ಅಫ್ಘಾನ್ ಪುರುಷರ ತಂಡ ದಂಡಿಸದಂತೆ ಮಹಿಳಾ ಕ್ರಿಕೆಟ್ ಮುಖ್ಯಸ್ಥೆ ಮನವಿ

ಕಾಬೂಲ್: ಸದಾ ಯುದ್ಧ-ಗಲಾಟೆಯಲ್ಲೇ ಮುಳುಗಿರುತ್ತಿದ್ದ ಅಫ್ಘಾನಿಸ್ತಾನ, ಪಾಕಿಸ್ತಾನದಂತಹ ದೇಶವನ್ನು ಬದಲಾಯಿಸುವಲ್ಲಿ ಕ್ರಿಕೆಟ್‌ನ ಪಾತ್ರ ಮಹತ್ವದ್ದಾಗಿದೆ. ಅಬಾಲ ವೃದ್ಧರೆಲ್ಲರನ್ನೂ ರಂಜಿಸುತ್ತಿರುವ ಕ್ರಿಕೆಟ್ ಈಗ ಅಫ್ಘಾನಿಸ್ತಾನದ ಪ್ರಮುಖ ಕ್ರೀಡೆಯಾಗಿದೆ. ಆದರೆ ಅಫ್ಘಾನ್ ಆಡಳಿತವನ್ನು ತಾಲಿಬಾನ್‌ಗಳು ಕೈಗೆತ್ತಿಕೊಂಡಂದಿನಿಂದ ಅಲ್ಲಿನ ಕ್ರಿಕೆಟ್‌ಗೆ ಕೊಂಚ ಹಿನ್ನಡೆಯಾಗಿದೆ.

ಐಪಿಎಲ್ 2021: ದುಬೈ ತಲುಪಿದ ಚೆನ್ನೈ ಸೂಪರ್ ಕಿಂಗ್ಸ್‌ನ ಸ್ಯಾಮ್ ಕರನ್ಐಪಿಎಲ್ 2021: ದುಬೈ ತಲುಪಿದ ಚೆನ್ನೈ ಸೂಪರ್ ಕಿಂಗ್ಸ್‌ನ ಸ್ಯಾಮ್ ಕರನ್

ಅಫ್ಘಾನಿಸ್ತಾನದ ಆಡಳಿತವನ್ನು ಕೈಗೆತ್ತಿಕೊಂಡ ಬಳಿಕ ತಾಲಿಬಾನ್, ಅಲ್ಲಿ ಕಠಿಣ ನಿಯಮಗಳನ್ನು ಘೋಷಿಸಿದೆ. ಮುಖ್ಯವಾಗಿ ಮಹಿಳೆಯರಿಗೆ ಅಲ್ಲಿ ಸ್ವಾತಂತ್ರ್ಯವೇ ಇಲ್ಲವಾಗಿದೆ. ಅಧಿಕಾರಕ್ಕೇರಿದ ಬಳಿಕ ತಾಲಿಬಾನ್‌ ಮಹಿಳಾ ಕ್ರೀಡಾ ಚಟುವಟಿಕೆಗಳನ್ನು ನಿಷೇಧಿಸುವುದಾಗಿ ಹೇಳಿತ್ತು. ತಾಲಿಬಾನ್‌ನ ಈ ಕ್ರಮ ಅಲ್ಲಿನ ಪುರುಷರ ಕ್ರಿಕೆಟ್‌ಗೂ ಅಡ್ಡಿಯುಂಟು ಮಾಡುತ್ತಿದೆ.

ಪುರುಷರ ಕ್ರಿಕೆಟ್‌ಗೆ ತಾಲಿಬಾನ್ ಅನುಮತಿ ನೀಡಿತ್ತಾದರೂ ಮಹಿಳಾ ಕ್ರಿಕೆಟ್‌ಗೆ ನಿಷೇಧ ಹೇರಿತ್ತು. ತಾಲಿಬಾನ್ ಲಿಂಗ ತಾರತಮ್ಯ ನೀತಿಗೆ ತಿರುಗೇಟು ನೀಡಿದ್ದ ಕ್ರಿಕೆಟ್ ಆಸ್ಟ್ರೇಲಿಯಾ, ಮಹಿಳಾ ಕ್ರಿಕೆಟ್‌ ನಿಷೇಧಿಸುವುದಾದರೆ ಪುರುಷರ ಕ್ರಿಕೆಟ್ ತಂಡದೊಂದಿಗಿನ ನಮ್ಮ ಉದ್ದೇಶಿತ ಟೆಸ್ಟ್ ಕ್ರಿಕೆಟ್ ಪಂದ್ಯ ರದ್ದಾಗಲಿದೆ ಎಂದಿತ್ತು.

ಟಿ20 ವಿಶ್ವಕಪ್: ಪಾಕಿಸ್ತಾನವನ್ನು ಮಣಿಸಲು ಭಾರತದ ಆಡುವ ಬಳಗವನ್ನು ಹೆಸರಿಸಿದ ಗಂಭೀರ್ಟಿ20 ವಿಶ್ವಕಪ್: ಪಾಕಿಸ್ತಾನವನ್ನು ಮಣಿಸಲು ಭಾರತದ ಆಡುವ ಬಳಗವನ್ನು ಹೆಸರಿಸಿದ ಗಂಭೀರ್

ಕ್ರಿಕೆಟ್ ಆಸ್ಟ್ರೇಲಿಯಾದ ಹೇಳಿಕೆಗೆ ಅಫ್ಘಾನ್ ಮಹಿಳಾ ಕ್ರಿಕೆಟ್ ಮುಖ್ಯಸ್ಥೆ ತುಬಾ ಸಂಗಾರ್ ಪ್ರತಿಕ್ರಿಯಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕ್ರಿಕೆಟ್ ಬೋರ್ಡ್‌ಗಳು ಮತ್ತು ಕ್ರಿಕೆಟರ್‌ಗಳು ಅಫ್ಘಾನ್ ಪುರುಷರ ತಂಡವನ್ನು ಬೆಂಬಲಿಸಬೇಕು. ತಾಲಿಬಾನ್‌ಗಳು ಮಹಿಳಾ ಕ್ರಿಕೆಟ್‌ ನಿಷೇಧಿಸಿದರೂ ಪುರುಷರ ಕ್ರಿಕೆಟ್‌ ತಂಡವನ್ನು ದಂಡಿಸಬಾರದು ಎಂದು ಸಂಗಾರ್ ಹೇಳಿದ್ದಾರೆ.

ಮರಳಿ ಫಾರ್ಮ್ ಗೆ ಬಂದ ಕ್ಯಾಪ್ಟನ್ | Oneindia Kannada

"ಪುರುಷರ ತಂಡವನ್ನು ಬಹಿಷ್ಕರಿಸುವ ಆಲೋಚನೆ ಒಳ್ಳೆಯದಲ್ಲ. ಅವರು ಅಫ್ಘಾನಿಸ್ತಾನ ತಂಡಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಅಫ್ಘಾನಿಸ್ತಾನವನ್ನು ವಿಶ್ವಕ್ಕೆ ಸಕರಾತ್ಮಕ ರೀತಿಯಲ್ಲಿ ಪರಿಚಯಿಸಿದ್ದರಲ್ಲಿ ಪುರುಷರ ಕ್ರಿಕೆಟರ್‌ಗಳ ಪಾತ್ರ ಬಹಳವಿದೆ. ಪುರುಷರ ತಂಡಕ್ಕೆ ಅವಕಾಶ ತಪ್ಪಿದರೆ ಎಲ್ಲಾ ರೀತಿಯಲ್ಲೂ ಅಫ್ಘಾನ್‌ನಲ್ಲಿ ಕ್ರಿಕೆಟ್ ಅಳಿಸಿ ಹೋಗುತ್ತದೆ," ಎಂದು 28ರ ಹರೆಯದ ತುಬಾ ಸಂಗಾರ್ ಹೇಳಿದ್ದಾರೆ. ತಾಲಿಬಾನ್‌ಗಳು ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡ ಕೆಲವೇ ಸಮಯದಲ್ಲಿ ಸಂಗಾರ್ ಅಫ್ಘಾನಿಸ್ತಾನ ತ್ಯಜಿಸಿ ಕೆನಡಾಕ್ಕೆ ಹೋಗಿದ್ದರು.

For Quick Alerts
ALLOW NOTIFICATIONS
For Daily Alerts
Story first published: Wednesday, September 15, 2021, 17:31 [IST]
Other articles published on Sep 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X