ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫ್ಲ್ಯಾಶ್‌ಬ್ಯಾಕ್ 2021: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳ ಪಟ್ಟಿ; ಇಬ್ಬರು ಭಾರತೀಯರು!

Flashback 2021: Top 5 Bowlers Who Took Highest Wickets In Test Cricket

ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಭಾರತ 2021ರಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಕ್ರಿಕೆಟ್‌ನ ಸುದೀರ್ಘ ಮಾದರಿಯ್ಲಲ ಸಾಕಷ್ಟು ರೋಮಾಂಚನಕಾರಿ ಕ್ಷಣಗಳಿಗೆ ಭಾರತೀಯ ಕ್ರಿಕೆಟ್ ತಂಡ ಸಾಕಷ್ಟಿಯಾಗಿದೆ. ಅವಿಸ್ಮರಣೀಯ ಗೆಲುವುಗಳು ಭಾರತ ತಂಡದ ಪಾಲಾಗಿದೆ. ಈ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳು ಮಾತ್ರವಲ್ಲ ಬೌಲರ್‌ಗಳು ಕೂಡ ಅಮೋಘ ಪ್ರದರ್ಶನ ನೀಡಿದ್ದಾರೆ. ಈ ವರ್ಷ ಟೆಸ್ಟ್ ಇತಿಹಾಸದ ಪ್ರಥಮ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪ್ರಥಮ ಫೈನಲ್ ಪಂದ್ಯ ನಡೆಯಿತು. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಈ ಸೆಣೆಸಾಟದಲ್ಲಿ ಕಿವೀಸ್ ಪಡೆ ಚಾಂಪಿಯನ್ ಆಗಿ ಮೆರೆಯಿತು.

ಇನ್ನು ಈ ವರ್ಷ ನಡೆದ ಟೆಸ್ಟ್ ಪಂದ್ಯಗಳಲ್ಲಿ ವೇಗಿಳು ಹಾಗೂ ಸ್ಪಿನ್ನರ್‌ಗಳು ಅದ್ಭುತವಾದ ಪ್ರದರ್ಶನ ನೀಡಿ ಯಶಸ್ಸು ಗಳಿಸಿದ್ದಾರೆ. ಹೀಗಾಗಿ ಈ ಕ್ಯಾಲೆಂಡರ್ ವರ್ಷದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು ಯಾರು ಎಂಬುದನ್ನು ಈ ವರದಿಯಲ್ಲಿ ನೋಡೋಣ.

ಭಾರತ vs ದ. ಆಫ್ರಿಕಾ: ಮೊದಲ ದಿನ ಕನ್ನಡಿಗರದ್ದೇ ಅಬ್ಬರ: ಶತಕ ಸಿಡಿಸಿದ ರಾಹುಲ್ ಹೆಸರಿನಲ್ಲಿ ಹಲವು ದಾಖಲೆ!ಭಾರತ vs ದ. ಆಫ್ರಿಕಾ: ಮೊದಲ ದಿನ ಕನ್ನಡಿಗರದ್ದೇ ಅಬ್ಬರ: ಶತಕ ಸಿಡಿಸಿದ ರಾಹುಲ್ ಹೆಸರಿನಲ್ಲಿ ಹಲವು ದಾಖಲೆ!

ರವಿಚಂದ್ರನ್ ಅಶ್ವಿನ್: ಭಾರತದ ಅನುಭವಿ ಆಟಗಾರ ಆರ್ ಅಶ್ವಿನ್‌ಗೆ ಇದು ಅತ್ಯಂತ ಯಶಸ್ವೀ ವರ್ಷ ಎಂದರೆ ತಪ್ಪಿಲ್ಲ. ಯಾಕೆಂದರೆ ಟೆಸ್ಟ್ ಕ್ರಿಕೆಟ್‌ನ ಅವಿಭಾಜ್ಯ ಅಂಗವಾಗಿರುವ ಅಶ್ವಿನ್ ಭಾರತದ ಟಿ20 ತಂಡಕ್ಕೆ ನಾಲ್ಕು ವರ್ಷಗಳ ನಂತರ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಆರ್ ಅಶ್ವಿನ್ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಒಂದು ಪಂದ್ಯದಲ್ಲಿಯೂ ಅಶ್ವಿನ್ ಆಡಿಲ್ಲವಾದರೂ ಉಳಿದ ಪಂದ್ಯಗಳಲ್ಲಿ ಅವರ ಪ್ರದರ್ಶನ ಅಮೋಘವಾಗಿತ್ತು. 2021ರಲ್ಲಿ ಆರ್ ಅಶ್ವಿನ್ ಒಟ್ಟು 8 ಪಂದ್ಯಗಳನ್ನು ಆಡಿದ್ದು ಇದರಲ್ಲಿ 52 ವಿಕೆಟ್ ಸಂಪಾದಿಸಿದ್ದಾರೆ.

ಶಾಹೀನ್ ಶಾ ಅಫ್ರಿದಿ: ಈ ವರ್ಷ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದೆ. ಈ ಎಲ್ಲಾ ಸರಣಿಯಲ್ಲಿಯೂ ಪಾಕಿಸ್ತಾನದ ಯುವ ವೇಗಿ ಶಾಹೀನ್ ಶಾ ಅಫ್ರಿದಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದಾರೆ. ಅದರಲ್ಲೂ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಎರಡು ಪಂದ್ಯಗಳಲ್ಲಿಯೇ ಅಫ್ರಿದಿ 18 ವಿಕೆಟ್ ಕಬಳಿಸಿದ್ದಾರೆ. ಈ ವರ್ಷ ಅತಿ ಹೆಚ್ಚಿ ವಿಕೆಟ್ ಪಡೆದ ವೇಗದ ಬೌಲರ್ ಎನಿಸಿದ್ದಾರೆ ಶಾಹೀನ್ ಶಾ ಅಫ್ರಿದಿ. ಒಟ್ಟು ಅವರು 9 ಪಂದ್ಯಗಳನ್ನು ಆಡಿದ್ದು ಅದರಲ್ಲಿ 47 ವಿಕೆಟ್ ಸಂಪಾದಿಸಿದ್ದಾರೆ.

ಭಾರತ vs ದ. ಆಫ್ರಿಕಾ: ಆರು ಬ್ಯಾಟರ್‌ಗಳನ್ನು ಕಣಕ್ಕಿಳಿಸಿದರೂ ಈ ದಾಂಡಿಗ ಬೇಡ ಎಂದ ಆಕಾಶ್ ಚೋಪ್ರಭಾರತ vs ದ. ಆಫ್ರಿಕಾ: ಆರು ಬ್ಯಾಟರ್‌ಗಳನ್ನು ಕಣಕ್ಕಿಳಿಸಿದರೂ ಈ ದಾಂಡಿಗ ಬೇಡ ಎಂದ ಆಕಾಶ್ ಚೋಪ್ರ

ಹಸನ್ ಅಲಿ: ಪಾಕಿಸ್ತಾನದ ಬೌಲರ್ ಹಸನ್ ಅಲಿ ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ ಮತ್ತೋರ್ವ ಬೌಲರ್ ಆಗಿದ್ದಾರೆ. ಜಿಂಬಾಬ್ವೆ ವಿರುದ್ಧಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 14 ವಿಕೆಟ್ ಪಡೆದು ಈ ಸರಣಿಯ್ಲಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು. ಅಲ್ಲದೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿಯೂ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ ಹಸನ್ ಅಲಿ. ಈ ವರ್ಷ ಹಸನ್ ಅಲಿ ಒಟ್ಟು 8 ಪಂದ್ಯಗಳನ್ನು ಆಡಿದ್ದು ಇದರಲ್ಲಿ 41 ವಿಕೆಟ್ ಸಂಪಾದಿಸಿದ್ದಾರೆ.

ಅಕ್ಷರ್ ಪಟೇಲ್: ಭಾರತದ ಯುವ ಬೌಲರ್ ಅಕ್ಷರ್ ಪಟೇಲ್ ತಮ್ಮ ಬೌಲಿಂಗ್ ದಾಳಿಯ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಭಾರತದಲ್ಲಿ ನಡೆದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ ಅಕ್ಷರ್ ಪಟೇಲ್. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಕ್ಷರ್ ಪಟೇಲ್ 4ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಕೇವಲ 5 ಪಂದ್ಯಗಳನ್ನು ಆಡಿರುವ ಅಕ್ಷರ್ ಪಟೇಲ್ 36 ವಿಕೆಟ್ ಪಡೆದುಕೊಂಡಿದ್ದು ಈ ಐದು ಪಂದ್ಯಗಳಲ್ಲಿ ಐದು ಬಾರು ಅವರು ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ.

ಒಲ್ಲೀ ರಾಬಿನ್ಸನ್: ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಒಲ್ಲೀ ರಾಬಿನ್ಸನ್ ಈ ಬಾರಿ ಬ್ಯಾಟ್ ಹಾಗೂ ಬೌಲಿಂಗ್ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆರಂಭದಲ್ಲಿ ಹಳೇಯ ಜನಾಂಗೀಯ ನಿಂದನೆಯ ಟ್ವೀಟ್‌ನ ಕಾರಣಕ್ಕೆ ವಿವಾದಕ್ಕೆ ಸಿಲುಕಿದ್ದ ರಾಬಿನ್ಸನ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ನಂತರ ಆಡುವ ಅವಕಾಶ ಪಡೆದುಕೊಂಡ ರಾಬಿನ್ಸನ್ ತಮ್ಮ ಪ್ರದರ್ಶನದ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇಂಗ್ಲೆಂಡ್ ತಂಡದ ಪರವಾಗಿ ಈ ವರ್ಷ 7 ಪಂದ್ಯಗಳಲ್ಲಿ ಆಡಿರುವ ಒಲ್ಲೀ ರಾಬಿನ್ಸನ್ 35 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿದ್ದಾರೆ.

Story first published: Tuesday, December 28, 2021, 9:46 [IST]
Other articles published on Dec 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X