ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Flashback 2021: ಈ ವರ್ಷ ಕ್ರಿಕೆಟ್ ಜಗತ್ತನ್ನು ಕಾಡಿದ ವಿವಾದಗಳು

Flashback 2021: Top controversies of cricket world this year

2021 ಮುಗಿಯುವ ಹಂತಕ್ಕೆ ಬಂದು ತಲುಪಿದ್ದು ಜನರು ನೂತನ ವರ್ಷವನ್ನು ಬರಮಾಡಿಕೊಳ್ಳುವ ಹಂತದಲ್ಲಿದ್ದಾರೆ. ವರ್ಷಪೂರ್ತಿ ಕೊರೋನಾವೈರಸ್ ಭೀತಿಯಲ್ಲಿಯೇ ಮುಗಿದಿದ್ದು ಕ್ರಿಕೆಟ್ ಜಗತ್ತು ಕೂಡ ಈ ವೈರಸ್ ಹಾವಳಿಯಿಂದ ಹೊರತಾಗಿರಲಿಲ್ಲ. ಕೇವಲ ಕೊರೋನಾವೈರಸ್ ಮಾತ್ರವಲ್ಲದೇ ಇನ್ನೂ ಕೆಲ ಅಂಶಗಳಿಂದ ಹಿನ್ನಡೆ ಮತ್ತು ವಿವಾದಗಳನ್ನು ಕ್ರಿಕೆಟ್ ಜಗತ್ತು ಎದುರಿಸಿದ್ದು, ಈ ವರ್ಷ ಕ್ರಿಕೆಟ್ ಜಗತ್ತಿನಲ್ಲಿ ಉಂಟಾದ ವಿವಾದಗಳ ಪಟ್ಟಿ ಈ ಕೆಳಕಂಡಂತಿದೆ..

ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದುಗೊಳಿಸಿದ ಆಸ್ಟ್ರೇಲಿಯಾ

ಮೊದಲೇ ಹೇಳಿದ ಹಾಗೆ ಕೊರೋನಾವೈರಸ್ ಕೇವಲ ಜನ ಸಾಮಾನ್ಯರಿಗೆ ಮಾತ್ರವಲ್ಲದೇ ಕ್ರಿಕೆಟ್ ಆಟಕ್ಕೂ ಕೂಡ ದೊಡ್ಡ ಮಟ್ಟದ ಹೊಡೆತವನ್ನು ನೀಡಿದೆ. ಈ ವರ್ಷ ನಡೆಯಬೇಕಿದ್ದ ಪ್ರಮುಖ ಸರಣಿಗಳಲ್ಲಿ ಒಂದಾದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪ್ರವಾಸ ಕೂಡ ಇದೇ ಕೊರೋನಾವೈರಸ್ ಕಾಟಕ್ಕೆ ಬಲಿಯಾಯಿತು. ಹೌದು, ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಸರಣಿಗಳನ್ನು ಆಡಬೇಕಿತ್ತು. ಆದರೆ ದಕ್ಷಿಣ ಆಫ್ರಿಕಾದಲ್ಲಿ ಕೊರೋನಾವೈರಸ್ ಮತ್ತು ನೂತನವಾಗಿ ಕಾಣಿಸಿಕೊಂಡಿರುವ ವೈರಸ್ ಹಾವಳಿ ಹೆಚ್ಚಾಗಿದ್ದು ಇಂತಹ ಸಂದರ್ಭದಲ್ಲಿ ಪ್ರವಾಸವನ್ನು ಕೈಗೊಂಡು ಕ್ರಿಕೆಟ್ ಆಡುವುದು ಆಟಗಾರರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಕ್ಷೇಮವಲ್ಲ ಎಂದು ತಿಳಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಸಿಇಒ ನಿಕ್ ಹಾಕ್ಲೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದುಪಡಿಸಿರುವುದಾಗಿ ಹೇಳಿದರು. ಹೀಗೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದುಪಡಿಸಿದ ಆಸ್ಟ್ರೇಲಿಯಾಕ್ಕೆ ಹಣದ ನಷ್ಟ ಉಂಟಾಗಿದ್ದು ಮಾತ್ರವಲ್ಲದೇ ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ಅವಕಾಶ ಕೂಡ ಕೈ ತಪ್ಪಿತು.

ರೋಹಿತ್‌ಗೆ ನಾಯಕತ್ವ ನೀಡಿದ್ದು ಆ ಒಂದು ಕಾರಣಕ್ಕೆ ಎಂದು ಕೊನೆಗೂ ಸತ್ಯ ಬಾಯ್ಬಿಟ್ಟ ಗಂಗೂಲಿರೋಹಿತ್‌ಗೆ ನಾಯಕತ್ವ ನೀಡಿದ್ದು ಆ ಒಂದು ಕಾರಣಕ್ಕೆ ಎಂದು ಕೊನೆಗೂ ಸತ್ಯ ಬಾಯ್ಬಿಟ್ಟ ಗಂಗೂಲಿ

ಭಾರತದಿಂದ ಯುಎಇಗೆ ಐಪಿಎಲ್ ಸ್ಥಳಾಂತರ

ಇನ್ನು ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮೊದಲಿಗೆ ಭಾರತ ನೆಲದಲ್ಲಿ ಆರಂಭವಾಗಿತ್ತು. ಬಯೋ ಬಬಲ್ ವ್ಯವಸ್ಥೆಯೊಂದಿಗೆ ಪ್ರೇಕ್ಷಕರಿಗೆ ಅವಕಾಶ ನೀಡದೇ ಎಚ್ಚರಿಕೆಯಿಂದ ಟೂರ್ನಿಯನ್ನು ಆಯೋಜಿಸಿದ್ದರೂ ಸಹ ವಿವಿಧ ತಂಡಗಳ ಕೆಲ ಆಟಗಾರರಲ್ಲಿ ಟೂರ್ನಿಯ 29 ಪಂದ್ಯಗಳು ಮುಗಿದ ನಂತರ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಎಚ್ಚೆತ್ತ ಬಿಸಿಸಿಐ ತಾತ್ಕಾಲಿಕವಾಗಿ ಐಪಿಎಲ್ ಟೂರ್ನಿಯನ್ನು ಸ್ಥಗಿತಗೊಳಿಸಿ ಮುಂದೂಡಿತು. ಹೀಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿದ್ದ ಐಪಿಎಲ್ ಟೂರ್ನಿಯನ್ನು ಯುಎಇಯಲ್ಲಿ ಪುನರಾರಂಭಿಸಿ ಯಶಸ್ವಿಯಾಗಿ ಮುಗಿಸಲಾಗಿದೆ.

ಮಹಿಳಾ ಕ್ರಿಕೆಟ್ ಮೇಲೆ ನಿಷೇಧ ಹೇರಿದ ತಾಲಿಬಾನ್

ಆಗಸ್ಟ್ ತಿಂಗಳಿನಲ್ಲಿ ಅಫ್ಘಾನಿಸ್ತಾನ ದೇಶವನ್ನು ಆಕ್ರಮಿಸಿಕೊಂಡ ಉಗ್ರ ಸಂಘಟನೆಯಾದ ತಾಲಿಬಾನ್ ಮಹಿಳಾ ಕ್ರೀಡೆಗಳ ಮೇಲೆ ನಿಷೇಧವನ್ನು ಹೇರಿತು. ಮಹಿಳೆಯರು ಕ್ರಿಕೆಟ್ ಆಡಬಾರದು ಮತ್ತು ಮಹಿಳಾ ನಿರೂಪಕಿಯರು ಕೆಲಸಕ್ಕೆ ಹಾಜರಾಗಬಾರದು ಎಂಬ ಷರತ್ತನ್ನು ತಾಲಿಬಾನ್ ವಿಧಿಸಿತ್ತು.

ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನಲ್ಲಿಯೂ ವಿವಾದ

ಸೆಪ್ಟೆಂಬರ್ 13ರಂದು ರಮೀಜ್ ರಾಜಾ ಅವರನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಹೀಗೆ ರಮೀಜ್ ರಾಜಾ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನೂತನ ಅಧ್ಯಕ್ಷರಾಗಿ ನೇಮಕವಾದ ಬೆನ್ನಲ್ಲೇ ಪಾಕಿಸ್ತಾನದ ಹೆಡ್ ಕೋಚ್ ಮಿಸ್ಬಾ ಉಲ್ ಹಕ್ ಮತ್ತು ಬೌಲಿಂಗ್ ಕೋಚ್ ವಕಾರ್ ಯೂನಸ್ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿ ಹೊರನಡೆದರು. ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಇನ್ನೂ ತಿಂಗಳು ಬಾಕಿ ಇರುವಾಗ ಈ ನಿರ್ಧಾರವನ್ನು ಕೈಗೊಂಡ ಈ ಇಬ್ಬರು ರಮೀಜ್ ರಾಜಾ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡದೆ ಇದ್ದರೂ ಸಹ ರಮೀಜ್ ರಾಜಾ ಆಯ್ಕೆಯಿಂದಲೇ ಇಬ್ಬರೂ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಹರಿದಾಡಿತು.

ಲಕ್ನೋ, ಅಹ್ಮದಾಬಾದ್ ತಂಡ ಸೇರಲಿದ್ದಾರೆ ಈ 6 ಆಟಗಾರರು; ಆರ್‌ಸಿಬಿ ಅಭಿಮಾನಿಗಳಿಗಿದು ಬೇಸರದ ಸುದ್ದಿಲಕ್ನೋ, ಅಹ್ಮದಾಬಾದ್ ತಂಡ ಸೇರಲಿದ್ದಾರೆ ಈ 6 ಆಟಗಾರರು; ಆರ್‌ಸಿಬಿ ಅಭಿಮಾನಿಗಳಿಗಿದು ಬೇಸರದ ಸುದ್ದಿ

ಆಶ್ಚರ್ಯಕರವಾಗಿ ಆಸ್ಟ್ರೇಲಿಯಾ ನಾಯಕತ್ವ ಬಿಟ್ಟ ಟಿಮ್ ಪೇನ್

2017ರ ಸಮಯದಲ್ಲಿ ಮಹಿಳೆಯೋರ್ವಳ ಜೊತೆ ಆಸ್ಟ್ರೇಲಿಯಾದ ಆಟಗಾರ ಟಮ್ ಪೇನ್ ನಡೆಸಿದ್ದ ಅಶ್ಲೀಲ ಸಂದೇಶಗಳ ಚಿತ್ರಗಳು ಬಹಿರಂಗವಾಗುತ್ತಿದ್ದಂತೆ ಟಿಮ್ ಪೇನ್ ಆಸ್ಟ್ರೇಲಿಯಾ ತಂಡದ ನಾಯಕತ್ವಕ್ಕೆ ರಾಜಿನಾಮೆಯನ್ನು ನೀಡಿ ಕೆಳಗಿಳಿದರು. ಹೀಗೆ ದಿಢೀರನೆ ನಾಯಕತ್ವಕ್ಕೆ ರಾಜಿನಾಮೆ ಸಲ್ಲಿಸಿದ ಟಿಮ್ ಪೇನ್ ಒಂದು ವಾರದ ನಂತರ ಕ್ರಿಕೆಟ್‍ನಿಂದ ಕೂಡ ದೂರ ಸರಿದು ಮಾನಸಿಕ ಚಿಕಿತ್ಸೆಗೆ ಒಳಗಾದರು.

ಭಾರತ ಏಕದಿನ ತಂಡದ ನಾಯಕತ್ವದಿಂದ ಕೊಹ್ಲಿಯನ್ನು ಹೊರಗಿಟ್ಟ ಬಿಸಿಸಿಐ

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಲಿದ್ದು ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕನಾಗಿ ಮುಂದುವರಿಯಲಿದ್ದೇನೆ ಎಂದು ವಿರಾಟ್ ಕೊಹ್ಲಿ ತಮ್ಮ ನಿರ್ಧಾರವನ್ನು ತಿಳಿಸಿದ್ದರು. ಆದರೆ ವಿರಾಟ್ ಕೊಹ್ಲಿ ಅಂದುಕೊಂಡಂತೆ ಏನೂ ನಡೆಯಲಿಲ್ಲ. ಬದಲಾಗಿ ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಸಹ ವಿರಾಟ್ ಕೊಹ್ಲಿ ಅವರನ್ನು ಬಿಸಿಸಿಐ ತೆಗೆದುಹಾಕಿತು. ಹೀಗೆ ನಾಯಕನಾಗಿ ಉತ್ತಮ ಅಂಕಿ ಅಂಶವನ್ನು ಹೊಂದಿದ್ದರೂ ಸಹ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದಿಂದ ಬಿಸಿಸಿಐ ತೆಗೆದು ಹಾಕಿದ್ದು ಭಾರೀ ದೊಡ್ಡ ಮಟ್ಟದ ವಿವಾದವನ್ನು ಹುಟ್ಟುಹಾಕಿದೆ. ಈ ಕುರಿತಾಗಿ ಸೌರವ್ ಗಂಗೂಲಿ ವಿರುದ್ಧ ಕೂಡ ವಿರಾಟ್ ಕೊಹ್ಲಿ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದು, ಇಂದಿಗೂ ಸಹ ಈ ವಿವಾದದ ಬಿಸಿ ತಣ್ಣಗಾಗಿಲ್ಲ.

Story first published: Saturday, December 18, 2021, 10:02 [IST]
Other articles published on Dec 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X