ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳು ಸಾಧ್ಯವಿಲ್ಲ: ಸೌರವ್ ಗಂಗೂಲಿ

Five Tests against Australia wont be possible: Sourav Ganguly

ನವದೆಹಲಿ, ಮೇ 15: ಸಾಂಪ್ರದಾಯಿಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಬದಲಾಗಿ ಐದು ಟೆಸ್ಟ್ ಪಂದ್ಯಗಳನ್ನು ನಡೆಸಲು ಕ್ರಿಕೆಟ್ ಆಸ್ಟ್ರೇಲಿಯಾವು ಬೋರ್ಡ್‌ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾಕ್ಕೆ (ಬಿಸಿಸಿಐ) ಪ್ರಸ್ತಾಪ ಸಲ್ಲಿಸಿತ್ತು. ಆದರೆ ಈ ಪ್ರಸ್ತಾಪಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಒಪ್ಪಿಗೆ ಸೂಚಿಸಿಲ್ಲ.

ಕೊಹ್ಲಿ or ಜಡೇಜಾ: ಯಾರು ಅತ್ಯುತ್ತಮ ಫೀಲ್ಡರ್ ಚರ್ಚೆಗೆ ತಕ್ಷಣವೇ ಅಂತ್ಯ ಹಾಡಿದ ಕೊಹ್ಲಿಕೊಹ್ಲಿ or ಜಡೇಜಾ: ಯಾರು ಅತ್ಯುತ್ತಮ ಫೀಲ್ಡರ್ ಚರ್ಚೆಗೆ ತಕ್ಷಣವೇ ಅಂತ್ಯ ಹಾಡಿದ ಕೊಹ್ಲಿ

ನವೆಂಬರ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ಅಲ್ಲಿ ಬಹು ನಿರೀಕ್ಷಿತ ಬಾರ್ಡರ್ ಗಾವಸ್ಕರ್ ಟ್ರೋಫಿಗಾಗಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವುದರಲ್ಲಿತ್ತು. ನಾಲ್ಕು ಪಂದ್ಯಗಳ ಬದಲಿಗೆ ಐದು ಪಂದ್ಯಗಳನ್ನು ನಡೆಸಲು ಕ್ರಿಕೆಟ್‌ ಆಸ್ಟ್ರೇಲಿಯಾ ಯೋಚಿಸಿತ್ತಲ್ಲದೆ, ಬಿಸಿಸಿಐಯಲ್ಲಿ ಈ ಬಗ್ಗೆ ಪ್ರಸ್ತಾಪವನ್ನಿಟ್ಟಿತ್ತು.

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಶೀಘ್ರ ನಡೆಯುವುದರಲ್ಲಿದೆ ವಿನ್ಸಿ ಟಿ10 ಲೀಗ್‌!ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಶೀಘ್ರ ನಡೆಯುವುದರಲ್ಲಿದೆ ವಿನ್ಸಿ ಟಿ10 ಲೀಗ್‌!

ಈ ಮೊದಲು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಕೆವಿನ್ ರೋಬರ್ಟ್ಸ್‌ ತಮಗೆ ನಾಲ್ಕರ ಬದಲು ಐದು ಟೆಸ್ಟ್ ಪಂದ್ಯಗಳನ್ನು ನಡೆಸಲು ಇಷ್ಟವಿರುವುದಾಗಿ ಹೇಳಿಕೊಂಡಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿರುವುದರಿಂದ ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸುವ ಹೊಣೆಗಾರಿಕೆಯೂ ಇರುವುದರಿಂದ ಹೆಚ್ಚುವರಿ ಒಂದು ಪಂದ್ಯ ನಡೆಸಲು ಕಷ್ಟವೆಂದು ಗಂಗೂಲಿ ಹೇಳಿದ್ದಾರೆ.

ಜೊತೆಯಾಟಕ್ಕೆ ವಿಶ್ವದಾಖಲೆ ಬರೆದಿರೋ ಅಪರೂಪದ ಜೋಡಿ ಸಚಿನ್-ಗಂಗೂಲಿಜೊತೆಯಾಟಕ್ಕೆ ವಿಶ್ವದಾಖಲೆ ಬರೆದಿರೋ ಅಪರೂಪದ ಜೋಡಿ ಸಚಿನ್-ಗಂಗೂಲಿ

'ಭಾರತ ತಂಡ ಐದು ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲು ಸಾಧ್ಯವೆಂದು ನನಗನ್ನಿಸುತ್ತಿಲ್ಲ. ಈ ಟೆಸ್ಟ್ ಸರಣಿಯ ಹೊತ್ತಿಗೆ ಲಿಮಿಟೆಡ್ ಓವರ್‌ ಪಂದ್ಯಗಳಿರುತ್ತವೆ ಜೊತೆಗೆ ನಾವು 14 ದಿನಗಳ ಕ್ವಾರಂಟೈನ್‌ ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿರುವುದರಿಂದ ಪ್ರವಾಸದ ದಿನಗಳು ಹೆಚ್ಚಾಗಲಿವೆ,' ಎಂದು ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

Story first published: Friday, May 15, 2020, 15:12 [IST]
Other articles published on May 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X