ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Flashback 2021: ಈ ವರ್ಷ ಟೀಮ್ ಇಂಡಿಯಾ ನಿರ್ಮಿಸಿರುವ 5 ದಾಖಲೆಗಳ ಬಗ್ಗೆ ತಿಳಿಯಲೇಬೇಕು

Flashback 2021: 5 records created by team India in this year

2021, ಟೀಮ್ ಇಂಡಿಯಾಗೆ ಸಿಹಿಸುದ್ದಿಗಳಿಗಿಂತ ಕಹಿ ಸುದ್ದಿಯೇ ತುಸು ಹೆಚ್ಚಾಗಿ ಸಿಕ್ಕಿದ ವರ್ಷ ಎಂದು ಹೇಳಬಹುದು. ಈ ವರ್ಷ ನಡೆದಂತಹ ಹಲವು ಸರಣಿಗಳಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದ್ದರೂ ಸಹ ಇದೇ ವರ್ಷ ನಡೆದ 2 ಪ್ರತಿಷ್ಠಿತ ಐಸಿಸಿ ಟೂರ್ನಿಗಳಲ್ಲಿ ಸೋತ ಕಹಿ ಅನುಭವವನ್ನು ಕೂಡ ಟೀಮ್ ಇಂಡಿಯಾ ಹೊಂದಿದೆ. ಹೌದು, ಈ ವರ್ಷ ಮೊದಲಿಗೆ ನಡೆದ ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಟೀಮ್ ಇಂಡಿಯಾ ಟ್ರೋಫಿ ಎತ್ತಿ ಹಿಡಿಯುವ ಅವಕಾಶವನ್ನು ಅಂತಿಮ ಕ್ಷಣದಲ್ಲಿ ಕೈ ತಪ್ಪಿಸಿಕೊಂಡಿತು. ನಂತರ ಇತ್ತೀಚೆಗಷ್ಟೇ ಯುಎಇಯಲ್ಲಿ ಮುಕ್ತಾಯವಾದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲುವುದರ ಮೂಲಕ ಸೆಮಿಫೈನಲ್ ಹಂತವನ್ನು ಕೂಡ ಪ್ರವೇಶಿಸಲಾಗದ ಟೀಮ್ ಇಂಡಿಯಾ ಟೂರ್ನಿಯಿಂದ ಹೊರಬಿದ್ದು ಮುಖಭಂಗ ಅನುಭವಿಸಿತ್ತು.

ಐಪಿಎಲ್ 2022: ಐಪಿಎಲ್ ತಂಡವೊಂದರ ಕೋಚ್ ಆಗುವುದರ ಬಗ್ಗೆ ಸ್ಪಷ್ಟನೆ ನೀಡಿದ ರವಿಶಾಸ್ತ್ರಿಐಪಿಎಲ್ 2022: ಐಪಿಎಲ್ ತಂಡವೊಂದರ ಕೋಚ್ ಆಗುವುದರ ಬಗ್ಗೆ ಸ್ಪಷ್ಟನೆ ನೀಡಿದ ರವಿಶಾಸ್ತ್ರಿ

ಇದಾದ ನಂತರ ಭಾರತ ಏಕದಿನ ಮತ್ತು ಟಿ ಟ್ವೆಂಟಿ ತಂಡದ ನಾಯಕತ್ವದ ವಿಚಾರವಾಗಿ ಬಿಸಿಸಿಐ ಮತ್ತು ವಿರಾಟ್ ಕೊಹ್ಲಿ ನಡುವೆ ನಡೆದ ಕಿತ್ತಾಟ ಟೀಮ್ ಇಂಡಿಯಾಗೆ ಈ ವರ್ಷ ಹಿನ್ನಡೆಯನ್ನುಂಟುಮಾಡಿದ ಮತ್ತೊಂದು ಅಂಶ ಎಂದೇ ಹೇಳಬಹುದು. ಇಷ್ಟೆಲ್ಲಾ ಹಿನ್ನೆಡೆಗಳೊಂದಿಗೆ ಟೀಮ್ ಇಂಡಿಯಾ ಈ ವರ್ಷ ಹಲವು ದಾಖಲೆಗಳನ್ನು ಕೂಡಾ ನಿರ್ಮಿಸಿದ್ದು, ಅವುಗಳ ವಿವರ ಈ ಕೆಳಕಂಡಂತಿದೆ.

1. ಆಸ್ಟ್ರೇಲಿಯಾ ನೆಲದಲ್ಲಿ 2 ಬಾರಿ ಟೆಸ್ಟ್ ಸರಣಿ ಗೆದ್ದ ಚೊಚ್ಚಲ ಏಷ್ಯಾ ತಂಡ

1. ಆಸ್ಟ್ರೇಲಿಯಾ ನೆಲದಲ್ಲಿ 2 ಬಾರಿ ಟೆಸ್ಟ್ ಸರಣಿ ಗೆದ್ದ ಚೊಚ್ಚಲ ಏಷ್ಯಾ ತಂಡ

ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿದ್ದ ಟೀಮ್ ಇಂಡಿಯಾ ಈ ವರ್ಷದ ಆರಂಭದಲ್ಲಿ ಗಬ್ಬಾದಲ್ಲಿ ನಡೆದ ಬಹುದೊಡ್ಡ ಸೆಣಸಾಟವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾದ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿತ್ತು. ಮೊದಲನೇ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಟೀಂ ಇಂಡಿಯಾ ನಂತರದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿಯೂ ಸರಣಿಯನ್ನು ಗೆದ್ದು ಬೀಗಿತು. ಅಜಿಂಕ್ಯ ರಹಾನೆ ಕೊಹ್ಲಿ ಅನುಪಸ್ಥಿತಿಯಲ್ಲಿ ಅಚ್ಚುಕಟ್ಟಾಗಿ ನಾಯಕತ್ವವನ್ನು ನಿಭಾಯಿಸಿದರೆ, ಗಬ್ಬಾ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಹೀರೋ ಆಗಿದ್ದನ್ನು ಮಾತ್ರ ಎಂದಿಗೂ ಮರೆಯಲು ಸಾಧ್ಯವಿಲ್ಲ. ಹೀಗೆ ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಗೆಲ್ಲುವ ಮೂಲಕ 2ನೇ ಬಾರಿ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿತು. ಈ ಮೂಲಕ ಆಸ್ಟ್ರೇಲಿಯಾ ಮಣ್ಣಿನಲ್ಲಿ 2 ಬಾರಿ ಟೆಸ್ಟ್ ಸರಣಿಯನ್ನು ಗೆದ್ದಿರುವ ಏಕೈಕ ಏಷ್ಯಾ ತಂಡ ಎಂಬ ದಾಖಲೆಯನ್ನು ಭಾರತ ಬರೆದಿದೆ.

2. ಎಲ್ಲಾ ಮಾದರಿಗಳಲ್ಲಿಯೂ 3000 ರನ್ ಪೂರೈಸಿದ ಎರಡನೇ ಆಟಗಾರ ಎಂಬ ದಾಖಲೆ ಬರೆದ ರೋಹಿತ್ ಶರ್ಮಾ

2. ಎಲ್ಲಾ ಮಾದರಿಗಳಲ್ಲಿಯೂ 3000 ರನ್ ಪೂರೈಸಿದ ಎರಡನೇ ಆಟಗಾರ ಎಂಬ ದಾಖಲೆ ಬರೆದ ರೋಹಿತ್ ಶರ್ಮಾ

ಏಕದಿನ, ಟಿ ಟ್ವೆಂಟಿ ಮತ್ತು ಟೆಸ್ಟ್ ಹೀಗೆ ಎಲ್ಲಾ ಮಾದರಿಯ ಕ್ರಿಕೆಟ್‍ಗಳಲ್ಲಿಯೂ 3000 ರನ್ ಗಡಿ ದಾಟಿದ ಸಾಧನೆಯನ್ನು ಮೊದಲು ವಿರಾಟ್ ಕೊಹ್ಲಿ ಮಾಡಿದರು. ಅದಾದ ನಂತರ ಈ ವರ್ಷ ಭಾರತ ಆಗಸ್ಟ್ ತಿಂಗಳಿನಲ್ಲಿ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದಾಗ 3000 ಟೆಸ್ಟ್ ರನ್ ಪೂರೈಸಿದ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ನಂತರ ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿಯೂ 3000 ರನ್ ಪೂರೈಸಿದ ಪ್ರಪಂಚದ ದ್ವಿತೀಯ ಆಟಗಾರ ಎಂಬ ದಾಖಲೆಯನ್ನು ಬರೆದರು.

3. ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು 50+ ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದ ರೋಹಿತ್ ಶರ್ಮಾ

3. ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು 50+ ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಈ ವರ್ಷ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಹೌದು, ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ 29 ಬಾರಿ 50+ ಬಾರಿಸಿದ್ದ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದರು. ಆದರೆ ಈ ವರ್ಷ ತಮ್ಮ 30ನೇ ಟಿ ಟ್ವೆಂಟಿ 50+ ರನ್ ಬಾರಿಸಿದ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಈ ನೂತನ ದಾಖಲೆಯನ್ನು ಬರೆದರು.

4. ಹರ್ಭಜನ್ ಸಿಂಗ್ ಟೆಸ್ಟ್ ವಿಕೆಟ್ ದಾಖಲೆ ಅಳಿಸಿಹಾಕಿದ ರವಿಚಂದ್ರನ್ ಅಶ್ವಿನ್

4. ಹರ್ಭಜನ್ ಸಿಂಗ್ ಟೆಸ್ಟ್ ವಿಕೆಟ್ ದಾಖಲೆ ಅಳಿಸಿಹಾಕಿದ ರವಿಚಂದ್ರನ್ ಅಶ್ವಿನ್

ಇತ್ತೀಚಿಗಷ್ಟೇ ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಹರ್ಭಜನ್ ಸಿಂಗ್ ಅವರ ಜೀವಮಾನ ಟೆಸ್ಟ್ ವಿಕೆಟ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ತಮ್ಮ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಹರ್ಭಜನ್ ಸಿಂಗ್ 417 ವಿಕೆಟ್ ಪಡೆದುಕೊಂಡಿದ್ದರೆ ರವಿಚಂದ್ರನ್ ಅಶ್ವಿನ್ ಸದ್ಯಕ್ಕೆ 427 ವಿಕೆಟ್ ಪಡೆದಿದ್ದಾರೆ.

Sports Flashback 2021 Episode 03 | Top 5 best moments | Oneindia Kannada
5. ವಿನೂತನ ದಾಖಲೆ ಬರೆದ ಅಕ್ಷರ್ ಪಟೇಲ್

5. ವಿನೂತನ ದಾಖಲೆ ಬರೆದ ಅಕ್ಷರ್ ಪಟೇಲ್

ಈ ವರ್ಷ ಎಲ್ಲರೂ ಆಶ್ಚರ್ಯಕ್ಕೊಳಗಾಗುವಂತಹ ಟೆಸ್ಟ್ ಕ್ರಿಕೆಟ್‌ ಪ್ರದರ್ಶನವನ್ನು ನೀಡಿದ ಬೌಲರ್ ಅಕ್ಷರ್ ಪಟೇಲ್ ಎಂದರೆ ತಪ್ಪಾಗಲಾರದು. ಏಕೆಂದರೆ ಆಡಿದ ಬಹುತೇಕ ಎಲ್ಲಾ ಪಂದ್ಯಗಳಲ್ಲಿಯೂ 5 ವಿಕೆಟ್ ಗೊಂಚಲು ಪಡೆಯುವುದರ ಮೂಲಕ ಮಿಂಚಿದ ಅಕ್ಷರ್ ಪಟೇಲ್ ವಿನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಹೌದು, ತನ್ನ ಮೊದಲ 5 ಟೆಸ್ಟ್ ಪಂದ್ಯಗಳು ಮುಗಿದ ನಂತರ ಅತಿಹೆಚ್ಚು 5 ವಿಕೆಟ್ ಗೊಂಚಲು ಪಡೆದ ಬೌಲರ್ ಎಂಬ ದಾಖಲೆಯನ್ನು ಅಕ್ಷರ್ ಪಟೇಲ್ ನಿರ್ಮಿಸಿದ್ದಾರೆ.

Story first published: Friday, December 24, 2021, 17:05 [IST]
Other articles published on Dec 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X