ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಮ್ಮ ವೈಯಕ್ತಿಕ ಆಟದ ಕಡೆಗೆ ಮಾತ್ರ ಗಮನ ನೀಡಿ: ಪಿಸಿಬಿ ತಾಕೀತು

Focus On Your Own Cricket says Pcb Ceo Wasim Khan

ಲಾಹೋರ್: ಪಾಕಿಸ್ತಾನದ ಕ್ರಿಕೆಟ್‌ ಬೋರ್ಡ್‌ನ ಸಿಇಒ ವಾಸಿಮ್ ಖಾನ್ ಪಾಕ್ ಕ್ರಿಕೆಟ್ ಆಟಗಾರರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ನಿಮ್ಮ ವೈಯಕ್ತಿಕ ಆಟದತ್ತ ಗಮನವನ್ನು ಹರಿಸಿ, ಅದುಬಿಟ್ಟು ಮಂಡಳಿಯ ನಿರ್ಧಾರ ಇತರ ಆಟಗಾರರ ಕುರಿತಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಪಾಕಿಸ್ತಾನ ಕ್ರಿಕೆಟಿಗ ಮೊಹಮದ್ ಹಫೀಜ್ ಇತ್ತೀಚೆಗೆ ನೀಡಿದ ಹೇಳಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ವಾಸಿಮ್ ಖಾನ್ ಈ ಹೇಳಿಕೆಯನ್ನು ನೀಡಿದ್ದಾರೆ. ಐದು ವರ್ಷ ಅಮಾನತಾಗಿದ್ದ ಶಾರ್ಜೀಲ್ ಖಾನ್ ವಿರುದ್ಧದ ಕ್ರಮಗಳನ್ನು ಹಿಂತೆಗೆದುಕೊಳ್ಳಲಾಗಿತ್ತು. ಇದಕ್ಕೆ ಹಫೀಸ್ ಪ್ರತಿಕ್ರಿಯಿಸಿದ್ದರು.

ತನ್ನ ನೆಚ್ಚಿನ ಭಾರತದ ಕ್ರಿಕೆಟರ್ ಹೆಸರಿಸಿದ ಪಾಕ್ ದಂತಕತೆ ಮಿಯಾಂದಾದ್ತನ್ನ ನೆಚ್ಚಿನ ಭಾರತದ ಕ್ರಿಕೆಟರ್ ಹೆಸರಿಸಿದ ಪಾಕ್ ದಂತಕತೆ ಮಿಯಾಂದಾದ್

2017ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಲ್ಗೊಂಡದ್ದ ಕಾರಣಕ್ಕೆ ಶಾರ್ಜೀಲ್ ಖಾನ್ ವಿರುದ್ಧ ಪಿಸಿನಿ ಐದು ವರ್ಷಗಳ ಕಾಲ ನಿಷೇಧವನ್ನು ಹೇರಿತ್ತು. ಆದರೆ ಕಳೆದ ವರ್ಷ ಆಗಸ್ಟ್‌ನಲ್ಲಿ ಈ ನಿಷೇಧವನ್ನು ಏಕಾಏಕಿ ವಾಪಾಸ್ ಪಡೆಯುವ ನಿರ್ಧಾರಕ್ಕೆ ಒಪಿಸಿಬಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯ ಪಿಎಸ್‌ಎಲ್ ಟೂರ್ನಿಯಲ್ಲಿ ಶಾರ್ಜೀಕ್ ಖಾನ್ ಪಾಲ್ಗೊಂಡಿದ್ದರು. ಆದರೆ ಇಲ್ಲಿ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ಶಾರ್ಜಿಲ್ ವಿಫಲರಾಗಿದ್ದರು.

ಈ ಬಗ್ಗೆ ಶಾರ್ಜಿಲ್ ದೈಹಿಕ ಸಾಮರ್ಥ್ಯದ ಬಗ್ಗೆ ಹಫೀಸ್ ಅವರ ಮುಂದೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಹಫೀಜ್ ಘನತೆ ಮತ್ತು ಹೆಮ್ಮೆಯನ್ನು ಯಾವುದೇ "ಹೆಚ್ಚುವರಿ ಪ್ರತಿಭೆ"ಯ ಜೊತೆಗೆ ಹೋಲಿಕೆ ಮಾಡಬಾರದು ಎಂದು ಸೂಚ್ಯವಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ನಿರ್ಧಾರವನ್ನು ಪ್ರಶ್ನಿಸಿದ್ದರು.

ಸ್ಕಾಟ್ಲೆಂಡ್ ಕ್ರಿಕೆಟರ್ ಮಜೀದ್ ಹಕ್‌ ಕೊರೊನಾವೈರಸ್ ಸೋಂಕಿತಸ್ಕಾಟ್ಲೆಂಡ್ ಕ್ರಿಕೆಟರ್ ಮಜೀದ್ ಹಕ್‌ ಕೊರೊನಾವೈರಸ್ ಸೋಂಕಿತ

ಈ ಹೇಳಿಕೆಯನ್ನು ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ನ ಮುಖ್ಯಸ್ಥ ವಾಸಿಮ್ ಖಾನ್ ಗಂಭಿರವಾಗಿ ತೆಗದುಕೊಂಡಿದ್ದಾರೆ. ಪ್ರಸಕ್ತ ಆಟಗಾರರು ಸಾರ್ವಜನಿಕವಾಗಿ ಬೆರೆ ಆಟಗಾರರನ್ನು ಮಿಮರ್ಶೆಗೆ ಒಳಪಡಿಸುವುದು ಮತ್ತು ಮಂಡಳಿಯ ನಿರ್ಧಾರಗಳ ಬಗ್ಗೆ ಹೇಳಿಕೆಗಳನ್ನು ನೀಡಬಾರದು ಎಂದಿದ್ದಾರೆ.

Story first published: Sunday, March 22, 2020, 14:01 [IST]
Other articles published on Mar 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X