ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ.ಆಫ್ರಿಕಾ ಗೆಲ್ಲಲು 6ಕ್ಕೆ 6 ರನ್ ಬೇಕು, ಸಚಿನ್ ಓವರ್ ಎಸೀತೀನಿ ಅಂದ್ರು!

Flashback: South Africa needed six from six, Sachin Tendulkar asked for the ball

ಬೆಂಗಳೂರು: ಬ್ಯಾಟಿಂಗ್‌ಗಾಗಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅದ್ಭುತ ಬೌಲಿಂಗ್‌ಗಾಗಿಯೂ ಗುರುತಿಸಿಕೊಂಡಿದ್ದರು. ಸಚಿನ್ ಬೌಲಿಂಗ್ ಎಸೆದಿದ್ದಕ್ಕಿಂತ ಬ್ಯಾಟಿಂಗ್‌ನಲ್ಲಿ ಮಿಂಚಿದ್ದೇ ಹೆಚ್ಚು. ಆದರೆ ಬೌಲಿಂಗ್‌ನಲ್ಲೂ ಸಚಿನ್ ಅವರದ್ದು ವಿಶೇಷ ದಾಖಲೆಗಳಿವೆ. ಸುಮಾರು 27 ವರ್ಷಗಳಿಗೆ ಹಿಂದೆ ಅಂದರೆ ಇದೇ ನವೆಂಬರ್ 24ಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಅದ್ಭುತ ಬೌಲಿಂಗ್ ಮಾಡಿ ಸೈ ಎನಿಸಿಕೊಂಡಿದ್ದರು.

 ರೋಹಿತ್, ಇಶಾಂತ್ ಭಾರತ ಟೆಸ್ಟ್ ತಂಡದಲ್ಲೇ ಇಲ್ಲ: ಬಿಸಿಸಿಐ ರೋಹಿತ್, ಇಶಾಂತ್ ಭಾರತ ಟೆಸ್ಟ್ ತಂಡದಲ್ಲೇ ಇಲ್ಲ: ಬಿಸಿಸಿಐ

ಇದು ನಡೆದಿದ್ದು 1993ರಲ್ಲಿ ಭಾರತದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ, ಭಾರತ, ಶ್ರೀಲಂಕಾ, ಜಿಂಬಾಬ್ವೆ, ವೆಸ್ಟ್ ಇಂಡೀಸ್ ನಡುವಿನ ಹೀರೋ ಕಪ್ ಟೂರ್ನಿಯಲ್ಲಿ. ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದಿದ್ದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಉತ್ತಮ ಬೌಲಿಂಗ್ ಮಾಡಿದ್ದರು.

ಆಸ್ಟ್ರೇಲಿಯಾದಲ್ಲಿ ಭಾರತ: ಕೆಎಲ್ ರಾಹುಲ್ ತಂಡ ಸೋಲಿಸಿದ ಕೊಹ್ಲಿ ಪಡೆಆಸ್ಟ್ರೇಲಿಯಾದಲ್ಲಿ ಭಾರತ: ಕೆಎಲ್ ರಾಹುಲ್ ತಂಡ ಸೋಲಿಸಿದ ಕೊಹ್ಲಿ ಪಡೆ

ಕೊನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 6 ರನ್ ಬೇಕಿತ್ತು. ಸಚಿನ್ ತೆಂಡೂಲ್ಕರ್ ಕೈಗೆ ಚೆಂಡು ಬಂತು. ಆಮೇಲೇನಾಯ್ತು? ಮುಂದೆ ಓದಿ..

ಬ್ಯಾಟಿಂಗ್‌ನಲ್ಲಿ ಮಿಂಚಿರಲಿಲ್ಲ

ಬ್ಯಾಟಿಂಗ್‌ನಲ್ಲಿ ಮಿಂಚಿರಲಿಲ್ಲ

ಆವತ್ತಿನ ಪಂದ್ಯದಲ್ಲಿ ಸಚಿನ್ ಬ್ಯಾಟಿಂಗ್‌ನಲ್ಲಿ ಮಿನುಗಿರಲಿಲ್ಲ. 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಸಚಿನ್ ಕೇವಲ 15 ರನ್ ಗಳಿಸಿ ರಿಚರ್ಡ್ ಸ್ನೆಲ್‌ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಕೊನೇ ಓವರ್‌ ಅನ್ನು ತಾನೇ ಮುಂದೆ ಬಂದು ಎಸೆದಿದ್ದ ಸಚಿನ್ ಕೇವಲ 3 ರನ್‌ ನೀಡಿದ್ದರು. 1 w, 0, 0, 0, 1, 1 ಇದು ಕೊನೇ ಓವರ್‌ನಲ್ಲಿ ಸಚಿನ್ ನೀಡಿದ ರನ್‌ಗಳು.

ಅಝರುದ್ದೀನ್ ಅರ್ಧ ಶತಕ

ಅಝರುದ್ದೀನ್ ಅರ್ಧ ಶತಕ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ, ನಾಯಕ ಅಝರುದ್ದೀನ್ 90 (118 ಎ), ಪ್ರವೀಣ್ ಆಮ್ರೆ 48 ರನ್‌ನೊಂದಿಗೆ 50 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 195 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಆಂಡ್ರ್ಯೂ ಹಡ್ಸನ್ 62, ಬ್ರಿಯಾನ್ ಮೆಕ್‌ಮಿಲನ್ 48 ರನ್‌ನೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 193 ರನ್ ಬಾರಿಸಿ 2 ರನ್‌ನಿಂದ ಶರಣಾಗಿತ್ತು. ಕೊನೇ ಓವರ್‌ನಲ್ಲಿ ಆಫ್ರಿಕಾ ಗೆಲ್ಲಲು 6 ಎಸೆತಗಳಲ್ಲಿ 6 ರನ್ ಬೇಕಿತ್ತು. ತಾನು ಓವರ್‌ ಎಸೆಯುತ್ತೀನಿ ಅಂತ ಮುಂದೆ ಬಂದಿದ್ದ ಸಚಿನ್ 1 ವೈಡ್ ಸೇರಿ ಒಟ್ಟು 3 ರನ್ ನೀಡಿ ಭಾರತದ ಗೆಲುವಿಗೆ ಕಾರಣರಾಗಿದ್ದರು.

ಗೆಲ್ಲಲು ಬಿಟ್ಟುಕೊಟ್ಟಿರಲಿಲ್ಲ

ಸಚಿನ್ ಓವರ್‌ ಎಸೆಯುವಾಗ ಬ್ರಿಯಾನ್ ಮೆಕ್‌ಮಿಲನ್ ಮತ್ತು ಅಲನ್ ಡೊನಾಲ್ಡ್ ಕ್ರೀಸ್‌ನಲ್ಲಿದ್ದರು. ಆದರೆ ಸಚಿನ್ ಎದುರಾಳಿಗೆ ಗೆಲ್ಲಲು ಬಿಟ್ಟುಕೊಟ್ಟಿರಲಿಲ್ಲ. ಅಂದ್ಹಾಗೆ ಟೂರ್ನಿಯ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ತಂಡಗಳು ಕಾದಾಡಿದ್ದವು. ಇದರಲ್ಲಿ ಭಾರತ 102 ರನ್‌ನಿಂದ ಗೆದ್ದಿತ್ತು.

ಸಚಿನ್ ಬೌಲಿಂಗ್ ದಾಖಲೆ

ಸಚಿನ್ ತೆಂಡೂಲ್ಕರ್ ಅವರ ಬೌಲಿಂಗ್ ಅಂಕಿ-ಅಂಶಗಳೂ ಕುತೂಹಲಕಾರಿಯಾಗಿದೆ. 145 ಏಕದಿನ ಇನ್ನಿಂಗ್ಸ್‌ಗಳನ್ನಾಡಿರುವ ಸಚಿನ್ 46 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು 270 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 154 ವಿಕೆಟ್‌ಗಳು, 1 ಟಿ20ಐ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ ನಲ್ಲಿ ಶತಕದ ಶತಕ ಬಾರಿಸಿರುವ ವಿಶ್ವದ ಏಕಮಾತ್ರ ಆಟಗಾರ ಸಚಿನ್!.

Story first published: Wednesday, November 25, 2020, 14:59 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X