ಗಂಗೂಲಿಗೆ ಥ್ಯಾಂಕ್ಸ್ ಹೇಳಿದ ಸ್ಟೀವ್ ವಾ
ಈ ವರ್ಷಾಂತ್ಯದಲ್ಲಿ ಅಸ್ಟ್ರೇಲಿಯಾ ವಿರುದ್ಧ ಸರಣಿಯನ್ನಾಡಲು ಭಾರತ ಪ್ರವಾಸ ತೆರಳಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಒಂದು ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಹಗಲು-ರಾತ್ರಿ ಪಂದ್ಯವನ್ನಾಡಲು ಭಾರತ ಒಪ್ಪಿದ್ದಕ್ಕೆ ಸ್ಟೀವ್ ವಾ, ಬಿಸಿಸಿಐಗೆ ಥ್ಯಾಂಕ್ಸ್ ಹೇಳಿದ್ದಾರೆ.
ಕೊಹ್ಲಿ ನಾಯಕತ್ವ
ಟೀ ಇಂಡಿಯಾದ ಬಗ್ಗೆ ಮಾತನಾಡುತ್ತಿದ್ದ ಸ್ಟೀವ್ ವಾ, "ವಿರಾಟ್ ಕೊಹ್ಲಿ ಪಡೆ ಸದ್ಯ ಏಕದಿನ, ಟಿ-20 ಟೆಸ್ಟ್ ಹೀಗೆ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಬಲಿಷ್ಠವಾಗಿ ಹೊರಹೊಮ್ಮುತ್ತಿದೆ. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಪ್ರತೀದಿನ ಯಶಸ್ಸನ್ನು ಗಳಿಸುತ್ತಿದೆ. ಭಾರತ ತಂಡ ವಿಶ್ವದಲ್ಲೇ ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಹೊಂದಿದೆ" ಎನ್ನುವ ಅಭಿಪ್ರಾಯವನ್ನು ವಾ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಡೇ-ನೈಟ್ ಟೆಸ್ಟ್ ಪಂದ್ಯವನ್ನಾಡಲಿದೆ ಟೀಮ್ ಇಂಡಿಯಾ
ಬುಮ್ರಾ ಭಾರತ ತಂಡದಲ್ಲಿರುವುದು ವಿರಾಟ್ ಕೊಹ್ಲಿಯ ಅದೃಷ್ಟ
"ಭಾರತದ ಬೌಲಿಂಗ್ ಮೊನಚು ವಿದೇಶದ ನೆಲದಲ್ಲಿ ಅಷ್ಟಾಗಿ ವರ್ಕೌಟ್ ಆಗುವುದಿಲ್ಲ. ನನ್ನ ಪ್ರಕಾರ ಜಸಪ್ರೀತ್ ಬುಮ್ರಾ ಭಾರತ ತಂಡದಲ್ಲಿರುವುದು ವಿರಾಟ್ ಕೊಹ್ಲಿಯ ಅದೃಷ್ಟ. ಬುಮ್ರಾ ನಿಜಕ್ಕೂ ಅದ್ಭುತ ಪ್ರತಿಭೆ. ಬುಮ್ರಾಗೆ ಬೌಲಿಂಗ್ ಶೈಲಿಯ ಕುರಿತು ಯಾರೂ ಪಾಠ ಮಾಡಬಾರದು. ಅವರದ್ದೇ ಶೈಲಿಯ ಬೌಲಿಂಗ್ ಕಂಡುಕೊಳ್ಳಲು ಇದರಿಂದ ಅವರಿಗೆ ಸಾಧ್ಯವಾಗಿದೆ" - ಸ್ಟೀವ್ ವಾ.
ಆಸ್ಟ್ರೇಲಿಯಾದ ಈಗಿನ ಫಾಸ್ಟ್ ಬೌಲರ್ ಗಳು ಅಪಾಯಕಾರಿ, ಸ್ಟೀವ್ ವಾ
"ಆಸ್ಟ್ರೇಲಿಯಾದ ಈಗಿನ ಫಾಸ್ಟ್ ಬೌಲರ್ ಗಳು ಅಪಾಯಕಾರಿ. ಆಸೀಸ್ ನೆಲದಲ್ಲಿ ಉತ್ತಮ ಲಯವನ್ನು ಹೊಂದಿರುತ್ತಾರೆ. ಮುಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಸೀಸ್ ಬೌಲರ್ಗಳು ಟೀಂ ಇಂಡಿಯಾ ಬೌಲರ್ಗಳಿಗಿಂತಲೂ ಮೇಲುಗೈ ಪಡೆಯಲಿದ್ದಾರೆ. ಒಟ್ಟಿನಲ್ಲಿ ಇದೊಂದು ಕುತೂಹಲಕಾರಿ ಸರಣಿಯಾಗಲಿದೆ" ಎಂದು ಸ್ಟೀವ್ ವಾ ಅಭಿಪ್ರಾಯ ಪಟ್ಟಿದ್ದಾರೆ.