ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಜಿ ನಾಯಕ ಗೌತಮ್ ಗಂಭೀರ್ ಹೇಳಿದ ಹಾಲೀ ಐಪಿಎಲ್ ನ ಬೆಸ್ಟ್ ಬ್ಯಾಟ್ಸ್ ಮ್ಯಾನ್

ಒಂದು ವಾರದ ಹಿಂದೆ ಆರಂಭವಾದ ಹದಿಮೂರನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇದುವರೆಗೆ ಏಳು ಪಂದ್ಯಗಳು ನಡೆದಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ಹೊರತು ಪಡಿಸಿ ಮಿಕ್ಕೆಲ್ಲಾ ತಂಡಗಳು ಈಗಾಗಲೇ ಎರಡು ಪಂದ್ಯಗಳನ್ನು ಆಡಿವೆ.

ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಮೂರು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಎರಡರಲ್ಲಿ ಸೋಲು ಅನುಭವಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಸಿಎಸ್ಕೆ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 44ರನ್ ಗಳಿಂದ ಸೋಲುಂಡಿತು. ಆ ಮೂಲಕ, ಡೆಲ್ಲಿ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಅಚ್ಚರಿಯ ಫಲಿತಾಂಶವನ್ನು ನೀಡಿದೆ.

ನಂ.7 ಕ್ರಮಾಂಕದಲ್ಲಿ ಬಂದು ಧೋನಿ ಕಿಸಿದಿದ್ದೇನು?: ಗಂಭೀರ್ ಕಿಡಿ ನಂ.7 ಕ್ರಮಾಂಕದಲ್ಲಿ ಬಂದು ಧೋನಿ ಕಿಸಿದಿದ್ದೇನು?: ಗಂಭೀರ್ ಕಿಡಿ

ಹಾಲೀ ಬಿಜೆಪಿಯ ಲೋಕಸಭಾ ಸದಸ್ಯ, ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ , ಹಾಲೀ ಐಪಿಎಲ್ ಟೂರ್ನಮೆಂಟಿನ ಅತ್ಯುತ್ತಮ ಯುವ ಬ್ಯಾಟ್ಸ್ ಮ್ಯಾನ್ ಯಾರು ಎನ್ನುವುದನ್ನು ಹೇಳಿದ್ದಾರೆ. ಈ ವಿಚಾರದಲ್ಲಿ ಯಾವುದೇ ಡಿಬೇಟ್ ಗೆ ಸಿದ್ದನಿದ್ದೇನೆ ಎನ್ನುವ ಆಹ್ವಾನವನ್ನೂ ನೀಡಿದ್ದಾರೆ.

ಐಪಿಎಲ್ ಮೊದಲ ಆವೃತ್ತಿಯಿಂದ (2008) 2018ರವರೆಗೂ ಭಾಗವಹಿಸಿದ್ದ ಗಂಭೀರ್, ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿದ್ದರು. ಗಂಭೀರ್ ಹೇಳಿದ ಹಾಲೀ ಐಪಿಎಲ್ ನ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಗಳು ಯಾರು? ಮುಂದೆ ಓದಿ..

ಗೌತಮ್ ಗಂಭೀರ್ ಅವರನ್ನು ಡೆಲ್ಲಿ ತಂಡ 2008ರಲ್ಲಿ ತನ್ನದಾಗಿಸಿಕೊಂಡಿತ್ತು

ಗೌತಮ್ ಗಂಭೀರ್ ಅವರನ್ನು ಡೆಲ್ಲಿ ತಂಡ 2008ರಲ್ಲಿ ತನ್ನದಾಗಿಸಿಕೊಂಡಿತ್ತು

154 ಪಂದ್ಯ, 152 ಇನ್ನಿಂಗ್ಸ್ ಮೂಲಕ, 17 ಬಾರಿ ನಾಟೌಟ್ ಆಗಿ, 4217 ರನ್ ಹೊಡೆದಿರುವ ಗೌತಮ್ ಗಂಭೀರ್ ಅವರ, ಅತಿಹೆಚ್ಚು ವೈಯಕ್ತಿಕ ಸ್ಕೋರ್ 93. 36 ಅರ್ಧಶತಕ ಸಿಡಿಸಿರುವ ಗೌತಮ್ ಗಂಭೀರ್ ಅವರನ್ನು, 725,000 ಸಾವಿರ ಅಮೆರಿಕನ್ ಡಾಲರ್ ಗೆ ಬಿಡ್ ನಲ್ಲಿ ಡೆಲ್ಲಿ ತಂಡ 2008ರಲ್ಲಿ ತನ್ನದಾಗಿಸಿಕೊಂಡಿತ್ತು. (ಚಿತ್ರ:ಪಿಟಿಐ)

ಗಂಭೀರ್ ಟ್ವೀಟ್

ರಾಜಸ್ಥಾನ ರಾಯಲ್ಸ್ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮ್ಯಾನ್ ಸಂಜು ಸ್ಯಾಮ್ಸನ್ ಈಗಾಗಲೇ ತಮ್ಮ ಬಿರುಗಾಳಿ ಬ್ಯಾಟಿಂಗ್ ನಿಂದ ಹೆಸರುವಾಸಿಯಾಗಿದ್ದಾರೆ. "ಈತ ಬರೀ ಅತ್ಯುತ್ತಮ ವಿಕೆಟ್ ಕೀಪರ್ ಮಾತ್ರ ಅಲ್ಲ, ಈತ ಭಾರತದ ಬೆಸ್ಟ್ ಯುವ ಬ್ಯಾಟ್ಸ್ ಮ್ಯಾನ್ ಕೂಡಾ. ಯಾರಾದಾರೂ ಈ ವಿಚಾರದಲ್ಲಿ ಡಿಬೇಟ್ ಗೆ ಬರುತ್ತೀರಾ" ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

ಈ ಸಲ ಕಪ್‌ ಗೆಲ್ಲಲು ಆರ್‌ಸಿಬಿಗೆ ಪ್ರಮುಖ ಸಲಹೆ ಕೊಟ್ಟ ಗೌತಮ್ ಗಂಭೀರ್

ಸ್ಯಾಮ್ಸನ್ ಎದುರಾಳಿ ಬೌಲರ್ ಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದರು

ಸ್ಯಾಮ್ಸನ್ ಎದುರಾಳಿ ಬೌಲರ್ ಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದರು

ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಪಂದ್ಯದಲ್ಲಿ ಸ್ಯಾಮ್ಸನ್ ಎದುರಾಳಿ ಬೌಲರ್ ಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದರು. ಕೇವಲ ಹತ್ತೊಂಬತ್ತು ಬಾಲ್ ಗಳಲ್ಲಿ ಅರ್ಧ ಶತಕ ಸಿಡಿಸಿದ್ದ ಸ್ಯಾಮ್ಸನ್, ಒಂಬತ್ತು ಸಿಕ್ಸರ್ ಗಳನ್ನು ಎತ್ತಿದ್ದರು. ಆ ಪಂದ್ಯದಲ್ಲಿ ರಾಜಸ್ಥಾನ ತಂಡ ಹತ್ತೊಂಬತ್ತು ರನ್ ಗಳಿಂದ ಜಯ ಸಾಧಿಸಿತ್ತು. (ಚಿತ್ರ:ಪಿಟಿಐ)

ಕೇರಳ ಮೂಲದ ಸಂಜು ಸ್ಯಾಮ್ಸನ್

ಕೇರಳ ಮೂಲದ ಸಂಜು ಸ್ಯಾಮ್ಸನ್

ಕೇರಳ ಮೂಲದ ಸಂಜು ಸ್ಯಾಮ್ಸನ್ ಇದುವರೆಗೆ 94 ಪಂದ್ಯಗಳನ್ನು ಆಡಿ, 2283 ರನ್ ಗಳನ್ನು ಹೊಡೆದಿದ್ದಾರೆ. ಚೆನ್ನೈ ಜೊತೆಗಿನ ಪಂದ್ಯದಲ್ಲಿ ವಿಕೆಟ್ ಹಿಂದೆಯೂ ಉತ್ತಮ ಕೆಲಸ ಮಾಡಿದ್ದ ಸ್ಯಾಮ್ಸನ್ ಎರಡು ಕ್ಯಾಚ್ ಹಿಡಿದು, ಇಬ್ಬರನ್ನು ಸ್ಟಂಪ್ ಔಟ್ ಮಾಡಿದ್ದರು. ಆ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮ್ಯಾನ್ ಆಫ್ ದಿ ಮ್ಯಾಚ್ ಕೂಡಾ ಆಗಿದ್ದರು. (ಚಿತ್ರ:ಪಿಟಿಐ)

Story first published: Saturday, September 26, 2020, 13:35 [IST]
Other articles published on Sep 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X