ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್ ಮಾಜಿ ಸ್ಪಿನ್ನರ್ ಮ್ಯಾಕ್‌ಗಿಲ್‌ರಿಂದ ಅಪಹರಣ ಆರೋಪ

Former Australia spinner Stuart MacGill allegedly kidnapped

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಸ್ಟುವರ್ಟ್ ಮ್ಯಾಕ್‌ಗಿಲ್ ಅಪಹರಣವಾಗಿದ್ದರಂತೆ. ಬಂದೂಕುಧಾರಿ ಮೂವರು ವ್ಯಕ್ತಿಗಳು ಕಳೆದ ತಿಂಗಳು ಏಪ್ರಿಲ್ 14ರಂದು ಮ್ಯಾಕ್‌ಗಿಲ್ ಅವರನ್ನು ಅಪಹರಿಸಿ ಸುಮಾರು ಒಂದು ಗಂಟೆಯ ಕಾಲ ಜೊತೆಗಿರಿಸಿಕೊಂಡಿದ್ದರಂತೆ. ಆ ಬಳಿಕ ಬಿಡುಗಡೆ ಮಾಡಿದ್ದರಂತೆ. ಇದನ್ನು ಸ್ವತಃ ಮ್ಯಾಕ್‌ಗಿಲ್ ಹೇಳಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಐಪಿಎಲ್ 2021: ಬಯೋಬಬಲ್‌ನಿಂದ ಹೊರಬರಲು ಫ್ರಾಂಚೈಸಿಗಳು ಸಿದ್ಧತೆಐಪಿಎಲ್ 2021: ಬಯೋಬಬಲ್‌ನಿಂದ ಹೊರಬರಲು ಫ್ರಾಂಚೈಸಿಗಳು ಸಿದ್ಧತೆ

ಕಳೆದ ತಿಂಗಳು ಮೂವರು ಬಂದೂಕುಧಾರಿ ವ್ಯಕ್ತಿಗಳು ಸ್ಟುವರ್ಟ್ ಮ್ಯಾಕ್‌ಗಿಲ್ ಅವರನ್ನು ಅಪಹರಿಸಿ ಆ ಬಳಿಕ ಬಿಡುಗಡೆ ಮಾಡಿದ್ದರು. ಈ ಘಟನೆ ಸಿಡ್ನಿಯಲ್ಲಿ ನಡೆದಿತ್ತು ಎಂದು ಮ್ಯಾಕ್‌ಗಿಲ್‌ ಆರೋಪಿಸಿದ್ದಾರೆ. ಮ್ಯಾಕ್‌ಗಿಲ್‌ಗೀಗ 50ರ ಹರೆಯ.

ಆಸ್ಟ್ರೇಲಿಯಾದ ಬೇರೆ ಬೇರೆ ಮಾಧ್ಯಮಗಳ ಪ್ರಕಾರ, ಮ್ಯಾಕ್‌ಗಿಲ್ ಅಪಹರಣಕ್ಕೆ ಸಂಬಂಧಿಸಿ ಒಟ್ಟು 4 ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮ್ಯಾಕ್‌ಗಿಲ್ ಅವರನ್ನು ಆಸ್ಟ್ರೇಲಿಯಾದ ಬ್ರಿಂಗಲ್ ಎಂಬಲ್ಲಿಗೆ ಕರೆದೊಯ್ದು ಅವರ ಮೇಲೆ ಇನ್ನಿಬ್ಬರು ಸೇರಿ ಹಲ್ಲೆ ನಡೆಸಿದ್ದರು ಎಂದು ನ್ಯೂಸೌತ್‌ವೇಲ್ಸ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೇ 5ರಿಂದ ಐಪಿಎಲ್‌ನ ವಿದೇಶಿ ಆಟಗಾರರು ತವರಿಗೆ ವಾಪಸ್ಮೇ 5ರಿಂದ ಐಪಿಎಲ್‌ನ ವಿದೇಶಿ ಆಟಗಾರರು ತವರಿಗೆ ವಾಪಸ್

ಆಸ್ಟ್ರೆಲಿಯಾ ಪರ ಸ್ಟುವರ್ಟ್ 1998ರಿಂದ 2008ರ ವರೆಗೆ 44 ಟೆಸ್ಟ್‌ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. 208 ವಿಕೆಟ್‌ಗಳು ಮ್ಯಾಕ್‌ಗಿಲ್‌ಗೆ ಲಭಿಸಿದ್ದವು.

Story first published: Wednesday, May 5, 2021, 10:59 [IST]
Other articles published on May 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X