌ಗೆ ದೊರೆತಿತ್ತು.

Team India ವನ್ನು ಕಾಡಿದ್ದ Englandಸ್ಟಾರ್ ಸ್ಪಿನ್ನರ್ Adil Rashid ಹಜ್ ಯಾತ್ರೆಗೆ... | *Cricket | OneIndia
ವೀರೇಂದ್ರ ಸೆಹ್ವಾಗ್

ವೀರೇಂದ್ರ ಸೆಹ್ವಾಗ್

ಭಾರತ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು 2006ರಲ್ಲಿ ದಕ್ಷಿಣ ಆಪ್ರಿಕಾ ತಂಡದ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಭಾರತ ತಂಡದ ನಾಯಕನಾಗಿದ್ದವರು ಸ್ಪೋಟಕ ಆಟಗಾರ ವಿರೇಂದ್ರ ಸೆಹ್ವಾಗ್. ಆ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಟೆಸ್ಟ್ ಹಾಗೂ ಏಕದಿನ ಮಾದರಿಯ ನಾಯಕನಾಗಿದ್ದರು. ವಿರೇಂದ್ರ ಸೆಹ್ವಾಗ್ ಭಾರತದ ಮೊದಲ ಪಂದ್ಯದ ನಾಯಕನಾಗಿ ಯಶಸ್ಸು ಸಾಧಿಸಿದರಾದರೂ ಬಳಿಕ ಚುಟುಕು ಮಾದರಿಯಲ್ಲಿ ಭಾರತವನ್ನು ಮುನ್ನಡೆಸುವ ಅವಕಾಶ ಸೆಹ್ವಾಗ್‌ಗೆ ದೊರೆಯಲಿಲ್ಲ.

Story first published: Friday, June 24, 2022, 16:26 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X