ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫೋರ್ಬ್ಸ್ ಸೆಲೆಬ್ರಿಟಿ ಪಟ್ಟಿ: ಕೊಹ್ಲಿ ದ್ವಿತೀಯ, ಹಾರ್ದಿಕ್‌ಗೆ ಗಮನಾರ್ಹ ಸ್ಥಾನ!

ಕೊಹ್ಲಿ ದ್ವಿತೀಯ, ಹಾರ್ದಿಕ್‌ಗೆ ಗಮನಾರ್ಹ ಸ್ಥಾನ! | Oneindia Kannada
Forbes India Celebrity List: Virat Kohli second, Hardik Pandya top gainer

ನವದೆಹಲಿ, ಡಿಸೆಂಬರ್ 5: ಪ್ರಸಕ್ತ 2018ನೇ ಸಾಲಿನ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯನ್ನು ಫೋರ್ಬ್ಸ್ ಬುಧವಾರ (ಡಿಸೆಂಬರ್ 5) ಬಿಡುಗಡೆ ಮಾಡಿದೆ. ಇದರಲ್ಲಿ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಸತತ ಮೂರನೇ ಬಾರಿಗೆ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಕೆಕೆಆರ್ ಮಾಜಿ ನಾಯಕ ಗಂಭೀರ್‌ಗೆ ವಿಶೇಷ ಸಂದೇಶ ಕಳುಹಿಸಿದ ಶಾರೂಖ್ಕೆಕೆಆರ್ ಮಾಜಿ ನಾಯಕ ಗಂಭೀರ್‌ಗೆ ವಿಶೇಷ ಸಂದೇಶ ಕಳುಹಿಸಿದ ಶಾರೂಖ್

ಪ್ರಕಟಿತ ಫೋರ್ಬ್ಸ್ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 5ನೇ, ಅಮೀರ್ ಖಾನ್ 6ನೇ, ಅಮಿತಾಬ್ ಬಚ್ಚನ್ 7ನೇ, ರಣವೀರ್ ಸಿಂಗ್ 8ನೇ, ಸಚಿನ್ ತೆಂಡೂಲ್ಕರ್ 9ನೇ, ಅಜಯ್ ದೇವಗನ್ 10ನೇ ಸ್ಥಾನ ಪಡೆದುಕೊಂಡಿದ್ದಾರೆ.

ಆಸೀಸ್ ಎದುರು ಭಾರತ ಸೋತರೂ ಸೋಲಬಹುದು: ಟ್ವೀಟಿಗರ ಆಕ್ರೋಶ!ಆಸೀಸ್ ಎದುರು ಭಾರತ ಸೋತರೂ ಸೋಲಬಹುದು: ಟ್ವೀಟಿಗರ ಆಕ್ರೋಶ!

ಕ್ರಿಕೆಟಿಗ, ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಕ್ರೀಡಾಪಟುಗಳ ಸಾಲಿನಲ್ಲಿ ಅಧಿಕ ಲಾಭಾಂಶ ಪಡೆದವರಲ್ಲಿ ಮುಂಚೂಣಿಯಲ್ಲಿದ್ದಾರೆ. ಕ್ರೀಡೆ ಮತ್ತು ನಟನೆಗೆ ಸಂಬಂಧಿಸಿ ಈಬಾರಿ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದವರ ಇನ್ನೊಂದಿಷ್ಟು ಮಾಹಿತಿ ಕೆಳಗಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಭಾರತೀಯ ಸೆಲೆಬ್ರಿಟಿಗಳ ಫೋರ್ಬ್ಸ್ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಬೆನ್ನಲ್ಲೇ ಸ್ಥಾನ ಗಿಟ್ಟಿಸಿಕೊಂಡಿರುವ ವಿರಾಟ್ ಈ ವರ್ಷ ಸುಮಾರು 228.09 ಕೋ.ರೂ. ಆದಾಯ ಗಳಿಸಿದ್ದಾರೆ. 2017ನೇ ಸಾಲಿಗೆ ಹೋಲಿಸಿದರೆ ಈ ಗಳಿಕೆ ಸುಮಾರು ಶೇ. 116.53ರಷ್ಟು ಹೆಚ್ಚಿದೆ. ಹೀಗಾಗಿ ಕೊಹ್ಲಿ ಅಗ್ರ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

ಭಾರತೀಯ ಸೆಲೆಬ್ರಿಟಿಗಳ ಸಾಲಿನಲ್ಲಿ ಸಲ್ಲು ಭಾಯಿ ಈ ಬಾರಿಯೂ ಅಗ್ರಸ್ಥಾನ ಅಲಂಕರಿಸಿದ್ದಾರೆ. ಈ ಬಾರಿ ಸಲ್ಮಾನ್ 253.25 ಕೋ.ರೂ ಆದಾಯ ಗಳಿಸಿದ್ದಾರೆ. ಇದು ಮೂರನೇ ಬಾರಿ ಸಲ್ಲುಗೆ ಲಭಿಸುತ್ತಿರುವ ಅಗ್ರಸ್ಥಾನ.

ಪಾದಾರ್ಪಣೆ ಆಟಗಾರರು

ಪಾದಾರ್ಪಣೆ ಆಟಗಾರರು

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಆಟಗಾರರಲ್ಲಿ ಜಸ್‌ಪ್ರೀತ್ ಬೂಮ್ರಾ ಮತ್ತು ಮನೀಶ್ ಪಾಂಡೆ ಇದೇ ಮೊದಲ ಬಾರಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಭಾರತೀಯ ಅಗ್ರ 100 ಸೆಲೆಬ್ರಿಟಿಗಳ ಸಾಲಿನಲ್ಲಿ ಬೂಮ್ರಾ 60ನೇ ಸ್ಥಾನದಲ್ಲಿದ್ದರೆ, ಪಾಂಡೆ 77ನೇ ಸ್ಥಾನ ಪಡೆದುಕೊಂಡಿದ್ದಾರೆ.

ಹಾರ್ದಿಕ್ ಮೊದಲಿಗ

ಹಾರ್ದಿಕ್ ಮೊದಲಿಗ

ಗಾಯದ ಕಾರಣ ಮುಂಬರಲಿರುವ ಆಸೀಸ್ ಪ್ರವಾಸದಿಂದ ದೂರ ಉಳಿದಿರುವ ಹಾರ್ದಿಕ್ ಪಾಂಡ್ಯ, ಕ್ರೀಡಾಪಟುಗಳ ಸಾಲಿನಲ್ಲಿ ಅಧಿಕ ಲಾಭಾಂಶ ಪಡೆದವರಲ್ಲಿ ಮೊದಲಿಗರಾಗಿ ಗುರುತಿಸಿಕೊಂಡಿದ್ದಾರೆ. ವೇಗಿ ಭುವನೇಶ್ವರ್ ಕುಮಾರ್, ಕೆಎಲ್ ರಾಹುಲ್ ಕೂಡ ಈ ಯಾದಿಯಲ್ಲಿ ಗಮನ ಸೆಳೆದಿದ್ದಾರೆ.

Story first published: Wednesday, December 5, 2018, 18:10 [IST]
Other articles published on Dec 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X