ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟ್ವಿಟರ್‌ನಲ್ಲಿ ಹೆಚ್ಚು ಟ್ರೆಂಡ್ ಆದ ಸ್ಪೋರ್ಟ್ಸ್‌ ಹ್ಯಾಷ್‌ಟ್ಯಾಗ್‌ಗಳಿವು

Flashback 2020: Most tweeted sports hash tags in 2020

ಬೆಂಗಳೂರು: 2020ರ ವರ್ಷದ ಕೊನೇ ಕ್ಷಣದತ್ತ ನಾವು ಮುಂದಡಿಯುಡುತ್ತಿದ್ದೇವೆ. ಮುಂದಿನ ತಿಂಗಳಿನಿಂದ ಹೊಸ ವರ್ಷ, ಹೊಸ ಕನಸುಗಳು ಆರಂಭಗೊಳ್ಳಲಿದೆ. 2020ರ ಇಸವಿ ಮುಗಿದು ಹೋಗುವ ಮುನ್ನ 2020ರ ಕ್ರೀಡಾ ಪ್ರಮುಖ ಕ್ಷಣಗಳನ್ನು ಕಣ್ಣ ಮುಂದೆ ತಂದುಕೊಳ್ಳಬೇಕಿದೆ. ಹಾಗೆ ನೋಡಿದರೆ ಕ್ರೀಡಾ ಜಗತ್ತಿನ ಪಾಲಿಗೆ 2020ರ ಇಸವಿ ಅಂಥದ್ದೇನೋ ಖುಷಿ ನೀಡಿಲ್ಲ. ಈ ವರ್ಷ ಖುಷಿಗಿಂತ ಬೇಜಾರಿನ ಸಂಗತಿಗಳೇ ಹೆಚ್ಚಿದ್ದವು.

ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್‌ರ 'ಬ್ಯಾಗಿ ಗ್ರೀನ್' ಕ್ಯಾಪ್ ಹರಾಜಿಗೆಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್‌ರ 'ಬ್ಯಾಗಿ ಗ್ರೀನ್' ಕ್ಯಾಪ್ ಹರಾಜಿಗೆ

2020 ವರ್ಷ ಕ್ರೀಡಾ ಲೋಕದ ಪಾಲಿಗೆ ಒಂದರ್ಥದಲ್ಲಿ ಕರಾಳ ವರ್ಷವಿದ್ದಂತೆಯೇ. ಯಾಕೆಂದರೆ ಮಾರಕ ಕೊರೊನಾ ವೈರಸ್ ಕಾರಣದಿಂದಾಗಿ 2020ರ ಇಡೀ ಕ್ರೀಡಾ ಕ್ಯಾಲೆಂಡರ್ ಬುಡ ಮೇಲಾಗಿತ್ತು. ಬಹಳಷ್ಟು ಪ್ರಮುಖ ಕ್ರೀಡಾಕೂಟಗಳು ರದ್ದಾದವು, ಮುಂದೂಡಲ್ಪಟ್ಟವು.

ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದಲ್ಲೂ ಅವಕಾಶ ಪಡೆಯಲಿ: ಮೊಹಮ್ಮದ್ ಕೈಫ್ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದಲ್ಲೂ ಅವಕಾಶ ಪಡೆಯಲಿ: ಮೊಹಮ್ಮದ್ ಕೈಫ್

ಕೊರೊನಾ ಭೀತಿಗೆ ಕ್ರೀಡಾ ಸ್ಪರ್ಧೆಗಳು ರದ್ದಾಗುತ್ತಿರುವುದು ಇನ್ನೂ ನಿಂತಿಲ್ಲ. ಈಗಲೂ ಒಂದಿಲ್ಲೊಂದು ಕ್ರೀಡಾಕೂಟಗಳು ಸೋಂಕಿನ ಕಾರಣಕ್ಕೆ ರದ್ದಾಗುತ್ತಲೇ ಇವೆ.

ಸಾಮಾನ್ಯ ಸ್ಥಿತಿಯತ್ತ ಕ್ರೀಡಾಲೋಕ

ಸಾಮಾನ್ಯ ಸ್ಥಿತಿಯತ್ತ ಕ್ರೀಡಾಲೋಕ

ಹಾಗಂತ ಕೊರೊನಾ ಕಾಟದ ಮಧ್ಯೆಯೂ ಒಂದಿಷ್ಟು ಕ್ರೀಡಾಕೂಟಗಳು ನಡೆದಿವೆ. ವಿದೇಶಗಳಲ್ಲಿ ಫುಟ್ಬಾಲ್ ಲೀಗ್‌ಗಳು ಮೊದಲು ಆರಂಭಗೊಂಡವು. ಆ ಬಳಿಕ ಕ್ರಿಕೆಟ್ ಪ್ರವಾಸ ಸರಣಿಗಳು, ಐಪಿಎಲ್ ಟೂರ್ನಿ ಕ್ರೀಡಾ ಪ್ರೇಮಿಗಳನ್ನು ರಂಜಿಸಿದ್ದವು. ಈಗ ಮತ್ತೆ ಕ್ರೀಡಾಕೂಟಗಳು ಸಾಮಾನ್ಯ ಸ್ಥಿತಿಯತ್ತ ಮುಖ ಮಾಡಿವೆ. ಹೀಗಾಗಿ ಕ್ರೀಡಾ ಸಂಗತಿಗಳ ಭರಾಟೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿಯೇ ಇದೆ.

ಹೆಚ್ಚು ಬಳಕೆಯಾದ ಹ್ಯಾಷ್‌ಟ್ಯಾಗ್‌ಗಳು

ಹೆಚ್ಚು ಬಳಕೆಯಾದ ಹ್ಯಾಷ್‌ಟ್ಯಾಗ್‌ಗಳು

ಹಾಗಾದರೆ 2020ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಓಡಾಡಿದ ಸ್ಪೋರ್ಟ್ಸ್ ಹ್ಯಾಷ್‌ ಟ್ಯಾಗ್‌ಗಳು ಯಾವುವು ಗೊತ್ತ? #IPL2020 #WhistlePodu ಮತ್ತು #TeamIndia. ಈ ಟ್ಯಾಗ್‌ಗಳಲ್ಲಿ #IPL2020 ಮುಂಚೂಣಿಯಲ್ಲಿದೆ. ಇನ್ನುಳಿದವು ಅನಂತರದ ಸ್ಥಾನಗಳಲ್ಲಿವೆ. ಟ್ವಿಟರ್ ಇಂಡಿಯಾ ಈ ಮಾಹಿತಿ ನೀಡಿದೆ. ಕ್ರಿಕೆಟ್‌ ಸಂಬಂಧಿ ಹ್ಯಾಷ್ ಟ್ಯಾಗ್‌ಗಳೇ ಹೆಚ್ಚು ಟ್ರೆಂಡ್ ಆಗಿವೆ ಅನ್ನೋದು ವಿಶೇಷ.

ಹೆಚ್ಚು ಬಳಕೆಯಾಗಿದ್ದು ಯಾಕೆ

ಹೆಚ್ಚು ಬಳಕೆಯಾಗಿದ್ದು ಯಾಕೆ

ಹೆಚ್ಚು ಬಳಕೆಯಾದ ಹ್ಯಾಷ್‌ ಟ್ಯಾಗ್‌ಗಳಲ್ಲಿ ಐಪಿಎಲ್ ಮೊದಲ ಸ್ಥಾನದಲ್ಲಿದೆ ಯಾಕೆಂದರೆ ಕೊರೊನಾ ಕಾರಣ ಐಪಿಎಲ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಸಲಾಗಿತ್ತು. ಯುಎಇಯಲ್ಲಿ ಸಂಪೂರ್ಣವಾಗಿ ಐಪಿಎಲ್ ಟೂರ್ನಿ ನಡೆಸಿದ್ದು ಇದೇ ಮೊದಲು. ಅಲ್ಲದೆ, ಕೊರೊನಾದಿಂದಾಗಿ ಕ್ರಿಕೆಟ್, ಕ್ರೀಡಾಸ್ಪರ್ಧೆಗಳು ಇಲ್ಲದೆ ಬೇಜಾರಾಗಿದ್ದ ಕ್ರೀಡಾಪ್ರೇಮಿಗಳು ಐಪಿಎಲ್ ಪಂದ್ಯಗಳತ್ತ ಹೆಚ್ಚು ಮುಖಮಾಡಿದ್ದರು. ಇನ್ನು ಧೋನಿ ನಾಯಕತ್ವದ ಸಿಎಸ್‌ಕೆಯ 'ವಿಶಿಲ್ ಪೋಡು' ಮೊದಲಿನಿಂದಲೂ ಹೆಚ್ಚು ಟ್ರೆಂಡ್‌ ಆಗುತ್ತಿತ್ತು. 'ಟೀಮ್ ಇಂಡಿಯಾ' ಕೂಡ ಯಾವತ್ತಿಗೂ ಟ್ರೆಂಡಿಂಗ್ ಹ್ಯಾಷ್‌ಟ್ಯಾಗ್.

Story first published: Tuesday, December 8, 2020, 18:46 [IST]
Other articles published on Dec 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X