ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫ್ಲ್ಯಾಶ್‌ಬ್ಯಾಕ್‌ 2020: 143 ವರ್ಷಗಳಲ್ಲಿ ಮೊದಲ ಬಾರಿಗೆ ನಡೆಯಿತು ಪ್ರೇಕ್ಷಕರಿಲ್ಲದೆ ಟೆಸ್ಟ್ ಪಂದ್ಯ

Flashback 2020: first time in 143 test cricket history test cricket without spectator

2020 ಕ್ರೀಡಾ ಜಗತ್ತಿನ ಪಾಲಿಗೆ ಅತ್ಯಂತ ಕಠಿಣ ವರ್ಷ. ಕೊರೊನಾ ವೈರಸ್‌ನ ಕಾರಣದಿಂದಾಗಿ ಸಾಕಷ್ಟು ಸಂಕಷ್ಟದ ದಿನಗಳನ್ನು ಕ್ರೀಡಾಲೋಕ ಎದುರಿಸಬೇಕಾಯಿತು. ಒಲಿಂಪಿಕ್ಸ್ ಕ್ರಿಕೆಟ್ ವಿಶ್ವಕಪ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಕ್ರೀಡಾಕೂಟ ಗಳು ಮುಂದೂಡಲ್ಪಟ್ಟವು. ಕೆಲವು ರದ್ದಾದವು. ಇನ್ನು ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ವಿಚಿತ್ರ ಪರಿಸ್ಥಿತಿಯನ್ನು ಕಾಣುವಂತಾಯಿತು.

ವಿಶ್ವದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಫುಟ್ಬಾಲ್ ಟೆನ್ನಿಸ್‌ನಂತಾ ಕ್ರೀಡೆಗಳಿಗೆ ಹೋಲಿಸಿದರೆ ಕಡಿಮೆ ದೇಶಗಳಲ್ಲಿ ಕ್ರಿಕೆಟ್ ಆಡುತ್ತಿದ್ದರೂ ಅಭಿಮಾನಿಗಳ ಸಂಖ್ಯೆ ಸಾಕಷ್ಟು ದೊಡ್ಡದಿದೆ. ಆದರೆ 2020 ಅಂತಾರಾಷ್ಟ್ರೀಯ ಕ್ರಿಕೆಟ್‌ನ ಇತಿಹಾಸದ 143 ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರೇಕ್ಷಕರಿಲ್ಲದೆ ಖಾಲಿ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯುವಂತಾಯಿತು.

ಅತ್ಯಧಿಕ ರನ್ ಬಾರಿಸಿದ ಅದೇ ದಿನ ಟೀಮ್ ಇಂಡಿಯಾ ಅತೀ ಕಡಿಮೆ ರನ್!ಅತ್ಯಧಿಕ ರನ್ ಬಾರಿಸಿದ ಅದೇ ದಿನ ಟೀಮ್ ಇಂಡಿಯಾ ಅತೀ ಕಡಿಮೆ ರನ್!

ಕೊರೊನಾ ವೈರಸ್‌ನ ಕಾರಣದಿಂದಾಗಿ ವಿಶ್ವಾದ್ಯಂತ ಪ್ರತಿಯೊಂದು ಚಟುವಟಿಕೆಗಳೂ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಹೀಗಾಗಿ ಕ್ರೀಡಾಕೂಟಗಳು ಕೂಡ ಸುಮಾರು ಮೂರು ತಿಂಗಳಿಗೂ ಅಧಿಕ ಕಾಲ ಸಂಪೂರ್ಣ ತಟಸ್ಥವಾಗಿತ್ತು. ಆದರೆ ಬಳಿಕ ಇಂಗ್ಲೆಂಡ್ ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಕ್ರಿಕೆಟ್ ಪುನರಾರಂಭ ಮಾಡುವ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿತ್ತು.

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯೂ ಇದಕ್ಕೆ ಒಪ್ಪಿಕೊಂಡು ಕೊರೊನಾ ವೈರಸ್‌ನ ಆತಂಕದ ಮಧ್ಯದಲ್ಲಿಯೇ ಸಾಕಷ್ಟು ಮುಂಜಾಗೃಥಾ ಕ್ರಮಗಳೊಂದಿಗೆ ಪ್ರವಾಸ ಕೈಗೊಂಡಿತು. ಮೊದಲ ಬಾರಿಗೆ ಕ್ರಿಕೆಟ್ ಲೋಕದಲ್ಲಿ ಕ್ವಾರಂಟೈನ್, ಬಯೋಸೆಕ್ಯೂರ್ ಬಬಲ್‌ನಂತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಈ ಸರಣಿಯನ್ನು ನಡೆಸುವ ತೀರ್ಮಾನವಾಗಿತ್ತು.

ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಬೇಡದ ದಾಖಲೆ ಬರೆದ ವಿರಾಟ್ ಕೊಹ್ಲಿಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಬೇಡದ ದಾಖಲೆ ಬರೆದ ವಿರಾಟ್ ಕೊಹ್ಲಿ

ಜುಲೈ 8 ರಂದು ಸೌಥಾಂಪ್ಟನ್‌ನ ಏಜಸ್‌ಬೌಲ್ ಕ್ರೀಡಾಂಗಣದಲ್ಲಿ ಕೊರೊನಾವೈರಸ್‌ ಬಳಿಕದ ಮೊದಲ ಅಂತಾರಾಷ್‌ಟರೀಯ ಕ್ರಿಕೆಟ್ ಪಂದ್ಯ ಆರಂಭವಾಗಿತ್ತು. ಆದರೆ ಕೊರೊನಾಭೀತಿಯ ಕಾರಂದಿಂದಾಗಿ ಖಾಲಿ ಮೈದಾನದಲ್ಲಿ ಈ ಟೆಸ್ಟ್ ಪಂದ್ಯ ನಡೆದಿತ್ತು. ಹೀಗಾಗಿ 143 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಇಂತಾ ಸಂದರ್ಭಕ್ಕೆ ಸಾಕ್ಷಿಯಾಯಿತು. ಬಳಿಕ ಅನೇಕ ಕ್ರಕೆಟ್ ಸರಣಿಗಳು ಇದೇ ಮಾದರಿಯಲ್ಲಿ ನಡೆದಿದೆ.

Story first published: Monday, December 21, 2020, 10:14 [IST]
Other articles published on Dec 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X