Flashback 2021: ವಿಜಯ್ ಹಜಾರೆ ಟೂರ್ನಿಯ ಆರು ವಿಶೇಷ ದಾಖಲೆಗಳು

ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಹಿಂದೆಂದೂ ಮಾಡದ ಸಾಧನೆಯನ್ನ ಹಿಮಾಚಲ ಪ್ರದೇಶ 2021ರಲ್ಲಿ ಮಾಡಿದೆ. ಹಿಮಾಚಲ ಪ್ರದೇಶವು ಮೊದಲ ಬಾರಿಗೆ ವಿಜಯ್ ಹಜಾರೆ ಪ್ರಶಸ್ತಿಯನ್ನು ಗೆದ್ದಿದೆ ಜೊತೆಗೆ ಐದು ಬಾರಿ ವಿಜೇತರಾದ ತಮಿಳುನಾಡು ತಂಡವನ್ನು ಸೋಲಿಸಿತು.

ಈ ಗೆಲುವಿನೊಂದಿಗೆ ಅನೇಕ ದಾಖಲೆಗಳು ಸಹ ನಾವು ಕಾಣಬಹುದು. ಆಟಗಾರರು ಕೂಡ ಅನೇಕ ಹೊಸ ಮೈಲುಗಲ್ಲು ತಲುಪಿದ್ದಾರೆ. ಇದರ ನಡುವೆ ಯಾವ ಆಟಗಾರರು ಅತ್ಯಂತ ವಿಶೇಷ ದಾಖಲೆ ಮಾಡಿದ್ದಾರೆ ಎಂದು ತೋರಿಸುವ ಪ್ರಯತ್ನ ಇಲ್ಲಿದೆ. ಈ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲಿ ಆದ 6 ದಾಖಲೆಗಳ ಮಾಹಿತಿ ಇಲ್ಲಿದೆ.

1. ಹಿಮಾಚಲ ಪ್ರದೇಶ ತಂಡ ಮೊದಲ ಬಾರಿಗೆ ದೇಶೀಯ ಕ್ರಿಕೆಟ್‌ನಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದೆ. 6 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಹಿಮಾಚಲ ಪ್ರದೇಶ ಮೊದಲ ಬಾರಿಗೆ ಫೈನಲ್ ಆಡಿದೆ.

ಅನುಷ್ಕಾ ಜೊತೆಯಲ್ಲಿ ಹೊಸ ವರ್ಷ ಆಚರಿಸಿದ ವಿರಾಟ್ ಕೊಹ್ಲಿ: ಟೀಂ ಇಂಡಿಯಾ ಆಟಗಾರರು ಸಾಥ್ಅನುಷ್ಕಾ ಜೊತೆಯಲ್ಲಿ ಹೊಸ ವರ್ಷ ಆಚರಿಸಿದ ವಿರಾಟ್ ಕೊಹ್ಲಿ: ಟೀಂ ಇಂಡಿಯಾ ಆಟಗಾರರು ಸಾಥ್

2. ರಿಷಿ ಧವನ್ ಹಿಮಾಚಲ ಪ್ರದೇಶ ತಂಡದ ನಾಯಕನಾಗಿ ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಧವನ್ ಆಲ್ ರೌಂಡರ್ ಆಟ ಪ್ರದರ್ಶಿಸಿ ಈ ಋತುವಿನಲ್ಲಿ 8 ಪಂದ್ಯಗಳಲ್ಲಿ 458 ರನ್ ಗಳಿಸಿದ್ದಾರೆ ಮತ್ತು ಈ ಋತುವಿನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಇದರ ಜೊತೆಗೆ ಅವರು 17 ವಿಕೆಟ್‌ಗಳನ್ನು ಪಡೆಯುವ ಮೂಲಕ ಈ ವರ್ಷದ ವಿಜಯ್ ಹಜಾರೆ ಟ್ರೋಫಿಯಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

3. ಹಿಮಾಚಲ ಪ್ರದೇಶದ ಶುಭಂ ಅರೋರಾ ಕೂಡ ದಾಖಲೆ ಮಾಡಿದ್ದಾರೆ. ವಿಜಯ್ ಹಜಾರೆ ಫೈನಲ್‌ ಪಂದ್ಯದಲ್ಲಿ ಅವರು 136 ರನ್ ಗಳಿಸಿದರು. ವಿಜಯ್ ಹಜಾರೆ ಟ್ರೋಫಿಯ ಫೈನಲ್‌ನಲ್ಲಿ ಇದು ಎರಡನೇ ಗರಿಷ್ಠ ಸ್ಕೋರ್ ಆಗಿದೆ. ಶುಭಂ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಹಿಮಾಚಲ ಪ್ರದೇಶದ ನಾಲ್ಕನೇ ಆಟಗಾರ.

4.ತಮಿಳುನಾಡಿನ ಅನುಭವಿ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ವಿಜಯ್ ಹಜಾರೆ ಟ್ರೋಫಿಯ 2 ಫೈನಲ್ ಪಂದ್ಯಗಳಲ್ಲಿ ಶತಕ ಬಾರಿಸಿದ ಮೊದಲ ಆಟಗಾರನಾಗಿದ್ದಾರೆ. ಈ ವರ್ಷದ ಫೈನಲ್‌ನಲ್ಲಿ ಹಿಮಾಚಲ ಪ್ರದೇಶ ವಿರುದ್ಧ 116 ರನ್ ಗಳಿಸಿದ್ದರು. ಈ ಹಿಂದೆ 2016-17ರ ಋತುವಿನ ಫೈನಲ್‌ನಲ್ಲಿ ಅವರು ಬಂಗಾಳ ವಿರುದ್ಧ 112 ರನ್ ಗಳಿಸಿದ್ದರು. ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ರಾಬಿನ್ ಉತ್ತಪ್ಪ 3193 ರನ್ ಗಳಿಸಿರುವ ನಂಬರ್ ಒನ್ ಆಟಗಾರ.

5. ಮಧ್ಯಪ್ರದೇಶದ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಚಂಡೀಗಢ ವಿರುದ್ಧ 151 ರನ್ ಗಳಿಸಿದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 150 ಕ್ಕೂ ಹೆಚ್ಚು ರನ್ ಗಳಿಸಿದ್ದು ಇದೇ ಮೊದಲು. ವೆಂಕಟೇಶ್ ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಆರನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ 150ಕ್ಕೂ ಹೆಚ್ಚು ರನ್ ಗಳಿಸಿದ ಏಳನೇ ಬ್ಯಾಟ್ಸ್‌ಮನ್ ಆಗಿದ್ದಾರೆ.

6. ಐಪಿಎಲ್‌ನಲ್ಲಿ ಭರ್ಜರಿ ಪರ್ಫಾಮೆನ್ಸ್ ನೀಡಿದ್ದ ಮಹಾರಾಷ್ಟ್ರದ ರುತುರಾಜ್ ಗಾಯಕ್ವಾಡ್‌, ವಿಜಯ್ ಹಜಾರೆ ಟ್ರೋಫಿಯಲ್ಲೂ ತಮ್ಮ ಅಬ್ಬರ ತೋರಿದ್ದಾರೆ. ಅವರು ಈ ಋತುವಿನಲ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದು, ಒಂದೇ ವಿಜಯ್ ಹಜಾರೆ ಟ್ರೋಫಿ ಋತುವಿನಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿದ ಬ್ಯಾಟ್ಸ್‌ಮನ್ ಆಗಿದ್ದಾರೆ.

Kohli ಅನ್ನು ಚೇಂಜ್ ಮಾಡಲು Dravid ಪ್ರಯತ್ನವನ್ನು ರಿವೀಲ್ ಮಾಡಿದ KL Rahul | Oneindia Kannada

ರುತುರಾಜ್ ಈವರೆಗೆ ಸತತ ಮೂರು ಶತಕಗಳನ್ನು ಗಳಿಸಿದರು. ಈ ಟೂರ್ನಿಯಲ್ಲಿ ಇದುವರೆಗೆ ಇಬ್ಬರು ಆಟಗಾರರು ಮಾತ್ರ ಸತತ ಮೂರು ಶತಕ ಸಿಡಿಸಿದ್ದಾರೆ. ಒಬ್ಬರು ನಮನ್ ಓಜಾ ಮತ್ತು ಇನ್ನೊಬ್ಬರು ದೇವದತ್ ಪಡಿಕ್ಕಲ್.

For Quick Alerts
ALLOW NOTIFICATIONS
For Daily Alerts
Story first published: Saturday, January 1, 2022, 18:59 [IST]
Other articles published on Jan 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X