ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋವಿಡ್ ಹೋರಾಟಕ್ಕೆ ಮತ್ತೊಂದು ನೆರವು ಘೋಷಿಸಿದ ಇರ್ಫಾನ್ ಪಠಾಣ್

Former all rounder Irfan Pathan to donate money earned from social media campaigns to charity

ನವದೆಹಲಿ: ಭಾರತದಲ್ಲಿ ಕೋವಿಡ್-19 ದ್ವಿತೀಯ ಅಲೆ ಜನರನ್ನು ಸಂಕಷ್ಟಕ್ಕೆ ದೂಡಿದೆ. ದೇಶದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿವೆ. ದೇಶದಲ್ಲಿ ಸೆಮಿ ಲಾಕ್‌ಡೌನ್ ಕೂಡ ಜಾರಿಯಲ್ಲಿದ್ದು, ಜನರ ಜೀವನ ಇನ್ನಷ್ಟು ತೊಂದರೆಗೆ ಸಿಲುಕಿದೆ.

ತಪ್ಪು ಸರಿಪಡಿಸದಿದ್ದರೆ ಭಾರತೀಯ ಮಹಿಳಾ ತಂಡಕ್ಕೆ ಕಂಟಕ ಪಕ್ಕ!ತಪ್ಪು ಸರಿಪಡಿಸದಿದ್ದರೆ ಭಾರತೀಯ ಮಹಿಳಾ ತಂಡಕ್ಕೆ ಕಂಟಕ ಪಕ್ಕ!

ಸಮಸ್ಯೆ ಎದುರಿಸುತ್ತಿರುವ ನೆರವಿನ ಹಸ್ತ ಚಾಚುತ್ತಿರುವವರಲ್ಲಿ ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್‌ಗಳಾದ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಕೂಡ ಇದ್ದಾರೆ. ಈಗಾಗಲೇ ಇರ್ಫಾನ್ ಮತ್ತು ಯೂಸುಫ್ ಪಠಾಣ್ ಬಡ ಜನರಿಗೆ ಆಹಾರ, ಔಷಧಿಯ ಕಿಟ್‌ಗಳನ್ನು ವಿತರಿಸುವ ಮೂಲಕ ನೆರವು ನೀಡಿದ್ದರು.

ಪಠಾಣ್ ಸಹೋದರರಲ್ಲಿ ತಮ್ಮನಾದ ಇರ್ಫಾನ್, ಕೋವಿಡ್ ವಿರುದ್ಧದ ಹೋರಾಟಕ್ಕೆ ಮತ್ತೊಂದು ನೆರವು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಪ್ರಚಾರದಲ್ಲಿ ಬಂದ ಎಲ್ಲಾ ಹಣವನ್ನು ಚಾರಿಟಿ ಸಂಸ್ಥೆಗೆ ದಾನ ಮಾಡುವುದಾಗಿ ಪಠಾಣ್ ಹೇಳಿದ್ದಾರೆ. ಈ ಹಣ ಕೂಡ ಕೋವಿಡ್ ವಿರುದ್ಧದ ಹೋರಾಟಕ್ಕೆ ಬಳಕೆಯಾಗಲಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ವನಿತಾ ತಂಡಗಳು ಪ್ರಕಟಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ವನಿತಾ ತಂಡಗಳು ಪ್ರಕಟ

ದಕ್ಷಿಣ ದೆಹಲಿ ಭಾಗದಲ್ಲಿ ಆಹಾರ ಒದಗಿಸುತ್ತಿರುವ ಪಾಂಡ್ಯ ಸಹೋದರರು ಇವತ್ತಿನವರೆಗೆ ಸುಮಾರು 90,000 ಬಡ ಕುಟುಂಬಗಳಿಗೆ ಆಹಾರ ಒದಗಿಸಿದ್ದಾರೆ. ಅಷ್ಟೇ ಅಲ್ಲ, ಇರ್ಫಾನ್-ಯೂಸುಫ್ ತಂದೆ ಮೆಹಬೂಬ್ ಖಾನ್ ಪಠಾಣ್ ಕೂಡ ತನ್ನ ಚಾರಿಟಿ ಟ್ರಸ್ಟ್ ಮೂಲಕ ವಡೋದರದಲ್ಲಿ ಕೋವಿಡ್-19 ಸೋಂಕಿತರಿಗೆ ಉಚಿತ ಊಟ ನೀಡುತ್ತಿದ್ದಾರೆ.

Story first published: Saturday, May 15, 2021, 16:40 [IST]
Other articles published on May 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X