ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KKR vs RR: ಕೆಕೆಆರ್ ತಂಡದಿಂದ ಅಯ್ಯರ್ ಕೈ ಬಿಟ್ಟ ವಿಚಾರ; ಆತ ಏನೂ ಮಾಡಿಲ್ಲ ಎಂದ ಗವಾಸ್ಕರ್

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸತತ ಐದು ಪಂದ್ಯಗಳಲ್ಲಿ ಸೋತ ನಂತರ ಸೋಮವಾರ ಗೆಲುವಿನ ಹಾದಿಗೆ ಮರಳಿತು. ಮುಂಬೈನ ವಾಂಖೆಡೆ ಸ್ಟೆಡಿಯಂನಲ್ಲಿ ನಡೆದ ಐಪಿಎಲ್ 2022 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಜಯ ಗಳಿಸಿದೆ.

ಕಳೆದ ಐಪಿಎಲ್ ಋತುವಿನಲ್ಲಿ ಭಾರೀ ಛಾಪು ಮೂಡಿಸಿದ್ದ ಕೆಕೆಆರ್‌ನ ಸ್ಟಾರ್ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ಕೈಬಿಟ್ಟು ಕೆಕೆಆರ್ ದೊಡ್ಡ ಸಾಹಸಕ್ಕೆ ಕೈ ಹಾಕಿದೆ.

ಐಪಿಎಲ್ 2022ರಲ್ಲಿ ವೆಂಕಟೇಶ್ ಅಯ್ಯರ್ ಕಠಿಣ ಸಮಯವನ್ನು ಎದುರಿಸುತ್ತಿದ್ದು ಮತ್ತು ಅವರ ಬದಲಿಗೆ ಅನುಕುಲ್ ರಾಯ್ ಅವರನ್ನು ಕರೆತರುವುದರೊಂದಿಗೆ ಕೆಕೆಆರ್‌ನ ಆಡುವ ಹನ್ನೊಂದರ ಬಳಗದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡರು. ಅನುಕುಲ್ ರಾಯ್ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ತಂಡದ ನಿರ್ಧಾರ ಲಾಭಾಂಶವನ್ನು ನೀಡಿತು. ಅನುಕುಲ್ ರಾಯ್ ಅವರು ನಾಲ್ಕು ಓವರ್‌ಗಳಲ್ಲಿ ಕೇವಲ 28 ರನ್‌ಗಳನ್ನು ನೀಡಿ ಒಂದು ವಿಕೆಟ್‌ ಪಡೆದರು.

Fomer Indian Cricketer Sunil Gavaskar Reacted To KKR Dropping Star All-rounder Venkatesh Iyer

ಇನ್ನು ವೆಂಕಟೇಶ್ ಅಯ್ಯರ್ ಅವರನ್ನು ಕೈಬಿಡುವ ಕೆಕೆಆರ್ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಆಲ್‌ರೌಂಡರ್ 'ಎರಡನೇ ಋತುವಿನ ಸಿಂಡ್ರೋಮ್' ಮೂಲಕ ಹೋಗಬಹುದು ಎಂದು ಹೇಳಿದರು.

"ಕೆಕೆಆರ್ ತಂಡ ಒಂದೆರಡು ಬದಲಾವಣೆಗಳನ್ನು ಮಾಡಬೇಕಾಗಿತ್ತು. ನಾನು ವೆಂಕಟೇಶ್ ಅಯ್ಯರ್ ಮತ್ತು ಯಾರಿಗಾದರೂ ವಿಶ್ರಾಂತಿ ನೀಡುವ ಬಗ್ಗೆ ಮಾತನಾಡುತ್ತಿದ್ದೆ. ಅವರು 9 ಅಥವಾ 10 ಪಂದ್ಯಗಳನ್ನು ಆಡಿದ್ದಾರೆ. ಬ್ಯಾಟ್ ಅಥವಾ ಬಾಲ್‌ನಿಂದ ಏನನ್ನೂ ಮಾಡಿಲ್ಲ. ಇದು ಅವರಿಗೆ ಎರಡನೇ ಸೀಸನ್ ಆಗಿರಬಹುದು. ಆದರೆ ಉತ್ತಮ ಪ್ರದರ್ಶನ ಬರದಿದ್ದರೆ ಕೈ ಬಿಡಲೇಬೇಕಾಗುತ್ತದೆ. ಅದಕ್ಕಾಗಿಯೇ ಕೆಕೆಆರ್ ತಂಡ ಅನುಕುಲ್ ರಾಯ್ ಅವರಂತಹವರ ಜೊತೆ ಹೋಗಲು ನಿರ್ಧರಿಸಿದ್ದಾರೆ," ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನ ಪಂದ್ಯ ಪೂರ್ವ ಶೋನಲ್ಲಿ ಹೇಳಿದರು.

Fomer Indian Cricketer Sunil Gavaskar Reacted To KKR Dropping Star All-rounder Venkatesh Iyer

ವೆಂಕಟೇಶ್ ಅಯ್ಯರ್ ಕಳೆದ ಋತುವಿನಲ್ಲಿ ಕೆಕೆಆರ್‌ಗಾಗಿ ಭರ್ಜರಿ ಪ್ರದರ್ಶನ ನೀಡಿದ್ದರು. 10 ಪಂದ್ಯಗಳಲ್ಲಿ 41.11ರ ಅದ್ಭುತ ಸರಾಸರಿ ಮತ್ತು 128.47ರ ಸ್ಟ್ರೈಕ್-ರೇಟ್‌ನಲ್ಲಿ 370 ರನ್ ಗಳಿಸಿದ್ದರು. ಅವರು ಐಪಿಎಲ್ 2021ರಲ್ಲಿ ತಮ್ಮ ಹೆಸರಿಗೆ ನಾಲ್ಕು ಅರ್ಧ ಶತಕಗಳನ್ನು ಸಿಡಿಸಿದ್ದರು.

ಇನ್ನು ವೆಂಕಟೇಶ್ ಅಯ್ಯರ್ ಅವರು ಬೌಲಿಂಗ್‌ನಲ್ಲಿ ಕರಾಮತ್ತು ತೋರಿಸಿ, 8.11ರ ಎಕಾನಮಿ ದರದಲ್ಲಿ ಒಟ್ಟು ಮೂರು ವಿಕೆಟ್‌ಗಳನ್ನು ಪಡೆದರು. ಅವರ ಪ್ರದರ್ಶನಗಳು ನಂತರ ಭಾರತ ತಂಡವನ್ನು ಪ್ರವೇಶಿಸಲು ಸಹಾಯ ಮಾಡಿತು.

ಆದರೆ ಆ ಪ್ರದರ್ಶನವನ್ನು ಐಪಿಎಲ್ 2022ರಲ್ಲಿ ಅಯ್ಯರ್ ಮುಂದುವರೆಸಲು ಸಾಧ್ಯವಾಗಲಿಲ್ಲ. ಈ ಋತುವಿನಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ, ಅವರು 16.50 ಸರಾಸರಿಯಲ್ಲಿ ಕೇವಲ 132 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಅಜೇಯ ಅರ್ಧಶತಕವೂ ಸೇರಿದೆ. ಈ ಐಪಿಎಲ್ ಋತುವಿನಲ್ಲಿ ಅವರ ಸ್ಟ್ರೈಕ್-ರೇಟ್ 97.78 ಇದೆ.

RCB ಅಭಿಮಾನಿಗಳಿಗೆ ಗುಜರಾತ್ ಗೆಲ್ಲಬೇಕಾಗಿತ್ತು | Oneindia Kannada

ಇನ್ನು ಅವರ ಚೆಂಡು ಕೈಯಲ್ಲಿದ್ದರೆ, ಅಯ್ಯರ್‌ ಪ್ರದರ್ಶನ ಇನ್ನೂ ಕೆಟ್ಟದಾಗಿದೆ. ಅವರು ಕೇವಲ ಮೂರು ಓವರ್‌ಗಳನ್ನು ಬೌಲ್ ಮಾಡಿದ್ದಾರೆ, ಒಂದು ವಿಕೆಟ್ ಪಡೆಯದೇ 12.67ರ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.

Story first published: Tuesday, May 3, 2022, 19:41 [IST]
Other articles published on May 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X