ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್ ಟೆಸ್ಟ್ ತಂಡದ ನಾಯಕನಾಗಲಿ ಎಂದ ಮಾಜಿ ಬಿಸಿಸಿಐ ಕಾರ್ಯದರ್ಶಿ

Former BCCI secretary Sanjay Jagdale said KL Rahul should be next Test skipper

ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಕ್ಕಿಳಿದ ಬಳಿಕ ಟೀಮ್ ಇಂಡಿಯಾದ ಟೆಸ್ಟ್ ತಂಡದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಎದ್ದಿದೆ. ಎಲ್ಲಾ ಕ್ರಿಕೆಟ್ ಪ್ರೇಮಿಗಳು ಕೂಡ ಯಾರಗಬಹುದು ಮುಂದಿನ ನಾಯಕ ಎಂಬ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬಿಸಿಸಿಐ ಈ ಬಗ್ಗೆ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಮುಂದಿನ 15 ದಿನಗಳ ಕಾಲ ಬಿಸಿಸಿಐ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ.

ಇನ್ನು ಟೀಮ್ ಇಂಡಿಯಾದ ಮುಂದಿನ ನಾಯಕನ ಸ್ಥಾನಕ್ಕೆ ಪ್ರಮುಖವಾಗಿ ಕೇಳಿ ಬರುತ್ತಿರುವ ಎರಡು ಹೆಸರುಗಳೆಂದರೆ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ. ರೋಹಿತ್ ಶರ್ಮಾ ಸೀಮಿತ ಓವರ್‌ಗಳ ನಾಯಕನಾಗಿರುವ ಕಾರಣ ಎಲ್ಲಾ ಮಾದರಿಗೂ ಅವರನ್ನೇ ನಾಯಕನನ್ನಾಗಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ನಾಯಕನಾಗಿ ಉತ್ತಮ ಅನುಭವ ಹಾಗೂ ಉತ್ತಮ ದಾಖಲೆಗಳು ಕುಡ ಹೊಂದಿರುವುದು ರೋಹಿತ್ ಶರ್ಮಾಗೆ ಇರುವ ಸಕಾರಾತ್ಮಕ ಸಂಗತಿ.

ಕೊಹ್ಲಿಯದ್ದು ವೈಯಕ್ತಿಕ ನಿರ್ಧಾರ: ನಾಯಕತ್ವ ತೊರೆದ ವಿರಾಟ್ ಬಗ್ಗೆ ಗಂಗೂಲಿ ಮೊದಲ ಪ್ರತಿಕ್ರಿಯೆಕೊಹ್ಲಿಯದ್ದು ವೈಯಕ್ತಿಕ ನಿರ್ಧಾರ: ನಾಯಕತ್ವ ತೊರೆದ ವಿರಾಟ್ ಬಗ್ಗೆ ಗಂಗೂಲಿ ಮೊದಲ ಪ್ರತಿಕ್ರಿಯೆ

ಆದರೆ ರೋಹಿತ್ ಶರ್ಮಾ ಅವರ ಫಿಟ್‌ನೆಸ್ ಸಮಸ್ಯೆ ಹಾಗೂ ಮುಂದಿನ ಎರಡು ವರ್ಷಗಳಲ್ಲಿ ಎರಡು ವಿಶ್ವಕಪ್ ನಡೆಯಲಿರುವ ಕಾರಣ ರೋಹಿತ್ ಮೇಲೆ ಹೆಚ್ಚಿನ ಒತ್ತಡಗಳು ಬೀಳಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಹೀಗಾಗಿ ರೋಹಿತ್ ಶರ್ಮಾ ಅವರನ್ನು ಕೇವಲ ಸೀಮಿತ ಓವರ್‌ಗಳ ನಾಯಕನನ್ನಾಗಿ ಮಾಡಿ ಕೆಎಲ್ ರಾಹುಲ್‌ಗೆ ಟೆಸ್ಟ್ ನಾಯಕತ್ವ ನೀಡಬೇಕು ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿದೆ.

ಈ ಸಂದರ್ಭದಲ್ಲಿ ಬಿಸಿಸಿಐನ ಮಾಜಿ ಕಾರ್ಯದರ್ಶಿ ಸಂಜಯ್ ಜಗ್ದಲೆ ಕೆಎಲ್ ರಾಹುಲ್ ಅವರನ್ನು ತಂಡದ ಭವಿಷ್ಯದ ದೃಷ್ಟಿಯಿಂದ ನಾಯಕನನ್ನಾಗಿ ಮಾಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸುದೀರ್ಘ ಕಾಲ ತಂಡದ ನಾಯಕತ್ವ ವಹಿಸಬೇಕು ಎಂಬ ದೃಷ್ಟಿಕೋನದಿಂದ ಯೋಚಿಸಿ ರಾಹುಲ್‌ಗೆ ನಾಯಕತ್ವ ನೀಡಬೇಕು ಎಂದು ಸಂಜಯ್ ಜಗ್ದಾಲೆ ಹೇಳಿಕೆ ನೀಡಿದ್ದಾರೆ. "ಮುಂದಿನ ಭಾರತ ಟೆಸ್ಟ್ ನಾಯಕನ ಜವಾಬ್ದಾರಿಯನ್ನು ಹೆಚ್ಚು ಸಮಯದವರೆಗೆ ಮುನ್ನಡೆಸುವವರಾಗಿರಬೇಕು ಎಂದು ಬಯಸುತ್ತೇನೆ. ಹಾಗಾಗಿ ಮುಂದಿನ ಟೆಸ್ಟ್ ನಾಯಕನಾಗಿ ಕೆಎಲ್ ರಾಹುಲ್ ಸೂಕ್ತ" ಎಂದಿದ್ದಾರೆ ಜಗ್ದಾಲೆ.

ಆಶಸ್ ಸರಣಿ: ಅಂತಿಮ ಪಂದ್ಯವನ್ನೂ ಗೆದ್ದು ಬೀಗಿದ ಆಸ್ಟ್ರೇಲಿಯಾ: 4-0 ಅಂತರದಿಂದ ಸರಣಿ ವಶಕ್ಕೆಆಶಸ್ ಸರಣಿ: ಅಂತಿಮ ಪಂದ್ಯವನ್ನೂ ಗೆದ್ದು ಬೀಗಿದ ಆಸ್ಟ್ರೇಲಿಯಾ: 4-0 ಅಂತರದಿಂದ ಸರಣಿ ವಶಕ್ಕೆ

IPL 2022 Exclusive: ಎಲ್ಲಾ ಒತ್ತಡದಿಂದ ಮುಕ್ತರಾದ Virat Kohli ಈಗ RCB ಗೆ ಮತ್ತೆ ಕ್ಯಾಪ್ಟನ್!! | Oneindia

ಈ ಬಾರಿಯ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಕೆಎಲ್ ರಾಹುಲ್ ಉಪ ನಾಯಕನಾಗಿ ಜವಾಬ್ಧಾರಿ ವಹಿಸಿಕೊಂಡಿದ್ದರು. ಇನ್ನು ಈ ಸರಣಿಯ ಎರಡನೇ ಟೆಸ್ಟ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಗಾಯಗೊಂಡು ಹೊರಗುಳಿದಿದ್ದಾಗ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುವ ಅವಕಾಶವನ್ನು ಕೂಡ ಪಡೆದಿದ್ದರು. ಹೀಗಾಗಿ ಕೆಎಲ್ ರಾಹುಲ್ ಪೂರ್ಣಾವಧಿ ಟೆಸ್ಟ್ ನಾಯಕನಾಗಿ ಮುನ್ನಡೆಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

Story first published: Monday, January 17, 2022, 20:26 [IST]
Other articles published on Jan 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X