ಭಾರತ ತಂಡಕ್ಕೆ ವಿದೇಶಿ ಕೋಚ್‌ ನೇಮಕದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಗೌತಮ್ ಗಂಭೀರ್

ಭಾರತ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಭಾರತ ತಂಡಕ್ಕೆ ವಿದೇಶಿ ಕೋಚ್‌ಗಳ ಅಗತ್ಯವಿಲ್ಲ ಎಂದು ಹೇಳುವ ಮೂಲಕ ದೇಶೀಯ ಕೋಚ್‌ಗಳ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಭಾರತೀಯ ಕ್ರಿಕೆಟ್ ತಂಡಕ್ಕೆ ಭಾರತೀಯ ತರಬೇತುದಾರರನ್ನೇ ನೇಮಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಭಾರತೀಯ ಕೋಚ್‌ಗಳು ಈ ಮೊದಲು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

2007ರಲ್ಲಿ ನಡೆದ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ, ಭಾರತ ಚಾಂಪಿಯನ್ ಆಗಿತ್ತು. ಅಂದು ಭಾರತ ತಂಡಕ್ಕೆ ಕೋಚ್ ಆಗಿದ್ದವರು ಲಾಲ್ ಚಂದ್ ರಜಪೂತ್ ಎಂದು ನೆನಪು ಮಾಡಿಕೊಂಡಿರುವ ಗಂಭೀರ್, ವಿದೇಶಿ ಕೋಚ್‌ಗಳನ್ನು ಟೀಕಿಸಿದ್ದು, ಅವರು ಭಾರತ ಕ್ರಿಕೆಟ್ ತಂಡವನ್ನು ಹಾಳು ಮಾಡಬಹುದು ಎಂದು ಹೇಳಿದ್ದಾರೆ.

IND Vs NZ: 2ನೇ ಏಕದಿನ ಪಂದ್ಯದಲ್ಲಿ ಸ್ಯಾಮ್ಸನ್‌ ಆಡಿಸದ ಬಗ್ಗೆ ಕಾರಣ ತಿಳಿಸಿದ ನಾಯಕ ಧವನ್IND Vs NZ: 2ನೇ ಏಕದಿನ ಪಂದ್ಯದಲ್ಲಿ ಸ್ಯಾಮ್ಸನ್‌ ಆಡಿಸದ ಬಗ್ಗೆ ಕಾರಣ ತಿಳಿಸಿದ ನಾಯಕ ಧವನ್

"ಹೌದು, ಭಾರತ ತಂಡಕ್ಕೆ ವಿದೇಶಿ ಕೋಚ್‌ಗಳ ಅವಶ್ಯಕತೆ ಇಲ್ಲ, ಅವರು ನಮಗೆ ಬೇಡ, ವಿದೇಶಿ ಕೋಚ್‌ಗಳು ನಮ್ಮ ಕ್ರಿಕೆಟ್ ತಂಡವನ್ನು ಹಾಳು ಮಾಡಬಹುದು, ಭಾರತೀಯ ಕೋಚ್‌ಗಳು ಏಕೆ ಬೇಡ? ಅವರು ಏನು ತಪ್ಪು ಮಾಡಿದ್ದಾರೆ? ಲಾಲ್‌ ಚಂದ್ ರಜಪೂತ್ ತರಬೇತುದಾರರಾಗಿದ್ದ ವೇಳೆ ನಾವು ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿದ್ದೇವೆ" ಎಂದು ಹೇಳಿದರು.

 ತ್ರಿಕೋನ ಸರಣಿಯಲ್ಲಿ ಕೂಡ ಗೆಲುವು

ತ್ರಿಕೋನ ಸರಣಿಯಲ್ಲಿ ಕೂಡ ಗೆಲುವು

ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳನ್ನು ಒಳಗೊಂಡ ತ್ರಿಕೋನ ಸರಣಿಯಲ್ಲಿ ಗೆದ್ದ ಭಾರತ ತಂಡಕ್ಕೆ ಕೂಡ ಲಾಲ್‌ ಚಂದ್ ರಜಪೂತ್ ತರಬೇತುದಾರರಾಗಿದ್ದರು ಎಂದು ಅವರು ಹೇಳಿದರು.

"ಅವರ ತರಬೇತಿಯಲ್ಲೇ ನಾವು ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಸಿಬಿ ಸರಣಿಯನ್ನು ಗೆದ್ದಿದ್ದೇವೆ, ಆದರೆ ನಮಗೆ ನೆನಪಿರುವುದು 2011ರ ವಿಶ್ವಕಪ್ ಗೆಲುವು ಮತ್ತು ಆಗ ತಂಡದ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಮಾತ್ರ" ಎಂದು ಹೇಳಿದರು.

ಭಾರತ ತಂಡಕ್ಕೆ ಈ ಮೊದಲು ವಿದೇಶಿ ಕೋಚ್‌ಗಳು ಇದ್ದ ಅವಧಿಯ ಬಗ್ಗೆ ಗಂಭೀರ್ ಪ್ರಶ್ನೆ ಮಾಡಿದರು. "ಡಂಕನ್ ಫ್ಲೆಚರ್ ಮತ್ತು ಜಾನ್ ರೈಟ್ ಅವರು ಯಾವ ವಿಶೇಷ ಕೆಲಸ ಮಾಡಿದ್ದಾರೆ? ನಾವು ವಿದೇಶಿ ತರಬೇತುದಾರರನ್ನು ಬಿಟ್ಟು, ನಮ್ಮ ದೇಶದ ಆಟಗಾರರು ಮತ್ತು ಕೋಚ್‌ಗಳಲ್ಲಿ ನಂಬಿಕೆ ಇಡಬೇಕು" ಎಂದು ಗಂಭೀರ್ ಸಲಹೆ ನೀಡಿದರು.

IND vs NZ: ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಎಬಿಡಿಯನ್ನು ನೆನಪಿಸುತ್ತದೆ; ರವಿಶಾಸ್ತ್ರಿ

ಬೌಲರ್‌ಗಳ ಕೊಡುಗೆ ಬಗ್ಗೆ ಶ್ಲಾಘನೆ

ಬೌಲರ್‌ಗಳ ಕೊಡುಗೆ ಬಗ್ಗೆ ಶ್ಲಾಘನೆ

2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ನಲ್ಲಿ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ಗಂಭೀರ್, ಭಾರತ ಗೆಲುವಿನಲ್ಲಿ ಬೌಲರ್‌ಗಳ ಕೊಡುಗೆಯನ್ನು ಶ್ಲಾಘಿಸಿದರು.

"ವಿಶ್ವಕಪ್ ಫೈನಲ್‌ನಲ್ಲಿ 97 ಮತ್ತು 91 ರನ್ ಗಳಿಸಿದ ಆಟಗಾರರನ್ನು ನಾವು ಯಾವಾಗಲೂ ಏಕೆ ನೆನಪಿಸಿಕೊಳ್ಳಬೇಕು. ಜಹೀರ್ ಖಾನ್ ಮತ್ತು ಹರ್ಭಜನ್ ಸಿಂಗ್ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಬೌಲರ್ ಗಳ ಪ್ರಯತ್ನವು ಬ್ಯಾಟ್ಸ್‌ಮನ್‌ಗಳಿಗೆ ಸಮಾನವಾಗಿದೆ, ನಾವು ಅವರನ್ನೂ ನೆನಪಿಸಿಕೊಳ್ಳಬೇಕು" ಎಂದು ಗಂಭೀರ್ ಹೇಳಿದರು.

ರಾಹುಲ್ ದ್ರಾವಿಡ್ ತರಬೇತಿಯಲ್ಲಿ ಉತ್ತಮ ಸಾಧನೆ

ರಾಹುಲ್ ದ್ರಾವಿಡ್ ತರಬೇತಿಯಲ್ಲಿ ಉತ್ತಮ ಸಾಧನೆ

ಸದ್ಯ ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶ್ವಕಪ್, ಏಷ್ಯಾಕಪ್‌ನಲ್ಲಿ ತಂಡ ಉತ್ತಮ ಸಾಧನೆ ಮಾಡದ ಹೊರತಾಗಿ. ದ್ವಿಪಕ್ಷೀಯ ಸರಣಿಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ.

ಏಕದಿನ, ಟಿ20 ಸರಣಿಗಳಲ್ಲಿ ಭಾರತ ಸಾಕಷ್ಟು ಪ್ರಾಬಲ್ಯ ಸಾಧಿಸಿದೆ. ಟಿ20 ವಿಶ್ವಕಪ್‌ಗೆ ಮುನ್ನ ಭಾರತ ಬಲಿಷ್ಠ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಗೆದ್ದುಕೊಂಡಿದೆ. ಅವರು ವಿಶ್ರಾಂತಿಯಲ್ಲಿದ್ದಾಗ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಲಕ್ಷ್ಮಣ್ ಕೋಚಿಂಗ್‌ನಲ್ಲಿ ಭಾರತ ತಂಡ ಹಲವು ಸರಣಿಗಳನ್ನು ಗೆದ್ದಿದೆ.

2022ರ ಐಪಿಎಲ್ ಸೀಸನ್‌ನಲ್ಲಿ ಗೌತಮ್ ಗಂಭೀರ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, November 27, 2022, 17:59 [IST]
Other articles published on Nov 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X