ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫ್ಲ್ಯಾಶ್‌ಬ್ಯಾಕ್ 2020: ಐಪಿಎಲ್‌ನಲ್ಲಿ ಫ್ಲಾಪ್ ಆದ ವಿಶ್ವಶ್ರೇಷ್ಠ ತಾರೆಯರು

FlashBack 2020: Flop stars of ipl 2020

2020 ಕೊರೊನಾ ವೈರಸ್‌ನ ಕಾರಣದಿಂದಾಗಿ ಬಹುತೇಕ ಕ್ರಿಕೆಟ್‌ ಸರಣಿಗಳು ಮುಂದೂಡಿಕೆಯಾಗಿದೆ, ಹಲವು ಸರಣಿಗಳು ರದ್ದಾಗಿದೆ. ಈ ಮಧ್ಯೆ ಬಹಳ ಕಾಲ ಕಾದ ಬಳಿಕ ಆರಂಭವಾಗಿದ್ದು ಐಪಿಎಲ್ 2020. ಮಾರ್ಚ್‌ ಅಂತ್ಯದಲ್ಲಿ ಆರಂಭವಾಗಬೇಕಿದ್ದ ಈ ಲೀಗ್ ಟೂರ್ನಿ ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಯುಎಇನಲ್ಲಿ ಚಾಲನೆ ಪಡೆದು ಯಶಸ್ವಿಯೂ ಆಯಿತು.

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸಾಕಷ್ಟು ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನಸೆಳೆದಿದ್ದಾರೆ. ಕೆಲ ಆಟಗಾರರಂತು ಭಾರತದ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲು ಕದ ತಟ್ಟುತ್ತಿದ್ದಾರೆ. ಈ ಮಧ್ಯೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸೂಪರ್‌ಸ್ಟಾರ್‌ಗಳು ಎನಸಿಕೊಂಡ ಕೆಲ ಆಟಗಾರರು ಸಂಪೂರ್ಣವಾಗಿ ವೈಫಲ್ಯವನ್ನು ಅನುಭವಿಸಿದ್ದಾರೆ.

ಆಸೀಸ್‌ಗೆ ಮತ್ತೊಂದು ಗಾಯದ ಭೀತಿ, ಮೈದಾನ ತೊರೆದ ಆಲ್ ರೌಂಡರ್ಆಸೀಸ್‌ಗೆ ಮತ್ತೊಂದು ಗಾಯದ ಭೀತಿ, ಮೈದಾನ ತೊರೆದ ಆಲ್ ರೌಂಡರ್

ಆರೋನ್ ಫಿಂಚ್: ಆಸ್ಟ್ರೇಲಿಯಾದ ಆರೋನ್ ಫಿಂಚ್ ಆರ್‌ಸಿಬಿ ತಂಡಕ್ಕೆ ಸೇರಿಕೊಳ್ಳುವಾಗ ಸಾಕಷ್ಟು ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆಗೆ ಪೂರಕ ಬ್ಯಾಟಿಂಗ್ ಫಿಂಚ್ ಬ್ಯಾಟ್‌ನಿಂದ ಹರಿಸುಬರಲಿಲ್ಲ. ಕೆಲ ಪಂದ್ಯಗಳಲ್ಲಿ ಫಿಂಚ್ ಅವರನ್ನು ಪಂದ್ಯದಿಂದ ಹೊರಗೆ ಕೂರಿಸಲಾಯಿತು.

ಆಂಡ್ರೆ ರಸೆಲ್: ವೆಸ್ಟ್ ಇಂಡೀಸ್ ತಂಡದ ಆಲ್‌ರೌಂಡರ್ ಆಂಡ್ರೆ ರಸೆಲ್ ಈ ಬಾರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಸಂಪೂರ್ಭವಾಗಿ ಹಿನ್ನೆಡೆ ಅನುಭವಿಸಿದರು. ಇದು ತಂಡದ ಫಲಿತಾಂಶದ ಮೇಲೂ ಪ್ರಭಾವ ಬೀರಿತು.

ಶೇನ್ ವಾಟ್ಸನ್: ಆಸ್ಟ್ರೇಲಿಯಾದ ಶೇನ್ ವಾಟ್ಸನ್ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಗೆಲುವು ನಿಡುವಂತಾ ಪ್ರದರ್ಶನ ನಿಡುವಲ್ಲಿ ವಿಫಲರಾದರು.

ಭಾರತ vs ಆಸ್ಟ್ರೇಲಿಯಾ: ಟೆಸ್ಟ್‌ಗೆ ರೋಹಿತ್ ಲಭ್ಯತೆ ಇನ್ನೂ ಅನುಮಾನಭಾರತ vs ಆಸ್ಟ್ರೇಲಿಯಾ: ಟೆಸ್ಟ್‌ಗೆ ರೋಹಿತ್ ಲಭ್ಯತೆ ಇನ್ನೂ ಅನುಮಾನ

ಗ್ಲೆನ್ ಮ್ಯಾಕ್ಸ್‌ವೆಲ್: ಗ್ಲೆನ್ ಮ್ಯಾಕ್ಸ್‌ವೆಲ್ ಮೇಲೆ ಪಂಜಾಬ್ ಭಾರೀ ನಿರೀಕ್ಷೆಯಿಟ್ಟುಕೊಂಡಿತ್ತು. ಆದರೆ ಮ್ಯಾಕ್ಸ್‌ವೆಲ್ ಪ್ರದರ್ಶನ ತೀರಾ ಕಳಪೆಯಾಗಿತ್ತು. ಟೂರ್ನಿಯಲ್ಲಿ 13 ಪಂದ್ಯಗಳಲ್ಲಿ 100ರನ್‌ಗಳ ಗಡಿದಾಟಲಷ್ಟೇ ಅವರು ಶಕ್ತರಾದರು. ಇಡೀ ಟೂರ್ನಿಯಲ್ಲಿ ಅವರ ಬ್ಯಾಟ್‌ನಿಮದ ಒಂದೇ ಒಂದು ಅರ್ಧ ಶತಕ ದಾಖಲಾಗಲಿಲ್ಲ.

ಡೇಲ್ ಸ್ಟೇಯ್ನ್: ಆರ್‌ಸಿಬಿ ತಂಡದ ಪರವಾಗಿ ಕಣಕ್ಕಿಳಿದ ಡೇಲ್‌ಸ್ಟೇಯ್ನ್ ಐಪಿಎಲ್‌ನಲ್ಲಿ ಕಳೆಕುಂದಿದಂತೆ ಕಂಡು ಬಂದರು. ಅನುಭವಿ ಸ್ಟೇಯ್ನ್ ಬೌಲಿಂಗ್ ದಾಳಿಯಿಂದ ಆರ್‌ಸಿಬಿಗೆ ಹೆಚ್ಚಿನ ಉಪಯೋಗವೇನೂ ಆಗಲಿಲ್ಲ.

Story first published: Monday, December 14, 2020, 11:08 [IST]
Other articles published on Dec 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X