ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೇಲ್, ಕೊಹ್ಲಿಯಿಲ್ಲ: ಐಪಿಎಲ್‌ನಲ್ಲಿ ಹಾಗ್ ಮೆಚ್ಚಿದ 3 ಪವರ್‌ಪ್ಲೇ ಬ್ಯಾಟ್ಸ್‌ಮನ್‌ಗಳು!

Former Australia player picks top 3 powerplay batsmen in IPL

ಬೆಂಗಳೂರು, ಮಾರ್ಚ್ 28: ವಿಶ್ವದಾದ್ಯಂತ ಹೊಸ ಕ್ರಾಂತಿಯನ್ನೇ ಮೂಡಿಸಿದ ಜನಪ್ರಿಯ ಕ್ರಿಕೆಟ್‌ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್). ಬರೀ ಮೂರು ಗಂಟೆಯೊಳಗೆ ಮುಗಿದು ಹೋಗುವ ಐಪಿಎಲ್ ಪಂದ್ಯದಲ್ಲಿ ಪಾಲ್ಗೊಳ್ಳುವ ಆಟಗಾರ ದೊಡ್ಡ ಮಟ್ಟದಲ್ಲಿ ಹಣ ಗಳಿಸಬಲ್ಲ. ಈ ಬಾರಿಯ ಐಪಿಎಲ್ ಹಬ್ಬ ಮಾರ್ಚ್ 29ರಂದು ಆರಂಭವಾಗುವುದರಲ್ಲಿತ್ತು. ಆದರೆ ಕೋವಿಡ್-19ನಿಂದಾಗಿ 13ನೇ ಆವೃತ್ತಿಯ ಐಪಿಎಲ್ ಏಪ್ರಿಲ್ 15ರ ಬಳಿಕ ಮುಂದೂಡಲ್ಪಟ್ಟಿದೆ.

ಕೊರೊನಾ: ಆಗ ಕ್ರಿಕೆಟರ್, ಬಾಕ್ಸರ್, ಕಬಡ್ಡಿ ಪ್ಲೇಯರ್-ಈಗ ಪೊಲೀಸ್ ಆಫೀಸರ್ಸ್!ಕೊರೊನಾ: ಆಗ ಕ್ರಿಕೆಟರ್, ಬಾಕ್ಸರ್, ಕಬಡ್ಡಿ ಪ್ಲೇಯರ್-ಈಗ ಪೊಲೀಸ್ ಆಫೀಸರ್ಸ್!

ಮಾರಕ ಸೋಂಕು ಹತೋಟಿಗೆ ಬಂದರೆ ಟೂರ್ನಿ ಆರಂಭಗೊಳ್ಳುವ ಸಾಧ್ಯತೆಯೂ ಇಲ್ಲವೆಂದಿಲ್ಲ. ಏನೇ ಇರಲಿ; ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಐಪಿಎಲ್ ಬಗ್ಗೆ ಮಾತನಾಡಿದ್ದಾರೆ. ಐಪಿಎಲ್‌ನ ಟಾಪ್ 3 ಪವರ್‌ಪ್ಲೇ ಬ್ಯಾಟ್ಸ್‌ಮನ್‌ಗಳನ್ನು ಹಾಗ್ ಹೆಸರಿಸಿದ್ದಾರೆ.

'ವೃತ್ತಿ ಬದುಕಿನ ಕರಾಳ ಕ್ಷಣವದು': ದುಃಖಕರ ಸಂದರ್ಭ ನೆನೆದ ಹಿಟ್‌ಮ್ಯಾನ್'ವೃತ್ತಿ ಬದುಕಿನ ಕರಾಳ ಕ್ಷಣವದು': ದುಃಖಕರ ಸಂದರ್ಭ ನೆನೆದ ಹಿಟ್‌ಮ್ಯಾನ್

ವಿಶೇಷವೆಂದರೆ ಬ್ರಾಡ್‌ ಹಾಗ್ ಹೆಸರಿಸಿರುವ ಈ ಮೂವರಲ್ಲಿ ಕ್ರಿಸ್‌ ಗೇಲ್ ಇಲ್ಲ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಿಲ್ಲ. ಆದರೆ ಭಾರತದ ಒಬ್ಬ ಆಟಗಾರನಿದ್ದಾನೆ. ಹಾಗಾದರೆ ಆ ಮೂವರು ಬ್ಯಾಟ್ಸ್‌ಮನ್‌ಗಳಾರು?

ವಿಡಿಯೋದಲ್ಲಿ ಹಾಗ್ ಮಾತು

ವಿಡಿಯೋದಲ್ಲಿ ಹಾಗ್ ಮಾತು

ವೀಡಿಯೋವೊಂದರಲ್ಲಿ ಬ್ರಾಡ್‌ ಹಾಗ್, ಐಪಿಎಲ್ ಟಿ20 ಟೂರ್ನಿ ಬಗ್ಗೆ ಮಾತನಾಡಿದ್ದಾರೆ. ಐಪಿಎಲ್‌ನಲ್ಲಿ ತನ್ನ ನೆಚ್ಚಿನ ಮೂವರು ಪವರ್‌ಪ್ಲೇ ಬ್ಯಾಟ್ಸ್‌ಮನ್‌ ಇವರೆಂದು ಹಾಗ್ ಹೇಳಿಕೊಂಡಿದ್ದಾರೆ. ಅಚ್ಚರಿಯೆಂದರೆ ಹಾಗ್ ಹೆಸರಿಸಿರುವ ಮೂವರು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬನೇ ಭಾರತೀಯನಿರುವುದು, ಅದು ಕೊಹ್ಲಿಯಲ್ಲ, ರೋಹಿತ್ ಅಲ್ಲ.

ಆಸೀಸ್, ಭಾರತ, ಇಂಗ್ಲೆಂಡ್‌ಗೆ ಸ್ಥಾನ

ಆಸೀಸ್, ಭಾರತ, ಇಂಗ್ಲೆಂಡ್‌ಗೆ ಸ್ಥಾನ

ಐಪಿಎಲ್‌ನಲ್ಲಿ ಹಾಗ್ ನೆಚ್ಚಿನ ಮೂವರು ಪವರ್‌ಪ್ಲೇ ಬ್ಯಾಟ್ಸ್‌ಮನ್‌ಗಳಲ್ಲಿ ಆಸ್ಟ್ರೇಲಿಯಾ, ಭಾರತ ಮತ್ತು ಇಂಗ್ಲೆಂಡ್‌ ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಭಾರತದ ಆಟಗಾರರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಸುರೇಶ್ ರೈನಾ ಕಾಣಿಸಿಕೊಂಡಿದ್ದಾರೆ.

3 ಪವರ್‌ಪ್ಲೇ ಬ್ಯಾಟ್ಸ್‌ಮನ್‌ಗಳು

3 ಪವರ್‌ಪ್ಲೇ ಬ್ಯಾಟ್ಸ್‌ಮನ್‌ಗಳು

ಹಾಗ್ ಮೆಚ್ಚಿನ ಮೂವರು ಪವರ್‌ಪ್ಲೇ ಬ್ಯಾಟ್ಸ್‌ಮನ್‌ಗಳೆಂದರೆ 1. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (ಸನ್ ರೈಸರ್ಸ್ ಹೈದರಾಬಾದ್), 2. ಸುರೇಶ್ ರೈನಾ (ಚೆನ್ನೈ ಸೂಪರ್ ಕಿಂಗ್ಸ್), 3. ಇಂಗ್ಲೆಂಡ್‌ನ ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್). ಇದರಲ್ಲಿ ಡೇವಿಡ್ ವಾರ್ನರ್ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎರಡರಲ್ಲೂ ಚುರುಕಿದ್ದಾರೆ ಎಂದು ಹಾಗ್ ಹೇಳಿಕೊಂಡಿದ್ದಾರೆ.

ಐಪಿಎಲ್ ನಿಜಕ್ಕೂ ನಡೆಯುತ್ತಾ?

ಐಪಿಎಲ್ ನಿಜಕ್ಕೂ ನಡೆಯುತ್ತಾ?

ಸದ್ಯಕ್ಕೆ ಏಪ್ರಿಲ್ 15ರ ಬಳಿಕ ಮುಂದೂಡಲ್ಪಟ್ಟಿರುವ ಐಪಿಎಲ್, ಏಪ್ರಿಲ್‌ನಲ್ಲಿ ಆರಂಭವಾಗೋದು ಅನುಮಾನ. ಜುಲೈಯಿಂದ ಸೆಪ್ಟೆಂಬರ್ ಮಧ್ಯೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್ ರದ್ದಾಗುವ ಭೀತಿಯಿದೆಯಾದರೂ ಬಿಸಿಸಿಐಯೇ ಹೇಳಿರುವಂತೆ ಐಪಿಎಲ್ ರದ್ದಿನ ಬದಲು ತಡವಾಗಿಯಾದರೂ ನಡೆಯಲಿದೆ.

Story first published: Saturday, March 28, 2020, 18:13 [IST]
Other articles published on Mar 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X