ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫ್ಲ್ಯಾಶ್‌ಬ್ಯಾಕ್ 2021: ODI ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಟಾಪ್ 10 ಆಟಗಾರರು: ಭಾರತೀಯರು ಇಬ್ಬರೂ ಇಲ್ಲ!

Flashback 2021: Top Ten ODI Run-getters of 2021; No Indian on the List

ಏಕದಿನ ಕ್ರಿಕೆಟ್‌ನ ಪಾಲಿಗೆ 2021 ಅಂತಾ ಮಹತ್ವದ ವರ್ಷವಾಗಿಲ್ಲ ಎಂಬುದು ಈ ಅಂಕಿಅಂಶಗಳನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ. ಈ ಕ್ಯಾಲೆಂಡರ್ ವರ್ಷದಲಲ್ಇ ಪ್ರಮುಖ ತಂಡಗಳೆಲ್ಲವೂ ಕೂಡ ಟೆಸ್ಟ್ ಹಾಗೂ ಟಿ20 ಮಾದರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಹೀಗಾಗಿ ಕಡಿಮೆ ಏಕದಿನ ಪಂದ್ಯಗಳಲ್ಲ ಪ್ರಮುಖ ತಂಡಗಳೂ ಭಾಗಿಯಾಗಿದೆ. ಆದರೆ ಆಡಿದ ಪಂದ್ಯಗಳಲ್ಲಿ ಯಾವೆಲ್ಲಾ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂಬುದು ಕುತೂಹಲಕಾರಿ ಅಂಶ.

ಈ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಏಕದಿನ ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿಶ್ವ ಕ್ರಿಕೆಟ್‌ನ ಸ್ಟಾರ್‌ ಆಟಗಾರರ ಹೆಸರು ಕಾಣಿಸಿಕೊಳ್ಳದಿರುವುದು ವಿಶೇಷ ಸಂಗತಿ. ಇನ್ನು ಭಾರತೀಯ ಕ್ರಿಕೆಟ್ ತಂಡದ ಯಾವ ಆಟಗಾರನ ಹೆಸರು ಕೂಡ ಈ ಟಾಪ್ 10ರಲ್ಲಿ ಕಾಣಿಸಿಕೊಂಡಿಲ್ಲ.

ಭಾರತ vs ದ.ಆಫ್ರಿಕಾ: ಸೆಂಚುರಿಯನ್ ಟೆಸ್ಟ್‌ಗೆ ದ.ಆಫ್ರಿಕಾದ ಸಂಭಾವ್ಯ ಆಡುವ ಬಳಗ ಹೀಗಿದೆಭಾರತ vs ದ.ಆಫ್ರಿಕಾ: ಸೆಂಚುರಿಯನ್ ಟೆಸ್ಟ್‌ಗೆ ದ.ಆಫ್ರಿಕಾದ ಸಂಭಾವ್ಯ ಆಡುವ ಬಳಗ ಹೀಗಿದೆ

10. ವನಿಂದು ಹಸರಂಗ: ಶ್ರೀಲಂಕಾ ತಂಡದ ಯುವ ಆಲ್‌ರೌಂಡರ್ ವನಿಂದು ಹಸರಂಗ ಈ ವರ್ಷ ವ್ಯಾಟ್ ಹಾಗೂ ಬೌಲಿಂಗ್ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ವನಿಂದು ಹಸರಂಗ ಪಾಲಿಗೆ ಇದು ಅತ್ಯುತ್ತಮವಾದ ವರ್ಷವಾಗಿದೆ. ಶ್ರೀಲಂಕಾ ಪರ ಮಧ್ಯಮ ಕ್ರಮಾಂಕದಲ್ಲಿ ಅಮೋಘ ಆಟವಾಡಿದ ಅವರು 14 ಇನ್ನಿಂಗ್ಸ್‌ಗಳಲ್ಲಿ 27.38 ಸರಾಸರಿಯಲ್ಲಿ 356 ರನ್ ಗಳಿಸಿದ್ದಾರೆ.

9. ಫಖರ್ ಜಮಾನ್: ಪಾಕಿಸ್ತಾನದ ಬ್ಯಾಟರ್ ಈ ವರ್ಷ ಹೆಚ್ಚು ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದರೆ ಹಲವಾರು ಪಂದ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 6 ಪಂದ್ಯಗಳಲ್ಲಿ 60.83 ಸರಾಸರಿಯಲ್ಲಿ 365 ರನ್ ಗಳಿಸಿ ಅತಿ ಹೆಚ್ಚು ರನ್‌ಗಳಿಸಿ ಆಟಗಾರರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.

8. ಮಹಮ್ಮದುಲ್ಲಾ: ಬಾಂಗ್ಲಾದೇಶ ಬ್ಯಾಟರ್ ಮಹ್ಮದುಲ್ಲಾ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ವರ್ಷ 11 ಇನ್ನಿಂಗ್ಸ್‌ಗಳಲ್ಲಿ ಮಹ್ಮದುಲ್ಲಾ 49.87 ಸರಾಸರಿಯಲ್ಲಿ 399 ರನ್ ಗಳಿಸಿದ್ದಾರೆ.

ಭಾರತ vs ದ.ಆಫ್ರಿಕಾ: ಕೊರೊನಾ ಹೆಚ್ಚಾದರೆ ಪಂದ್ಯಗಳ ಗತಿಯೇನು? ಆಟಗಾರರ ಪರಿಸ್ಥಿತಿಯೇನು?ಭಾರತ vs ದ.ಆಫ್ರಿಕಾ: ಕೊರೊನಾ ಹೆಚ್ಚಾದರೆ ಪಂದ್ಯಗಳ ಗತಿಯೇನು? ಆಟಗಾರರ ಪರಿಸ್ಥಿತಿಯೇನು?

7. ಬಾಬರ್ ಅಜಂ: ಪಾಕಿಸ್ತಾನ ತಮಡದ ಪ್ರಮುಖ ಆಟಗಾರ ಮತ್ತು ನಾಯಕ ಬಾಬರ್ ಅಜಂ ಈ ಕ್ಯಾಲೆಂಡರ್ ವರ್ಷದಲ್ಲಿಯೂ ರನ್ ಗಳಿಸುವುದನ್ನು ಮುಂದುವರೆಸಿದ್ದಾರೆ. 2021 ಕ್ಯಾಲೆಂಡರ್ ವರ್ಷದಲ್ಲಿ ಬಾಬರ್ ಅಜಂ 405 ರನ್ ಗಳಿಸಿದ್ದಾರೆ. ಎರಡು ಶತಕಗಳನ್ನು ಕೂಡ ಅವರು ದಾಖಲಿಸಿದ್ದಾರೆ. ಈ ಮುಲಕ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ.

6. ಮುಶ್ಫಿಕರ್ ರಹೀಮ್: ಬಾಂಗ್ಲಾದೇಶದ ಅನುಭವಿ ಬ್ಯಾಟರ್ ಈ ವರ್ಷ ಅದ್ಭುತ ಪ್ರದರ್ಶನ ನೀಡಿದ್ದಾರೆ. 9 ಇನ್ನಿಂಗ್ಸ್‌ಗಳಲ್ಲಿ ಅವರು 58.14 ಸರಾಸರಿಯಲ್ಲಿ 407 ರನ್ ಗಳಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅವರು 6ನೇ ಸ್ಥಾನದಲ್ಲಿದ್ದಾರೆ.

5. ಆಂಡ್ರ್ಯೂ ಬಾಲ್ಬಿರ್ನಿ: ಐರ್ಲೆಂಡ್ ನಾಯಕ ಆಂಡ್ರೋ ಬಾಲ್ಬಿರ್ನಿ ಈ ವರ್ಷ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ತನ್ನ ತಂಡದ ಪರವಾಗಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿರುವ ಬಾಲ್ಬಿರ್ನಿ 2021 ರಲ್ಲ 14 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿದ್ದು 32.38 ಸರಾಸರಿಯಲ್ಲಿ 421 ರನ್ ಗಳಿಸಿದ್ದಾರೆ.

4. ಹ್ಯಾರಿ ಟೆಕ್ಟರ್: ಟಾಪ್ 10ರಲ್ಲಿ ಕಾಣಿಸಿಕೊಂಡಿರುವ ಇನ್ನೊಬ್ಬ ಐರಿಶ್ ಆಟಗಾರ ಹ್ಯಾರಿ ಟೆಕ್ಟರ್. ಇದು ಟೆಕ್ಟರ್ ಏಕದಿನ ವೃತ್ತಿಜೀವನಕ್ಕೆ ಉತ್ತಮ ಆರಂಭವಾಗಿದೆ. 2021ರಲ್ಲಿ ಟೆಕ್ಟರ್ 14 ಇನ್ನಿಂಗ್ಸ್‌ಗಳಲ್ಲಿ ಐರ್ಲೆಂಡ್ ಪರ ಕಣಕ್ಕಿಳಿದಿದ್ದು 454 ರನ್ ಗಳಿಸಿದ್ದಾರೆ ಈ ಟಾಪ್ 4ನೇ ಆಟಗಾರನಾಗಿದ್ದಾರೆ.

ರೋಹಿತ್‌ ವೇಗದ ಟಿ20 ಶತಕಕ್ಕೆ ಇಂದಿಗೆ 4 ವರ್ಷ: ಇನ್ನೂ ಯಾರಿಂದಲೂ ದಾಖಲೆ ಮುರಿಯಲು ಸಾಧ್ಯವಾಗಿಲ್ಲ!ರೋಹಿತ್‌ ವೇಗದ ಟಿ20 ಶತಕಕ್ಕೆ ಇಂದಿಗೆ 4 ವರ್ಷ: ಇನ್ನೂ ಯಾರಿಂದಲೂ ದಾಖಲೆ ಮುರಿಯಲು ಸಾಧ್ಯವಾಗಿಲ್ಲ!

3. ತಮೀಮ್ ಇಕ್ಬಾಲ್: ತಮೀಮ್ ಇಕ್ಬಾಲ್ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಫಿಟ್‌ನೆಸ್ ವಿಚಾರವಾಗಿ ಅವರು ಹಿನ್ನೆಡೆಯನ್ನು ಅನುಭವಿಸಿದ್ದರೂ ಆಡಿದ ಪಂದ್ಯಗಳಲ್ಲಿ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ. 14 ಇನ್ನಿಂಗ್ಸ್‌ಗಳಲ್ಲಿ ಆಡಿರುವ ಇಕ್ಬಾಲ್ 38.66 ಸರಾಸರಿಯಲ್ಲಿ 464 ರನ್ ಗಳಿಸಿದ್ದಾರೆ.

2. ಜನೆಮನ್ ಮಲನ್: ದಕ್ಷಿಣ ಆಫ್ರಿಕಾದ ಬ್ಯಾಟರ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಆರಂಭವನ್ನು ಪಡೆದಿದ್ದಾರೆ. 2021ರಲ್ಲಿ ಮಲನ್ 7 ಇನ್ನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿದ್ದು 84.83 ಸರಾಸರಿಯಲ್ಲಿ 509 ರನ್ ಗಳಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

1. ಪಾಲ್ ಸ್ಟಿರ್ಲಿಂಗ್: ಈ ವರ್ಷ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿ ಐರ್ಲೆಂಡ್ ತಂಡದ ದಾಂಡಿಗ ಪಾಲ್ ಸ್ಟಿರ್ಲಿಂಗ್ ಕಾಣಿಸಿಕೊಂಡಿದ್ದಾರೆ. ತಮ್ಮ ತಂಡದ ಪರವಾಗಿ ಸ್ಟಿರ್ಲಿಂಗ್ ಅದ್ಭುತ ಪ್ರದರ್ಶನ ನೀಡಿದ್ದಾರೆ. 14 ಇನ್ನಿಂಗ್ಸ್‌ಗಳಲ್ಲಿ ಆಡಿರುವ ಸ್ಟಿರ್ಲಿಂಗ್ 54.23 ಸರಾಸರಿಯಲ್ಲಿ 705 ರನ್ ಗಳಿಸಿದ್ದಾರೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ.

IPL 2022 Mega Auction ಬಗ್ಗೆ ಕಂಪ್ಲೀಟ್ ಮಾಹಿತಿ | Oneindia Kannada

Story first published: Thursday, December 23, 2021, 11:10 [IST]
Other articles published on Dec 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X