ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಪರ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಾಗಿ ವರ್ಷ ಅಂತ್ಯಗೊಳಿಸಿದ ಅಶ್ವಿನ್, ರೋಹಿತ್

Flashback 2021: R Ashwin and Rohit Sharma are team Indias top performers of test cricket

2021 ಕ್ಯಾಲೆಂಡರ್ ವರ್ಷ ಅಂತ್ಯವಾಗುತ್ತಿದೆ. ಈ ವರ್ಷ ಕ್ರೀಡೆಯಾಗಿ ಕ್ರಿಕೆಟ್‌ನ ಎಲ್ಲಾ ಮಾದರಿಯಲ್ಲಿಯೂ ಸಾಕಷ್ಟು ಸ್ಮರಣೀಯ ಕ್ಷಣಗಳು ಆಟಗಾರರು ಹಾಗೂ ಅಭಿಮಾನಿಗಳಲ್ಲಿ ಅಚ್ಚಾಗಿದೆ. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಈ ವರ್ಷ ಟೆಸ್ಟ್ ಕ್ರಿಕೆಟ್ ಅತಿ ಹೆಚ್ಚು ಪ್ರಮಾಣದಲ್ಲಿ ಅತ್ಯುತ್ತಮ ಕ್ಷಣಗಳನ್ನು ನೀಡಿದೆ. ಭಾರತ ತಂಡ ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆಯ ಸುದೀರ್ಘ ಕಾಲ ನೆನಪಿನಲ್ಲಿಟ್ಟುಕೊಳ್ಳುವಂತಿದೆ.

ಈ ವರ್ಷ ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಸಾಧಿಸಿದ ಐತಿಹಾಸಿಕ ವಿಜಯದೊಂದಿಗೆ ಆರಂಭವಾಗಿತ್ತು ಭಾರತದ ಟೆಸ್ಟ್ ಗೆಲುವಿನ ಯಾತ್ರೆ. ನಂತರ ಲಾರ್ಡ್ಸ್ ಮೈದಾನದಲ್ಲಿಯೂ ಭಾರತ ಸ್ಮರಣೀಯ ಗೆಲುವು ಸಾಧಿಸಿ ಮಿಂಚಿತ್ತು. ಈಗ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್‌ನಲ್ಲಿ ನಡೆದ ಪಂದ್ಯದಲ್ಲಿಯೂ ಭಾರತ ಭರ್ಜರಿ ಗೆಲುವಿನೊಂದಿಗೆ ಈ ಕ್ಯಾಲೆಂಡರ್ ವರ್ಷವನ್ನು ಅದ್ಭುತವಾಗಿ ಅಂತ್ಯಗೊಳಿಸಿದೆ ಭಾರತ ತಂಡ. ಈ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದ್ದು ಮಾತ್ರವೇ ಭಾರತ ಟೆಸ್ಟ್ ಮಾದರಿಯಲ್ಲಿ ಕಂಡ ದೊಡ್ಡ ಹಿನ್ನೆಡೆಯಾಗಿದೆ.

Ind vs SA Test: ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು, ದಾಖಲೆ ಬರೆದ ಟೀಂ ಇಂಡಿಯಾInd vs SA Test: ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು, ದಾಖಲೆ ಬರೆದ ಟೀಂ ಇಂಡಿಯಾ

ಇನ್ನು ಈ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಇಬ್ಬರು ಆಟಗಾರರು ಎಂದರೆ ಅದು ಆರ್ ಅಶ್ವಿನ್ ಹಾಗೂ ರೋಹಿತ್ ಶರ್ಮಾ. ಆರ್ ಅಶ್ವಿನ್ ಬೌಲಿಂಗ್‌ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಅನೇಕ ಸಂದರ್ಭಗಳಲ್ಲಿ ತಂಡಕ್ಕೆ ಗಮನಾರ್ಹ ಕೊಡುಗೆ ನೀಡಿ ಮಿಂಚಿದ್ದಾರೆ.

ಆಲ್‌ರೌಂಡರ್ ಆಟ ನೀಡಿದ ಅಶ್ವಿನ್: ಟೀಮ್ ಇಂಡಿಯಾ 2021ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರಲ್ಲಿ ಪ್ರಮುಖ ಕ್ರಿಕೆಟಿಗ ಎಂಬುದರಲ್ಲಿ ಅನುಮಾನವಿಲ್ಲ. ಅವರು ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ನೀಡಿದ ಪ್ರದರ್ಶನಗಳು ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಎತ್ತರಕ್ಕೆ ಏರಲು ಕಾರಣವಾಯಿತು. ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡದ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನಿಡಿದ ಆರ್ ಅಶ್ವಿನ್ ಎರಡು ಸರಣಿಯಲ್ಲಿಯೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಆದರೆ ಅಶ್ವಿನ್ ಅವರ ಅದ್ಭುತ ಪ್ರದರ್ಶನ ಈಗಾಗಲೇ ಹೇಳಿದಂತೆ ಕೇವಲ ಬೌಲಿಂಗ್‌ಗೆ ಮಾತ್ರವೇ ಸೀಮಿತವಾಗಿರಲಿಲ್ಲ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಅವರಲ್ಲಿನ ಸಂಪೂರ್ಣ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶನಗೊಂಡಿತ್ತು. ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಆರ್ ಅಶ್ವಿನ್ ಪಾತ್ರ ಬಹಳ ಮುಖ್ಯವಾಗಿತ್ತು. ಅಶ್ವಿನ್ ಬ್ಯಾಟಿಂಗ್ ಮತ್ತೊಮ್ಮೆ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಹೊರಹೊಮ್ಮಿತ್ತು. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಅಶ್ವಿನ್ ಭರ್ಜರಿ ಶತಕ ಸಿಡಿಸಿದ್ದರು.

WTC 2021-23: ಸೆಂಚುರಿಯನ್ ಟೆಸ್ಟ್ ಗೆದ್ದ ನಂತರವೂ ಅಂಕಪಟ್ಟಿಯಲ್ಲಿ ಏರಿಕೆ ಕಾಣದ ಭಾರತWTC 2021-23: ಸೆಂಚುರಿಯನ್ ಟೆಸ್ಟ್ ಗೆದ್ದ ನಂತರವೂ ಅಂಕಪಟ್ಟಿಯಲ್ಲಿ ಏರಿಕೆ ಕಾಣದ ಭಾರತ

ವೀರಾವೇಶವು ಚೆಂಡಿಗೆ ಸೀಮಿತವಾಗಿರಲಿಲ್ಲ, ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಅವರ ದೃಢತೆ ಮತ್ತು ದೃಢತೆ ಸಂಪೂರ್ಣ ಪ್ರದರ್ಶನಗೊಂಡಿತು, ಅಲ್ಲಿ ಅವರು ಗಾಯಗೊಂಡ ಬೆನ್ನಿನ ಹೊರತಾಗಿಯೂ ಭಾರತಕ್ಕೆ ಪಂದ್ಯವನ್ನು ಉಳಿಸಿದರು. ಅವರು ಇಂಗ್ಲೆಂಡ್ ವಿರುದ್ಧ ಅದ್ಭುತ ಶತಕವನ್ನು ಗಳಿಸಿದ್ದರಿಂದ ಅವರ ಬ್ಯಾಟಿಂಗ್ ಶೋಷಣೆಗಳು ಚೆನ್ನೈನಲ್ಲಿ ಮತ್ತೆ ಪ್ರದರ್ಶನಗೊಂಡವು.

ಈ ಅದ್ಭುತ ಪ್ರದರ್ಶನದ ಹೊರತಾಗಿಯೂ ಆರ್ ಅಶ್ವಿನ್ ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ ನಾಲ್ಕು ಪಂದ್ಯಗಳಿಂದಲೂ ಅಶ್ವಿನ್ ಹೊರಗುಳಿದಿದ್ದರು. ಹಾಗಿದ್ದರೂ 2021ರಲ್ಲಿ ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ ಆರ್ ಅಶ್ವಿನ್. ಈ ವರ್ಷ ಆರ್ ಅಶ್ವಿನ್ 9 ಟಸ್ಟ್ ಪಂದ್ಯಗಳನ್ನು ಆಡಿದ್ದು 54 ವಿಕೆಟ್ ಪಡೆದುಕೊಂಡಿದ್ದಾರೆ. ನಂತರ 9 ಟೆಸ್ಟ್‌ಗಳಲ್ಲಿ 47 ವಿಕೆಟ್‌ಗಳನ್ನು ಪಡೆದಿರುವ ಪಾಕಿಸ್ತಾನದ ಯುವ ವೇಗಿ ಸೀಮರ್ ಶಾಹೀನ್ ಶಾ ಆಫ್ರಿದಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಮೂರು ಸ್ಥಾನಗಳನ್ನು ಹಸನ್ ಅಲಿ, ಜೇಮ್ಸ್ ಆಂಡರ್ಸನ್ ಮತ್ತು ಆಲಿ ರಾಬಿನ್ಸನ್ ಇದ್ದಾರೆ.

ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಕ್ವಿಂಟನ್ ಡಿಕಾಕ್ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಕ್ವಿಂಟನ್ ಡಿಕಾಕ್

ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ ಮಿಂಚು: ಆರ್ ಅಶ್ವಿನ್ ಬೌಲಿಂಗ್‌ನಲ್ಲಿ ಟೀಮ್ ಇಂಡಿಯಾ ಪರ ಅತ್ಯುತ್ತಮ ಪ್ರದರ್ಶನ ನೀಡಿದರೆ ಬ್ಯಾಟಿಂಗ್‌ನಲ್ಲಿ ಅನುಭವಿ ಕ್ರಿಕೆಟಿಗ ರೋಹಿತ್ ಶರ್ಮಾ ಮಿಂಚಿದ್ದಾರೆ. ಈ ವರ್ಷ ಟೆಸ್ಟ್ ಕ್ರಿಕೆಟ್‌ ರೋಹಿತ್ ಶರ್ಮಾ ಪಾಲಿಗೆ ಹೊಸ ಚೈತನ್ಯ ನೀಡಿದೆ. ಆರಂಭಿಕನಾಗಿ ಟೀಮ್ ಇಂಡಿಯಾ ಪರವಾಗಿ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ ರೋಹಿತಗ ಶರ್ಮಾ. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಹಾಗೂ ಇಂಗ್ಲೆಂಡ್‌ನಲ್ಲಿ ನಡೆದ ಎರಡು ಟೆಸ್ಟ್ ಸರಣಿಯಲ್ಲಿಯೂ ಶರ್ಮಾ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ವರ್ಷ ರೋಹಿತ್ ಶರ್ಮಾ ಒಟ್ಟು 11 ಟೆಸ್ಟ್‌ನಲ್ಲಿ ಆಡಿದ್ದು ಇದರಲ್ಲಿ ಒಟ್ಟು 906 ರನ್‌ಗಳಿಸಿದ್ದಾರೆ. ಈ ವರ್ಷ ರೋಹಿತ್ ಟೆಸ್ಟ್ ಮಾದರಿಯಲ್ಲಿ ಎರಡು ಭರ್ಜರಿ ಶತಕ ಸಿಡಿಸಿದ್ದು ನಾಲ್ಕು ಅರ್ಧ ಶತಕಗಳಿಸಿದ್ದಾರೆ.

Story first published: Friday, December 31, 2021, 15:59 [IST]
Other articles published on Dec 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X