ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

91 ವರ್ಷ ವಯಸ್ಸಾದರೂ ಕ್ರಿಕೆಟ್ ಆಡುತ್ತಿದ್ದಾರೆ ಈ ಹಿರಿಯ ಕ್ರಿಕೆಟಿಗ

 For 91-year-old Crowell it is never too old to play cricket

ಬಹುತೇಕ ಕ್ರಿಕೆಟಿಗರು 30-35 ವರ್ಷ ವಯಸ್ಸಾದರೆ ಸಾಕು ಕ್ರಿಕೆಟ್‍ನಿಂದ ನಿವೃತ್ತಿ ಪಡೆದು ಕಾಮೆಂಟರಿ ಅಥವಾ ಕೋಚಿಂಗ್ ಕಡೆ ಮುಖ ಮಾಡಿಬಿಡುತ್ತಾರೆ. 35 ದಾಟಿದ ನಂತರ ಕ್ರಿಕೆಟ್ ಆಡುವಷ್ಟು ಫಿಟ್‌ನೆಸ್ ಇರುವುದಿಲ್ಲ ಎಂಬುದು ಬಹುತೇಕ ಮಂದಿಯ ವಾದ. ಆದರೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೌಗ್ ಕ್ರೊವೆಲ್ ಈ ವಿಷಯದಲ್ಲಿ ತುಂಬಾ ವಿಭಿನ್ನ ಮತ್ತು ಮಾದರಿ ಕೂಡ ಹೌದು.

ಡೌಗ್ ಕ್ರೊವೆಲ್ ಅವರಿಗೆ 91 ವರ್ಷ ವಯಸ್ಸಾಗಿದೆ, ಆದರೂ ಸಹ ಕ್ರಿಕೆಟ್ ಮೇಲೆ ಅವರಿಗೆ ಪ್ರೀತಿ ಕೊಂಚವೂ ಕಡಿಮೆಯಾಗಿಲ್ಲ. 16 ವರ್ಷವಿದ್ದಾಗ ಕ್ರಿಕೆಟ್ ಆಡಲು ಆರಂಭಿಸಿದ ಕ್ರೊವೆಲ್ ಅವರಿಗೆ ಇಂದಿಗೂ ಸಹ ಕ್ರಿಕೆಟ್ ಮೇಲೆ ಮೊದಲಿನಷ್ಟೇ ಪ್ರೀತಿ ಮತ್ತು ಆಸಕ್ತಿಯಿದೆ. ಇಂದಿಗೂ ನುರಿತ ಕ್ರಿಕೆಟಿಗರ ಜೊತೆ ಆಟವಾಡುವ ಕ್ರೊವೆಲ್ ಅವರು ಇತ್ತೀಚಿಗಷ್ಟೆ ಕ್ರಿಕೆಟ್ ಮೇಲಿನ ತಮ್ಮ ಪ್ರೀತಿಯ ಕುರಿತು ಮಾತನಾಡಿದ್ದಾರೆ.

'ಇಷ್ಟು ವರ್ಷವಾದರೂ ಸಹ ನನ್ನಲ್ಲಿ ಕ್ರಿಕೆಟ್ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ, ಕ್ರಿಕೆಟ್ ಆಡಲು ನಾನು ಆಯ್ಕೆ ಆದಾಗಲೆಲ್ಲ ನನ್ನನ್ನು ನಾನು ಹುರಿದುಂಬಿಸಿಕೊಳ್ಳುತ್ತೇನೆ, ಈ ವಯಸ್ಸಿನಲ್ಲಿಯೂ ಸಹ ಕ್ರಿಕೆಟ್ ಆಡುವಷ್ಟು ಫಿಟ್‌ನೆಸ್ ನನ್ನಲ್ಲಿದೆ' ಎಂದು ಡೌಗ್ ಕ್ರೊವೆಲ್ ಕ್ರಿಕೆಟ್ ಆಡುವ ಕುರಿತು ಖುಷಿ ವ್ಯಕ್ತಪಡಿಸಿದರು. 30ರ ಆಸುಪಾಸಿನಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳುವ ಆಟಗಾರರು ಫಿಟ್‌ನೆಸ್ ಕಾಪಾಡಿಕೊಳ್ಳಲು ನುರಿತ ಕ್ರಿಕೆಟ್ ಕ್ಲಬ್‌ಗಳಿಗೆ ಸೇರಿಕೊಳ್ಳುತ್ತಾರೆ ಎಂದು ಸೌತ್ ವೇಲ್ಸ್‌ನ ನುರಿತ ಕ್ರಿಕೆಟ್ ಕ್ಲಬ್ ಕುರಿತು ಕ್ರೊವೆಲ್ ಹೇಳಿದರು.

ಮತ್ತೆ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲು ಸ್ಟೀವ್ ಸ್ಮಿತ್ ಅರ್ಹನಲ್ಲ ಎಂದ ಮಾಜಿ ಕ್ರಿಕೆಟಿಗಮತ್ತೆ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲು ಸ್ಟೀವ್ ಸ್ಮಿತ್ ಅರ್ಹನಲ್ಲ ಎಂದ ಮಾಜಿ ಕ್ರಿಕೆಟಿಗ

ಬಾಲ್ಯದ ದಿನಗಳಲ್ಲಿ ಕ್ರಿಕೆಟ್ ಆಡಲು ಬೇಕಾದ ಸವಲತ್ತುಗಳಿಲ್ಲದೆ ಚಿಕ್ಕಪುಟ್ಟ ಮೈದಾನಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಕಷ್ಟಪಟ್ಟು ಕ್ರಿಕೆಟ್ ಆಡುತ್ತಿದ್ದ ಕಾರಣದಿಂದಲೇ ಇಂದು ಈ ವಯಸ್ಸಿನಲ್ಲಿಯೂ ಕ್ರಿಕೆಟ್ ಆಡುತ್ತಿರುವುದಾಗಿ ಕ್ರೊವೆಲ್ ತಿಳಿಸಿದರು. ಈ ಇಳಿವಯಸ್ಸಿನಲ್ಲಿಯೂ ಸಹ ಉತ್ತಮ ಫಿಟ್‌ನೆಸ್ ಕಾಪಾಡಿಕೊಳ್ಳಲು ವಾರದಲ್ಲಿ 3 ಬಾರಿ ಟೆನಿಸ್ ಆಡುವುದಾಗಿ ಹೇಳಿಕೊಂಡ ಕ್ರೊವೆಲ್ ಕೆಲವೊಂದಿಷ್ಟು ಮಂದಿ ನೀವು ತಪ್ಪಾದ ಹೊಡೆತಗಳನ್ನು ಹೊಡೆಯುತ್ತೀರ ಎಂದು ಮಾತನಾಡಿದ್ದಾರೆ ಆದರೆ ಆ ಹೊಡೆತಗಳನ್ನು ನಾನು 70 ವರ್ಷಗಳಿಂದ ಬಾರಿಸುತ್ತಾ ಬಂದಿದ್ದೇನೆ ಎಂದು ಕ್ರೊವೆಲ್ ತಮ್ಮ ಬ್ಯಾಟಿಂಗ್ ಶೈಲಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

Story first published: Monday, May 17, 2021, 18:42 [IST]
Other articles published on May 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X