ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಮಾಜಿ ಆಯ್ಕೆದಾರ ಕಿಶನ್ ರುಂಗ್ತಾ ಕೊರೊನಾವೈರಸ್‌ಗೆ ಬಲಿ

Former BCCI selector Kishan Rungta dies of Coronavirus

ಜೈಪುರ್: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಆಯ್ಕೆ ಸಮಿತಿಯಲ್ಲಿದ್ದ ಕಿಶನ್ ರುಂಗ್ತಾ ಕೊರೊನಾವೈರಸ್‌ಗೆ ಬಲಿಯಾಗಿದ್ದಾರೆ. ಜೈಪುರ್‌ನ ಆಸ್ಪತ್ರೆಯಲ್ಲಿ ಕಿಶನ್ ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಐಪಿಎಲ್ ಆಟಗಾರರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ ಐಪಿಎಲ್ ಸ್ಥಾಪಕ!ಐಪಿಎಲ್ ಆಟಗಾರರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ ಐಪಿಎಲ್ ಸ್ಥಾಪಕ!

ಬಿಸಿಸಿಐ ಹಿರಿಯ ಆಡಳಿತಾಧಿಕಾರಿಯಾಗಿದ್ದ ಕಿಶನ್ ರುಂಗ್ತಾಗೆ ಕಳೆದ ವಾರ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಶನಿವಾರ (ಮೇ 2) ರುಂಗ್ತಾ ಸಾವನ್ನಪ್ಪಿದ್ದಾರೆ. ಬಿಸಿಸಿಐ ಮೂಲ ಈ ಸಂಗತಿಯನ್ನು ಪಿಟಿಐಗೆ ಖಾತರಿಪಡಿಸಿದೆ.

'ರಾಜಸ್ಥಾನ್‌ನ ಮಾಜಿ ಪ್ರಥಮದರ್ಜೆ ಕ್ರಿಕೆಟರ್ ಮತ್ತು ಬಿಸಿಸಿಐ ಮಾಜಿ ಆಯ್ಕೆದಾರರಾಗಿದ್ದ ಕಿಶನ್ ರುಂಗ್ತಾ ಅವರು ಕೋವಿಡ್-19ನಿಂದ ಸಾವನ್ನಪ್ಪಿದ್ದಾರೆ,' ಎಂದು ಬಿಸಿಸಿಐ ಮೂಲ ತಿಳಿಸಿದೆ. ರುಂಗ್ತಾ ಅವರು 1998ರಲ್ಲಿ ಸೆಂಟ್ರಲ್‌ ಝೋನ್‌ನಿಂದ ರಾಷ್ಟ್ರೀಯ ಆಯ್ಕೆದಾರರಾಗಿದ್ದರು.

ಚೆನ್ನೈ ವಿರುದ್ಧದ ರನ್ ಚೇಸ್ ರಹಸ್ಯ ಬಿಚ್ಚಿಟ್ಟ ಪೊಲಾರ್ಡ್ ; ಇದು ಡ್ರೆಸಿಂಗ್ ರೂಮ್ ಪ್ಲಾನ್ಚೆನ್ನೈ ವಿರುದ್ಧದ ರನ್ ಚೇಸ್ ರಹಸ್ಯ ಬಿಚ್ಚಿಟ್ಟ ಪೊಲಾರ್ಡ್ ; ಇದು ಡ್ರೆಸಿಂಗ್ ರೂಮ್ ಪ್ಲಾನ್

1953ರಿಂದ 1970ರ ವರೆಗೆ 59 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ್ದ ರುಂಗ್ತಾ 2717 ರನ್ ಗಳಿಸಿದ್ದರು. ರುಂಗ್ತಾ ಅವರ ದಿವಂಗತ ಅಣ್ಣ ಕೂಡ 1970ರಲ್ಲಿ ಬಿಸಿಸಿಐ ಖಜಾಂಚಿಯಾಗಿದ್ದರು.

Story first published: Monday, May 3, 2021, 9:19 [IST]
Other articles published on May 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X