ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Year End 2021: ಈ ವರ್ಷ ಅತಿ ಹೆಚ್ಚು ಟಿ20 ಪಂದ್ಯ ಗೆದ್ದ ತಂಡಗಳು (ಸರಾಸರಿ)

Pakistan

ಈ ವರ್ಷ (2021) ಎರಡು ಪ್ರಮುಖ ಐಸಿಸಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು. ಅವುಗಳಲ್ಲಿ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ICC ಟಿ20 ವಿಶ್ವಕಪ್ ಸೇರಿವೆ. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ಜಯಗಳಿಸಿದ್ರೆ, ಐಸಿಸಿ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿತು. ಇನ್ನೂ ಗೆಲುವಿನ ಫೇವರಿಟ್ ಆಗಿದ್ದ ನ್ಯೂಜಿಲೆಂಡ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

2021ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಟ್ರೋಫಿ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಆದರೆ, ಭಾರತ ತಂಡದ ಆಟಗಾರರು ಚುಟುಕು ಟೂರ್ನಿಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಲೀಗ್ ಹಂತದಲ್ಲೇ ಭಾರತ ಹೊರಬರುವ ಮೂಲಕ ಎಲ್ಲರಿಗೂ ಆಶ್ಚರ್ಯ ಮೂಡಿಸಿತು. ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತು.

ವಿವೊ ಪ್ರೊ ಕಬ್ಬಡ್ಡಿ ಲೀಗ್ ಸೀಸನ್ 8ಕ್ಕೆ ನಾಳೆ ಚಾಲನೆ: ಬೆಂಗಳೂರು ಬುಲ್ಸ್‌ v/s ಯು ಮುಂಬಾ ಫೈಟ್ವಿವೊ ಪ್ರೊ ಕಬ್ಬಡ್ಡಿ ಲೀಗ್ ಸೀಸನ್ 8ಕ್ಕೆ ನಾಳೆ ಚಾಲನೆ: ಬೆಂಗಳೂರು ಬುಲ್ಸ್‌ v/s ಯು ಮುಂಬಾ ಫೈಟ್

ಚೊಚ್ಚಲ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾದ ವಿಶೇಷವೆಂದರೆ 2021ರಲ್ಲಿ ಅತಿ ಹೆಚ್ಚು ಟಿ20 ಪಂದ್ಯಗಳನ್ನ ಗೆದ್ದ ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ 6ನೇ ಸ್ಥಾನದಲ್ಲಿದೆ. ಇಷ್ಟಾದರೂ ಕಾಂಗರೂ ರಾಷ್ಟ್ರವೇ ಟಿ20 ವಿಶ್ವಕಪ್ ಗೆದ್ದಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

2021 ರಲ್ಲಿ ಹೆಚ್ಚು T20 ಪಂದ್ಯ ಗೆದ್ದ ತಂಡ (ಗೆಲುವಿನ ಸರಾಸರಿ)
ಪಾಕಿಸ್ತಾನ: 77%
ದಕ್ಷಿಣ ಆಫ್ರಿಕಾ: 65%
ಇಂಗ್ಲೆಂಡ್: 64%
ಭಾರತ: 62.5%
ನ್ಯೂಜಿಲೆಂಡ್: 56.5%
ಆಸ್ಟ್ರೇಲಿಯಾ: 45%

ಅಗ್ರ 6 ತಂಡಗಳು ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಒಳಗೊಂಡಿತ್ತು. 2021ರಲ್ಲಿ ಪಾಕಿಸ್ತಾನ ಒಟ್ಟು 29 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಬರೋಬ್ಬರಿ 20 ಪಂದ್ಯಗಳನ್ನು ಗೆದ್ದು ಬೀಗಿದೆ. ಈ ಮೂಲಕ ಪಾಕಿಸ್ತಾನವು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ಪಂದ್ಯ ಗೆದ್ದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ತನ್ನದೇ ಆದ ರೆಕಾರ್ಡ್‌ ಅನ್ನು ಪಾಕಿಸ್ತಾನ ಬ್ರೇಕ್ ಮಾಡಿದೆ.

29 ಪಂದ್ಯಗಳಲ್ಲಿ ಕೇವಲ ಆರು ಪಂದ್ಯ ಸೋತಿರುವ ಪಾಕ್‌ನ ರಿಸಲ್ಟ್‌ 3 ಪಂದ್ಯಗಳು ಡ್ರಾ ಆಗಿವೆ. ಉಳಿದ 20 ಪಂದ್ಯ ಗೆದ್ದ ಪರಿಣಾಮ ಗೆಲುವಿನ ಸರಾಸರಿ ಶೇ.77ರಷ್ಟಿದೆ.

South Africa ನೆಲದಲ್ಲಿ ಮೊದಲ ಬಾರಿಗೆ ಗೆದ್ದರೆ Kohliಗೆ ನೆಮ್ಮದಿ | Oneindia Kannada

ಇಂಗ್ಲೆಂಡ್ ತಂಡ ಒಟ್ಟು 17 ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ ಅವರು 11 ಪಂದ್ಯಗಳನ್ನು ಗೆದ್ದಿದ್ದಾರೆ. 6 ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದಾರೆ ಈ ಮೂಲಕ ಗೆಲುವಿನ ಸರಾಸರಿ ಶೇಕಡಾ 64ರಷ್ಟಿದೆ. ಇನ್ನು ಭಾರತದ ಗೆಲುವಿನ ಸರಾಸರಿ 62.5% ರಷ್ಟಿದ್ದು, ನ್ಯೂಜಿಲೆಂಡ್ 56.5% , ಟಿ20 ಟ್ರೋಫಿ ಗೆದ್ದ ಆಸ್ಟ್ರೇಲಿಯಾದ ಗೆಲುವಿನ ಸರಾಸರಿ ಕೇವಲ ಶೇಕಡಾ 45ರಷ್ಟಿದೆ. ಆದ್ರೂ ಆಸ್ಟ್ರೇಲಿಯಾ ಈ ಬಾರಿಯ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ.

Story first published: Wednesday, December 22, 2021, 10:08 [IST]
Other articles published on Dec 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X