ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಮ್ಮೆ ಹಿಂತಿರುಗಿ ನೋಡ ಬನ್ನಿ: ಈ ವರ್ಷದ ಆಕರ್ಷಣೀಯ ಬೌಲರ್‌ಗಳಿವರು!

Flashback 2018: Top bowlers of the year

ನವದೆಹಲಿ, ಡಿಸೆಂಬರ್ 18: ನಾವೆಲ್ಲ 2019 ಹೊಸ ವರ್ಷದ ಹೊಸ್ತಿಲಲ್ಲಿದ್ದೇವೆ. ಇನ್ನೊಂದಿಷ್ಟು ದಿನ ಕಳೆದುಬಿಟ್ಟರೆ 2018ರ ನೆನಪಿನ ಅಲೆಗಳಷ್ಟೇ ನಮ್ಮ ಕಣ್ಣೆದುರಲ್ಲಿ ಸುಳಿದಾಡಲಿದೆ. ನಾವೀಗ ನಿಂತಿರುವ ಈ (2018) ವರ್ಷ ಕಳೆದು ಹೋಗುವ ಮುನ್ನ ಕ್ರೀಡಾರಂಗದಲ್ಲೊಂದು ಇಣುಕು ಹಾಕೋಣ ಬನ್ನಿ.

'ಐಪಿಎಲ್‌2019ರ ಆಟಗಾರರ ಹರಾಜು' ವಿಶೇಷ ಪುಟಕ್ಕಾಗಿ ಭೇಟಿಕೊಡಿ

2018ರ ಇಸವಿಯಲ್ಲಿ ಬೌಲಿಂಗ್‌ ವಿಭಾಗದಲ್ಲಿ ಸಾಕಷ್ಟು ಆಟಗಾರರು ಗಮನ ಸೆಳೆದಿದ್ದಾರೆ. ಹಾಗೆ ನೋಡಿದರೆ ಬೌಲರ್‌ಗಳ ಪಾಲಿಗೆ 2018 ಅದ್ಭುತ ವರ್ಷವಾಗಿ ಕಾಣಿಸಿಕೊಂಡಿದೆ. ಈ ವರ್ಷ ಬೌಲಿಂಗ್‌ ವಿಭಾಗದಲ್ಲಿ ಮಿಂಚಿದ ಪ್ರತಿಭಾನ್ವಿತ ಆಟಗಾರರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಐಪಿಎಲ್ 2019 : ಅತಿ ಹೆಚ್ಚು ಬಿಡ್ ಪಡೆದ ಹೆಟ್ಮೆಯರ್, ಜಯದೇವ್ಐಪಿಎಲ್ 2019 : ಅತಿ ಹೆಚ್ಚು ಬಿಡ್ ಪಡೆದ ಹೆಟ್ಮೆಯರ್, ಜಯದೇವ್

ಕಳೆದ 12 ತಿಂಗಳು (18 ಡಿಸೆಂಬರ್ 2017ರಿಂದ 18 ಡಿಸೆಂಬರ್ 2018) ತಂಡಗಳು ಕೇವಲ ಐದು ಸಂದರ್ಭಗಳಲ್ಲಿ 600 ರನ್‌ಗಳನ್ನು ದಾಟಲು ಸಮರ್ಥವಾಗಿವೆ. ಈ ವರ್ಷ ಇನ್ನಿಂಗ್ಸ್‌ನಲ್ಲಿ 700 ರನ್‌ ದಾಟಿದ ಏಕೈಕ ತಂಡ ಇಂಗ್ಲೆಂಡ್ (ಓವಲ್ನಲ್ಲಿ ಭಾರತ ವಿರುದ್ಧ).

ನಾಥನ್ ಲಿಯಾನ್

ನಾಥನ್ ಲಿಯಾನ್

ಆಸ್ಟ್ರೇಲಿಯಾದ ಪ್ರಮುಖ ಬೌಲರ್, ಸ್ಪಿನ್ನರ್ ನಾಥನ್ ಲಿಯಾನ್ ಈ ವರ್ಷದ ಮುಂಚೂಣಿಯ ಬೌಲರ್‌ ಆಗಿ ಕಾಣಿಸಿಕೊಂಡಿದ್ದಾರೆ. ಮಂಗಳವಾರ (ಡಿಸೆಂಬರ್ 18) ಮುಕ್ತಾಯಗೊಂಡ ಪರ್ತ್ ಟೆಸ್ಟ್‌ನಲ್ಲಿ ಆತಿಥೇಯ ಆಸೀಸ್ ಗೆಲುವಿನ ರುವಾರಿ ಇವರೇ. 9 ಟೆಸ್ಟ್‌ಗಳಲ್ಲಿ 32.08ರ ಸರಾಸರಿಯಂತೆ 48 ವಿಕೆಟ್‌ಗಳನ್ನು ಪಡೆದಿದ್ದಾರೆ.

ಕುಲದೀಪ್ ಯಾದವ್

ಕುಲದೀಪ್ ಯಾದವ್

ಭಾರತದ ಅಗ್ರ ಸ್ಥಾನಿ ಬೌಲರ್ ಕುಲದೀಪ್ ಯಾದವ್. ಕೇವಲ 19 ಏಕದಿನ ಪಂದ್ಯಗಳಲ್ಲಿ 45 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಬರೀ 25 ರನ್ನಿಗೆ 6 ವಿಕೆಟ್ ಉರುಳಿಸಿದ ಹಿರಿಮೆಯೂ ಕುಲದೀಪ್ ಅವರದ್ದಾಗಿದೆ. ಈ ಸಾಧನೆಯನ್ನು ಕುಲದೀಪ್ ಇಂಗ್ಲೆಂಡ್ ವಿರುದ್ಧ ತೋರಿಕೊಂಡಿದ್ದರು.

ಕಾಗಿಸೊ ರಬಾಡ

ಕಾಗಿಸೊ ರಬಾಡ

ದಕ್ಷಿಣ ಆಫ್ರಿಕಾ ಪ್ರತಿಭಾನ್ವಿತ ಆಟಗಾರ, ವೇಗಿ ಕಾಗಿಸೊ ರಬಾಡ. ದಕ್ಷಿಣ ಆಫ್ರಿಕಾ ಬಲಿಷ್ಟ ತಂಡವಾಗಿ ಗುರುತಿಸಿಕೊಳ್ಳುವಲ್ಲಿ ರಬಾಡ ಕೂಡ ಪ್ರಭಾವಶಾಲಿಯೆ. ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಆತಿಥೇಯ ಆಫ್ರಿಕಾ ಟೆಸ್ಟ್ ಸರಣಿಯನ್ನು 2-1ರಿಂದ ಜಯಿಸಿತ್ತು. ಈ ಗೆಲುವಿಗೆ ರಬಾಡ ಪ್ರಮುಖ ಕಾರಣರಾಗಿದ್ದರು.

ಯಾಸಿರ್ ಶಾ

ಯಾಸಿರ್ ಶಾ

ಕೇವಲ 33 ಟೆಸ್ಟ್ ಪಂದ್ಯಗಳಲ್ಲಿ 200 ವಿಕೆಟ್ ಸಾಧನೆ ಮೆರೆದವರು ಪಾಕಿಸ್ತಾನದ ಲೆಗ್‌ ಸ್ಪಿನ್ನರ್ ಯಾಸಿರ್ ಶಾ. 200 ವಿಕೆಟ್ ಮೈಲಿಗಲ್ಲನ್ನು ಶಾ ಯುಎಇಯಲ್ಲಿ ನಡೆದಿದ್ದ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಪೂರೈಸಿಕೊಂಡರು. ಈ ವೇಳೆ ಯಾಸಿರ್ ಅವರು 82 ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಆಟಗಾರ ಕ್ಲಾರಿ ಗ್ರಿಮೆಟ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಗ್ರಿಮೆಟ್ ಅವರು 1936ರಲ್ಲಿ 36 ಟೆಸ್ಟ್ ಗಳಲ್ಲಿ 200 ವಿಕೆಟ್ ದಾಖಲೆ ಬರೆದಿದ್ದರು.

ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ

2018ರಲ್ಲಿ ಆಡಿದ 11 ಪಂದ್ಯಗಳಲ್ಲಿ 44 ವಿಕೆಟ್ ಪಡೆದ ಸಾಧನೆಯನ್ನು ಭಾರತದ ಮೊಹಮ್ಮದ್ ಶಮಿ ಹೊಂದಿದ್ದಾರೆ. ಉತ್ತರ ಪ್ರದೇಶದ ಬಲಗೈ ವೇಗಿ ಶಮಿ, ಪರ್ತ್ ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ವೇಳೆ ವೃತ್ತಿ ಜೀವನದ ಅಪರೂಪದ ಸಾಧನೆ ಮೆರೆದರು. ಈ ಪಂದ್ಯದಲ್ಲಿ ಶಮಿ 56 ರನ್ನಿಗೆ 6 ವಿಕೆಟ್ ಉರುಳಿಸಿದರು.

ರಶೀದ್ ಖಾನ್

ರಶೀದ್ ಖಾನ್

ಅಫ್ಘಾನಿಸ್ತಾನದ ಆಕರ್ಷಣೀಯ ಆಟಗಾರ ರಶೀದ್ ಖಾನ್. ಲೆಗ್ ಸ್ಪಿನ್ನರ್ ರಶೀದ್ 2018ರಲ್ಲಿ ಏಕದಿನ ಪಂದ್ಯದಲ್ಲಿ ಮುಂಚೂಣಿಯ ವಿಕೆಟ್ ಸರದಾರನಾಗಿ ಮೆರೆದಿದ್ದಾರೆ. 20 ಏಕದಿನ ಪಂದ್ಯಗಳಲ್ಲಿ ಖಾನ್ ಒಟ್ಟು 48 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಅಲ್ಲದೆ ಕೇವಲ 8 ಟಿ20 ಪಂದ್ಯಗಳಲ್ಲಿ 22 ವಿಕೆಟ್ ಪಡೆದ ಸ್ಟಾರ್ ಬೌಲರ್ ರಶೀದ್.

ದಿಲ್ರುವಾನ್ ಪೆರೆರಾ

ದಿಲ್ರುವಾನ್ ಪೆರೆರಾ

ಟೆಸ್ಟ್ ಕ್ರಿಕೆಟ್ ನಲ್ಲಿ ಹೆಚ್ಚು ವಿಕೆಟ್ ಪಡೆದ ಮುಂಚೂಣಿಯ ಆಟಗಾರನಾಗಿ ಶ್ರೀಲಂಕಾದ ದಿಲ್ರುವಾನ್ ಪೆರೆರಾ ಈ ವರ್ಷ ಗಮನ ಸೆಳೆದಿದ್ದಾರೆ. ಕೇವಲ 10 ಪಂದ್ಯಗಳಿಂದ ಪೆರೆರಾ 48 ವಿಕೆಟ್ ಸಾಧನೆ ಮೆರೆದಿದ್ದಾರೆ. ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ 3 ಟೆಸ್ಟ್ ಪಂದ್ಯಗಳಲ್ಲಿ ದಿಲ್ರುವಾನ್ ಬರೋಬ್ಬರಿ 22 ವಿಕೆಟ್ ಕೆಡವಿದ್ದರು.

Story first published: Tuesday, December 18, 2018, 22:57 [IST]
Other articles published on Dec 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X