ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೂಜಾರ, ಅಜಿಂಕ್ಯ, ಇಶಾಂತ್ ಹಾಗೂ ನನಗೆ ಇದು ವಿಶ್ವಕಪ್ ಇದ್ದಂತೆ: WTC ಫೈನಲ್ ಬಗ್ಗೆ ಅಶ್ವಿನ್ ಹೇಳಿಕೆ

For me, Pujara, rahane and Ishant, it is like World Cup says R Ashwin about WTC Final

ಇಂಗ್ಲೆಂಡ್ ತಂಡವನ್ನು 3-1 ಅಂತರದಿಂದ ಮಣಿಸಿರುವ ಟೀಮ್ ಇಂಡಿಯಾ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸುವ ಅರ್ಹತೆಯನ್ನು ಪಡೆದುಕೊಂಡಿದೆ. ಈ ಬಗ್ಗೆ ಟೀಮ್ ಇಂಡಿಯಾ ಅನುಭವಿ ಆಟಗಾರ ಆರ್ ಅಶ್ವಿನ್ ಪ್ರತಿಕ್ರಿಯೆ ನೀಡಿದ್ದಾರೆ.

ಪಂದ್ಯದ ಗೆಲುವಿನ ನಂತರ ಬಿಸಿಸಿಐ ಅಧಿಕೃತ ವೆಬ್‌ಸೈಟ್‌ನಲ್ಲಿ ಟೀಮ್ ಇಂಡಿಯಾದ ಹಲವಾರು ಕ್ರಿಕೆಟಿಗರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಹಾದಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಆರ್ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಅನ್ನು ವಿಶ್ವಕಪ್‌ಗೆ ಹೋಲಿಸಿ ಮಾತನಾಡಿದರು. 2021ರ ಐಪಿಎಲ್ ಆವೃತ್ತಿಯ ಅಂತ್ಯದ ಬಳಿಕ ಭಾರತ ಈ ಮಹತ್ವದ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

ಸುನಿಲ್ ಗವಾಸ್ಕರ್ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ 50 ವರ್ಷಸುನಿಲ್ ಗವಾಸ್ಕರ್ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ 50 ವರ್ಷ

"ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ ಹಾಗೂ ನನ್ನಂತ ಆಟಗಾರರಿಗೆ, ಯಾರು 2019ರ ವಿಶ್ವಕಪ್ ಆಡಿಲ್ಲವೋ ಅವರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಕ್ಷರಶಃ ವಿಶ್ವಕಪ್. ಎಲ್ಲರ ಪರವಾಗಿಯೂ ನಾನು ಸಾಕಷ್ಟು ಸಂತಸಗೊಂಡಿದ್ದೇನೆ. ಖಂಡಿತವಾಗಿಯೂ ಇಡೀ ತಂಡವೇ ಆ ಹಂತಕ್ಕೆ ತಲುಪಿದೆ" ಎಂದಿದ್ದಾರೆ ಆರ್ ಅಶ್ವಿನ್.

"ನಾವು ಸೂಕ್ತ ಸಂದರ್ಭದಲ್ಲಿ ಆದಷ್ಟು ವೇಗವಾಗಿ ಪರಿಸ್ಥಿತಿಗೆ ಹೊಂದಿಕೊಂಡರೆ ಸಕಾರಾತ್ಮಕ ಫಲಿತಾಂಶವನ್ನು ಪಡೆಯಲಿದ್ದೇವೆ. ನಾವು ಫೈನಲ್ ಪಂದ್ಯವಾಗಿ ಒಂದು ಪಂದ್ಯವನ್ನು ಹೊಂದಿದ್ದೇವೆ. ಮೂರು ಪಂದ್ಯಗಳು ಇದ್ದರೆ ಅದು ಉತ್ತಮವಾಗಿರುತ್ತಿತ್ತು. ಆದರೆ ನಾವು ಉತ್ತಮ ಪ್ರಯತ್ನವನ್ನು ನೀಡಿ ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದೇವೆ" ಎಂದಿದ್ದಾರೆ ಆರ್ ಅಶ್ವಿನ್.

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ, ಸಂಪೂರ್ಣ ಮಾಹಿತಿಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ, ಸಂಪೂರ್ಣ ಮಾಹಿತಿ

ಇನ್ನು ಇದೇ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಕೂಡ ಪ್ರತಿಕ್ರಿಯಿಸುತ್ತಾ, "ಈ ಸರಣಿಯ ಭಾಗವಾಗಿ ಸುದೀರ್ಘ ಕಾಲದಿಂದ ಅತ್ಯುತ್ತಮ ಪ್ರದರ್ಶನ ನೀಡಿರುವುದರಿಂದ ಫೈನಲ್ ಪ್ರವೇಶಕ್ಕೆ ಭಾರತೀಯ ತಂಡ ಅರ್ಹವಾಗಿದೆ. ಈಗ ನಾವು ಸ್ವಲ್ಪ ನಿರಾಳರಾಗಿದ್ದೇವೆ. ಕಳೆದ ಎರಡು ಎರಡೂವರೆ ವರ್ಷಗಳಲ್ಲಿ ನಾವು ಹೇಗೆ ಆಡಿದ್ದೇವೆ ಎಂಬುದನ್ನು ನೀವು ಗಮನಿಸಿದ್ದರೆ ನಾವು ಫೈನಲ್‌ಗೆ ಪ್ರವೇಶಿಸಲು ಅರ್ಹರಾಗಿದ್ದೇವೆ. ಈಗ ನಾವು ತಂಡವಾಗಿ ಒಗ್ಗೂಡಿ ದೊಡ್ಡ ಪಂದ್ಯದತ್ತ ಚಿತ್ತ ನೆಡುತ್ತಿದ್ದೇವೆ. ಅದು ನಮ್ಮೆಲ್ಲರಿಗೂ ಉತ್ಸಾಹವನ್ನು ನೀಡುತ್ತಿದೆ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.

Story first published: Sunday, March 7, 2021, 10:58 [IST]
Other articles published on Mar 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X