ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Flashback 2021: ಈ ವರ್ಷ ಅತಿ ಹೆಚ್ಚು ಟಿ20 ರನ್ ದಾಖಲಿಸಿದ 5 ಬ್ಯಾಟ್ಸ್‌ಮನ್

rizwan and babar azam

ಪ್ರತಿ ವರ್ಷದಂತೆಯೇ ಈ ವರ್ಷವು ಕ್ರಿಕೆಟ್ ಲೋಕದಲ್ಲಿ ಹಲವು ದಾಖಲೆಗಳಾಗಿವೆ. ಅದು ಚುಟುಕು ಕ್ರಿಕೆಟ್ ಇರಲಿ, ಟೆಸ್ಟ್ ಕ್ರಿಕೆಟ್ ಇರಲಿ ದಾಖಲೆಗಳೇನು ಕಡಿಮೆ ಇಲ್ಲ. ಈ ವರ್ಷ ಅನೇಕ ರೋಚಕ ಪಂದ್ಯಗಳಿಗೂ ಕ್ರಿಕೆಟ್ ಜಗತ್ತು ಸಾಕ್ಷಿಯಾಗಿದೆ. ಅದ್ರಲ್ಲೂ ಟಿ20 ವಿಶ್ವಕಪ್‌ನಲ್ಲಿ ಅನೇಕ ತಿರುವುಗಳ ನಡುವೆ ಫೇವರಿಟ್ ತಂಡಗಳೇ ಲೀಗ್ ಹಂತದಲ್ಲೇ ಹೊರಬಿದ್ದವು.

ಇನ್ನು ಟ್ರೋಫಿ ಗೆಲುವಿನ ಫೇವರಿಟ್ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಚಾಂಪಿಯನ್ ಆಗುವಲ್ಲಿ ಎಡವಿದ್ರು. ಲೆಕ್ಕಕ್ಕೆ ಇಲ್ಲದಿದ್ದ ಆಸ್ಟ್ರೇಲಿಯಾ ತಂಡವು ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ವರ್ಷವಿಡೀ ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪ್ರದರ್ಶನ ಶ್ಲಾಘನೀಯ. ಪಾಕಿಸ್ತಾನದ ಆರಂಭಿಕರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ವರ್ಷವಿಡೀ ಉತ್ತಮ ಪ್ರದರ್ಶನ ನೀಡಿದರು. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಜೋಡಿಯ ಮುಂದೆ ಯಾವ ಆರಂಭಿಕ ಜೋಡಿಯನ್ನು ಹೋಲಿಸಲು ಸಾಧ್ಯವಾಗದ ಮಟ್ಟಿಗೆ ಆಟವಾಡಿದ್ದಾರೆ.

ಈ ವರ್ಷ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರರು ಯಾರು ಎಂಬುದರ ಕುರಿತು ಮಾಹಿತಿ ಈ ಕೆಳಗಿದೆ.

ಮೊಹಮ್ಮದ್ ರಿಜ್ವಾನ್, ಪಾಕಿಸ್ತಾನ

ಮೊಹಮ್ಮದ್ ರಿಜ್ವಾನ್, ಪಾಕಿಸ್ತಾನ

ಪಾಕಿಸ್ತಾನದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಈ ವರ್ಷ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅವರು ಈ ವರ್ಷ 29 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದು, 73.66ರ ಬ್ಯಾಟಿಂಗ್ ಸರಾಸರಿ ಮತ್ತು 134.89 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 1,326 ರನ್ ಗಳಿಸಿದರು. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 104 ರನ್ ಕೂಡ ಸೇರಿದೆ. ರಿಜ್ವಾನ್ ಬ್ಯಾಟ್‌ನಿಂದ ಒಟ್ಟು 12 ಅರ್ಧಶತಕ ಮತ್ತು 1 ಶತಕ ಸಿಡಿದಿದೆ.

ಭಾರತ v/s ದಕ್ಷಿಣ ಆಫ್ರಿಕಾ: ಹೆಡ್‌ To ಹೆಡ್ ರೆಕಾರ್ಡ್‌, ಆಟಗಾರರ ಪ್ರಮುಖ ದಾಖಲೆಗಳು ಇಲ್ಲಿವೆ

ಬಾಬರ್ ಅಜಮ್, ಪಾಕಿಸ್ತಾನ

ಬಾಬರ್ ಅಜಮ್, ಪಾಕಿಸ್ತಾನ

ಪಾಕಿಸ್ತಾನದ ಅತ್ಯುತ್ತಮ ಬ್ಯಾಟ್ಸ್‌ಮನ್ ಮತ್ತು ನಾಯಕ ಬಾಬರ್ ಅಜಮ್ ಈ ವರ್ಷ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರಾಗಿದ್ದಾರೆ. ಈ ವರ್ಷ 29 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು 939 ರನ್ ಗಳಿಸಿದ್ದಾರೆ. ಇದರಲ್ಲಿ 9 ಅರ್ಧ ಶತಕ ಹಾಗೂ 1 ಶತಕ ಸೇರಿದೆ. ಆತ ಒಂದು ಇನ್ನಿಂಗ್ಸ್‌ನಲ್ಲಿ 122 ರನ್‌ಗಳ ಆಟವಾಟಿದ್ರು. ಈತ 37.56ರ ಬ್ಯಾಟಿಂಗ್ ಸರಾಸರಿಯಲ್ಲಿ , 127.57 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.

ಟೆಸ್ಟ್ ಸರಣಿಗೂ ಮುನ್ನ ಭರ್ಜರಿ ಡಿನ್ನರ್: ಆಟಗಾರರಿಗೆ ಸಾಥ್ ನೀಡಿದ ಕೋಚ್ ರಾಹುಲ್ ದ್ರಾವಿಡ್

ಮಾರ್ಟಿನ್ ಗಪ್ಟಿಲ್, ನ್ಯೂಜಿಲೆಂಡ್

ಮಾರ್ಟಿನ್ ಗಪ್ಟಿಲ್, ನ್ಯೂಜಿಲೆಂಡ್

ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಈ ವರ್ಷ ಅತಿ ಹೆಚ್ಚು ಟಿ20 ರನ್ ದಾಖಲಿಸಿದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಅವರು 18 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 678 ರನ್ ಗಳಿಸಿದ್ದಾರೆ. ಅವರು 5 ಅರ್ಧಶತಕಗಳ ಸಹಾಯದಿಂದ ಈ ರನ್‌ಗಳನ್ನು ಗಳಿಸಿದ್ದು, 97 ರನ್‌ಗಳ ಅತ್ಯುತ್ತಮ ಆಟವನ್ನು ಸಹ ಆಡಿದ್ದಾರೆ. ಇವರು 678 ರನ್‌ಗಳನ್ನ 37.66ರ ಬ್ಯಾಟಿಂಗ್ ಸರಾಸರಿ ಮತ್ತು 145.49 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

ಮಿಚೆಲ್ ಮಾರ್ಷ್‌, ಆಸ್ಟ್ರೇಲಿಯಾ

ಮಿಚೆಲ್ ಮಾರ್ಷ್‌, ಆಸ್ಟ್ರೇಲಿಯಾ

ಆಸ್ಟ್ರೇಲಿಯಾದ ಆಲ್ ರೌಂಡರ್ ಮಿಚೆಲ್ ಮಾರ್ಷ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಆಸ್ಟ್ರೇಲಿಯಾ ಪರ 21 ಟಿ20 ಪಂದ್ಯಗಳನ್ನಾಡಿದ್ದು, ಅದರಲ್ಲಿ 627 ರನ್ ಗಳಿಸಿದ್ದಾರೆ. ಅವರು 6 ಅರ್ಧಶತಕಗಳು ಮತ್ತು ಅತ್ಯುತ್ತಮ 77 ರನ್‌ಗಳ ಸಹಾಯದಿಂದ ಈ ರನ್‌ಗಳನ್ನು ಗಳಿಸಿದರು. ಈ ಸಮಯದಲ್ಲಿ ಅವರ ಸ್ಟ್ರೈಕ್ ರೇಟ್ 129.81 ಆಗಿದ್ದು, ಅವರ ಬ್ಯಾಟಿಂಗ್ ಸರಾಸರಿ 36.88 ರಷ್ಟಿತ್ತು.

IPL 2022 Mega Auction ಬಗ್ಗೆ ಕಂಪ್ಲೀಟ್ ಮಾಹಿತಿ | Oneindia Kannada
ಜಾಸ್ ಬಟ್ಲರ್, ಇಂಗ್ಲೆಂಡ್

ಜಾಸ್ ಬಟ್ಲರ್, ಇಂಗ್ಲೆಂಡ್

ಇಂಗ್ಲೆಂಡ್‌ನ ಅನುಭವಿ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಜಾಸ್ ಬಾಟ್ಲರ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರು ಈ ವರ್ಷ 14 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್ ಅನ್ನು ಪ್ರತಿನಿಧಿಸಿದರು ಮತ್ತು 589 ರನ್ ಗಳಿಸಿದರು. ಇವರ ಬ್ಯಾಟಿಂಗ್ ಸರಾಸರಿ 65.44 ಮತ್ತು ಸ್ಟ್ರೈಕ್ ರೇಟ್ 143.30 ಆಗಿತ್ತು. ಇದಲ್ಲದೆ ಬಟ್ಲರ್ ಐದು ಅರ್ಧಶತಕ ಮತ್ತು ಶತಕವನ್ನು ಹೊಂದಿದ್ದಾರೆ. ಈ ಸಮಯದಲ್ಲಿ ಅವರ ಅತ್ಯುತ್ತಮ ಸ್ಕೋರ್ 101 ರನ್ ಆಗಿದೆ.

Story first published: Wednesday, December 22, 2021, 22:53 [IST]
Other articles published on Dec 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X