ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ ಮಾಜಿ ಕ್ರಿಕೆಟರ್ ನಫೀಸ್ ಇಕ್ಬಾಲ್‌ಗೆ ಕೊರೊನಾವೈರಸ್ ಪಾಸಿಟಿವ್

Former Bangladesh cricketer Nafees Iqbal tests positive for coronavirus

ಧಾಕಾ, ಜೂನ್ 20: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ಆಟಗಾರ, ಬಾಂಗ್ಲಾ ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ಅವರ ಅಣ್ಣ ನಫೀಸ್ ಇಕ್ಬಾಲ್‌ಗೆ ಕೊರೊನಾವೈರಸ್ ಸೋಂಕು ತಗುಲಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

'ಟಿ20 ವಿಶ್ವಕಪ್ ಲೈವ್ ವೀಕ್ಷಿಸಲು ಅಭಿಮಾನಿಗಳಿಗೆ ಅನುಮತಿಯಿದೆ, ಆದರೆ..!''ಟಿ20 ವಿಶ್ವಕಪ್ ಲೈವ್ ವೀಕ್ಷಿಸಲು ಅಭಿಮಾನಿಗಳಿಗೆ ಅನುಮತಿಯಿದೆ, ಆದರೆ..!'

ತನಗೆ ಮಾರಕ ಕೊರೊನಾವೈರಸ್ ಸೋಂಕು ತಗುಲಿರುವುದಾಗಿ ಸ್ವತಃ ನಫೀಸ್ ಇಕ್ಬಾಲ್ ಖಾತರಿಪಡಿಸಿದ್ದಾರೆ ಎಂದು 'ದ ಡೈಲಿ ಸ್ಟಾರ್' ದಿನಪತ್ರಿಕೆ ವರದಿ ಮಾಡಿದೆ. ನಫೀಸ್ ಈಗ ಚಿತ್ತಗಾಂಗ್‌ನ ತನ್ನ ನಿವಾಸದಲ್ಲಿ ಐಸೊಲೇಶನ್‌ನಲ್ಲಿದ್ದಾರೆ ಎನ್ನಲಾಗಿದೆ.

ಪಾಕ್‌ ವಿರುದ್ಧ ತೆಂಡೂಲ್ಕರ್ ಅದ್ಭುತ ಇನ್ನಿಂಗ್ಸ್‌ ಸ್ಮರಿಸಿದ ವಾಕರ್ ಯೂನಿಸ್ಪಾಕ್‌ ವಿರುದ್ಧ ತೆಂಡೂಲ್ಕರ್ ಅದ್ಭುತ ಇನ್ನಿಂಗ್ಸ್‌ ಸ್ಮರಿಸಿದ ವಾಕರ್ ಯೂನಿಸ್

ಬಲಗೈ ಅರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ನಫೀಸ್ ಇಕ್ಬಾಲ್, ಬಾಂಗ್ಲಾದೇಶ ಪರ 2003ರಲ್ಲಿ ಪಾದಾರ್ಪಣೆ ಮಾಡಿದ್ದರು. ಆದರೆ 2006ರಿಂದಲೂ ನಫೀಸ್ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲ. 34ರ ಹರೆಯದ ನಫೀಸ್, ಬಾಂಗ್ಲಾ ಪರ 11 ಟೆಸ್ಟ್, 16 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 518 ಮತ್ತು 309 ರನ್ ಗಳಿಸಿದ್ದಾರೆ.

ರೋಹಿತ್ ನನ್ನ ರೋಲ್ ಮಾಡೆಲ್ ಎಂದ ಪಾಕಿಸ್ತಾನ ಯುವ ಕ್ರಿಕೆಟಿಗರೋಹಿತ್ ನನ್ನ ರೋಲ್ ಮಾಡೆಲ್ ಎಂದ ಪಾಕಿಸ್ತಾನ ಯುವ ಕ್ರಿಕೆಟಿಗ

ಕಳೆದ ತಿಂಗಳು ಬಾಂಗ್ಲಾದ ಮಾಜಿ ಪ್ರಥಮದರ್ಜೆ ಕ್ರಿಕೆಟರ್ ಆಶಿಕೂರ್ ರಹಮಾನ್‌ಗೆ ಕೊರೊನಾ ವೈರಸ್ ಪಾಸಿಟಿವ್ ಆಗಿತ್ತು. ಇನ್ನು ಪಾಕಿಸ್ತಾನದ ಮೂವರು ಕ್ರಿಕೆಟಿಗರಾದ ಶಾಹಿದ್ ಅಫ್ರಿದಿ, ತೌಫೀಕ್ ಉಮರ್ ಮತ್ತು ಜಾಫರ್ ಸರ್ಫರಾಜ್‌ಗೆ ಕೊರೊನಾವೈರಸ್ ತಗುಲಿದೆ.

Story first published: Saturday, June 20, 2020, 20:34 [IST]
Other articles published on Jun 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X