ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಬ್ಯಾಟಿಂಗ್‌ ಕೋಚ್ ಸ್ಥಾನದಿಂದ ಕೆಳಗಿಳಿದ ಯೂನಿಸ್ ಖಾನ್

Former captain Younis Khan steps down as Pakistans batting coach

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಯೂನಿಸ್ ಖಾನ್, ಪಾಕ್ ರಾಷ್ಟ್ರೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಸ್ಥಾನದಿಂದ ಮಂಗಳವಾರ (ಜೂನ್ 22) ಕೆಳಗಿಳಿಸಿದ್ದಾರೆ. ಯೂನಿಸ್ ನಿರ್ಧಾರಕ್ಕೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಆದರೆ ಪಾಕ್ ಕ್ರಿಕೆಟ್ ಬೋರ್ಡ್ ಖಾನ್ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.

ಭಾರತೀಯ ಕ್ರಿಕೆಟ್‌ ಇತಿಹಾಸದ ಈ ಕಾಕತಾಳೀಯ ಸಂಗತಿ ನಿಮ್ಮನ್ನು ಅಚ್ಚರಿಗೀಡುಮಾಡುತ್ತೆ!ಭಾರತೀಯ ಕ್ರಿಕೆಟ್‌ ಇತಿಹಾಸದ ಈ ಕಾಕತಾಳೀಯ ಸಂಗತಿ ನಿಮ್ಮನ್ನು ಅಚ್ಚರಿಗೀಡುಮಾಡುತ್ತೆ!

ಜೂನ್ 25ರಿಂದ ಜುಲೈ 20ರ ವರೆಗೆ ಪಾಕಿಸ್ತಾನ ತಂಡದ ಯುಕೆ ಪ್ರವಾಸ ಸರಣಿ ಆರಂಭಗೊಳ್ಳಲಿದೆ. ಇಂಗ್ಲೆಂಡ್‌ನಲ್ಲಿ ಪಾಕಿಸ್ತಾನ ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನಾಡಲಿದೆ. ಆ ಬಳಿಕ ವೆಸ್ಟ್‌ ಇಂಡೀಸ್‌ಗೆ ಪ್ರವಾಸ ಹೋಗಲಿರುವ ಪಾಕ್ ತಂಡ ಅಲ್ಲಿ ಜುಲೈ 25ರಿಂದ ಆಗಸ್ಟ್ 24ರ ವರೆಗೆ 5 ಟಿ20ಐ ಮತ್ತು 2 ಟೆಸ್ಟ್‌ ಪಂದ್ಯಗಳನ್ನಾಡಲಿದೆ.

ಯೂನಿಸ್ ಅಚಾನಕ್ ನಿರ್ಧಾರದಿಂದ ಅಚ್ಚರಿಯಾಗಿದೆ. ಆದರೆ ನಾವು ಯೂನಿಸ್ ನಿರ್ಧಾರ ಗೌರವಿಸುತ್ತೇವೆ ಎಂದು ಪಾಕ್ ಬೋರ್ಡ್ ಹೇಳಿದೆ. ಯುಕೆ ಪ್ರವಾಸಕ್ಕೆ ಪಾಕ್ ತಂಡ ಬ್ಯಾಟಿಂಗ್ ಕೋಚ್ ಇಲ್ಲದೆ ಹೋಗಲಿದೆ ಎಂದು ಬೋರ್ಡ್ ತಿಳಿಸಿದೆ.

WTC Final: WTC Final: "ಪಂತ್‌ನಿಂದ ಸಾಧ್ಯವಾಗದ್ದು ಗ್ರಾಂಡ್‌ಹೋಮ್‌ನಿಂದ ಸಾಧ್ಯವಾಗಲಿದೆ"

'ಬ್ಯಾಟಿಂಗ್‌ ಕೋಚ್ ಇಲ್ಲದೆ ಪಾಕ್‌ ಕ್ರಿಕೆಟ್ ತಂಡ ಯುನೈಟೆಡ್ ಕಿಂಗ್ಡಮ್‌ಗೆ ಪ್ರಯಾಣಿಸಲಿದೆ. ವೆಸ್ಟ್ ಇಂಡೀಸ್ ಪ್ರವಾಸದ ವೇಳೆಗೆ ಯೂನಿಸ್ ಜಾಗಕ್ಕೆ ಬೇರೆ ಆಯ್ಕೆ ನಡೆಸಲು ಪಾಕ್‌ ಬೋರ್ಡ್ ಯೋಚಿಸಿದೆ,' ಎಂದು ಪಾಕ್ ಬೋರ್ಡ್ ತಿಳಿಸಿದೆ. 43ರ ಹರೆಯದ ಖಾನ್ 118 ಟೆಸ್ಟ್‌ ಪಂದ್ಯಗಳಲ್ಲಿ 10099 ರನ್, 265 ಏಕದಿನ ಪಂದ್ಯಗಳಲ್ಲಿ 7249 ರನ್, 25 ಟಿ20ಐ ಪಂದ್ಯಗಳಲ್ಲಿ 442 ರನ್ ದಾಖಲೆ ಹೊಂದಿದ್ದಾರೆ.

Story first published: Tuesday, June 22, 2021, 17:20 [IST]
Other articles published on Jun 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X