ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಏಕದಿನ ತಂಡಕ್ಕೆ ಕಾಡುತ್ತಿದೆ ಈ ಕೊರತೆ: ಐಸಿಸಿ ಟೂರ್ನಿ ಗೆಲ್ಲದಿರಲೂ ಇದೇ ಕಾರಣ ಎಂದ ಗವಾಸ್ಕರ್

Former cricietr Sunil Gavaskar Highlights One Shortcoming In Indias white ball cricket Set-Up

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧಧ ಏಕದಿನ ಸರಣಿಯ ಮೊದಲ ಪಂದ್ಯ ಅಂತ್ಯವಾಗಿದ್ದು ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ. ಕಳೆದ ಬುಧವಾರ ನಡೆದ ಪಾರ್ಲ್‌ನಲ್ಲಿ ಪಂದ್ಯದಲ್ಲಿ ಭಾರತ 31 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿತು. ಭಾರತ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಆರಂಭಿಕ ಮೇಲುಗೈ ಸಾಧಿಸಿದ್ದಬಳಿಕ ಅದನ್ನು ಮುಂದುವರಿಸಿಕೊಂಡು ಹೋಗವನ್ನಿ ವಿಫಲವಾಯಿತು. ಟೆಂಬಾ ಬವುಮಾ ಹಾಗೂ ವಾನ್‌ ಡರ್‌ ಡಸ್ಸೆನ್ ಭರ್ಜರಿ ಶತಕಗಳನ್ನು ಸಿಡಿಸುವ ಮೂಲಕ ಈ ಪಂದ್ಯದಲ್ಲಿ ಭಾರತ ತಂಡದ ಹಿನ್ನಡೆಗೆ ಕಾರಣವಾದರು.

ಒಂದು ಹಂತದಲ್ಲಿ 68 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಪ್ರಿಕಾ ಪಂದ್ಯ ಮುಗಿಯುವ ವೇಳೆಗೆ 294/4 ರನ್‌ಗಳಿಸಲು ಶಕ್ತವಾಗಿತ್ತು. ನಂತರ ಬ್ಯಾಟಿಂಗ್‌ನಲ್ಲಿಯೂ ಭಾರತ ಇಂತಾದ್ದೇ ಹಿನ್ನಡೆಯನ್ನು ಅನುಭವಿಸಿತು. ಶಿಖರ್ ಧವನ್ 79 ರನ್‌ಗಳಿಸಿದರೆ ವಿರಾಟ್ ಕೊಹ್ಲಿ 52 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ನಂತರ ಭಾರತ ದೊಡ್ಡ ಕುಸಿತವನ್ನು ಕಂಡಿತು. ಇದರ ಪರಿಣಾಮವಾಗಿ ಭಾರತ ಪಂದ್ಯದಲ್ಲಿ ಮರಳಿ ಹಿಡಿತ ಸಾಧಿಸಲು ಸಾಧ್ಯವಾಗಲೇ ಇಲ್ಲ.ಈ ಮೂಲಕ ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತು.

ಈ ಸೊಲಿನ ಬಳಿಕ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿದ್ದು ಕೆಲ ಮಹತ್ವದ ಅಂಶಗಳನ್ನು ಹಂಚಿಕೊಂಡಿದ್ದಾರೆ.

ತಾಳ್ಮೆಯಿಂದ ಇರಲಿ ಗವಾಸ್ಕರ್ ಮನವಿ

ತಾಳ್ಮೆಯಿಂದ ಇರಲಿ ಗವಾಸ್ಕರ್ ಮನವಿ

ಭಾರತ ತಂಡ ದಕ್ಷಿಣ ಆಪ್ರಿಕಾ ವಿರುದ್ಧ ಅನುಭವಿಸಿದ ಸೋಲಿನ ಬಗ್ಗೆ ಸುನಿಲ್ ಗವಾಸ್ಕರ್ ಖಾಸಗಿ ವಾಹಿನಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸುನಿಲ್ ಗವಾಸ್ಕರ ಅಭಿಮಾನಿಗಳು ತಾಳ್ಮೆಯಿಂದ ಇದ್ದು ಸರಣಿ ಅಂತ್ಯದವರೆಗೂ ಕಾಯುವಂತೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ನಾಯಕತ್ವ ಬದಲಾವಣೆಯ ಈ ಸಂದರ್ಭದಲ್ಲಿ ಅಭಿಮಾನಿಗಳು ತಂಡಕ್ಕೆ ಬೆಂಬಲವನ್ನು ನೀಡಬೇಕು ಎಂದಿದ್ದಾರೆ. ಆದರೆ ಈ ಸಂದರ್ಭದಲ್ಲಿ ಭಾರತ ಏಕದಿನ ತಂಡದಲ್ಲಿರುವ ಕೊರತೆಯ ಬಗ್ಗೆ ಬೊಟ್ಟು ಮಾಡಿದರು. ಈ ಕಾರಣದಿಂದಾಗಿಯೇ ಭಾರತ ತಂಡ ಸಮತೋಲನವನ್ನು ಕಳೆದುಕೊಳ್ಳುತ್ತಿದೆ ಎಂದಿದ್ದಾರೆ.

ಐಸಿಸಿ ಟೂರ್ನಿಗಳಲ್ಲಿ ಹಿನ್ನಡೆಗೂ ಇದೇ ಕಾರಣ

ಐಸಿಸಿ ಟೂರ್ನಿಗಳಲ್ಲಿ ಹಿನ್ನಡೆಗೂ ಇದೇ ಕಾರಣ

ಭಾರತ ತಂಡ ಐಸಿಸಿ ಟೂರ್ನಮೆಂಟ್‌ಗಳಲ್ಲಿ ನಿರಾಸೆಗೊಳ್ಳುವುದಕ್ಕೆ ಒಂದೇ ಒಂದು ಕಾರಣವಿದೆ. 1983 ಹಾಗೂ 2011ರ ವಿಶ್ವಕಪ್ ಹಾಗೂ 1985ರ ವಿಶ್ವ ಚಾಂಪಿಯನ್‌ಶಿಪ್‌ನ ಗೆದ್ದ ಬಾರತ ತಂಡವನ್ನು ನೀವು ಗಮನಿಸಿದರೆ ಆ ತಂಡಗಳಲ್ಲಿ ಅದ್ಭುತವಾದ ಆಲ್‌ರೌಂಡರ್‌ಗಳು ಇದ್ದರು. ಸಾಕಷ್ಟು ಬ್ಯಾಟರ್‌ಗಳು ಬೌಲಿಂಗ್‌ ಕೂಡ ನಡೆಸುವ ಸಾಮರ್ಥ್ಯವನ್ನು ಹೊಂದಿದ್ದರು. 6-8 ಮಂದಿ ಬೌಲರ್‌ಗಳು ಬೌಲಿಂಗ್‌ಗೆ ಲಭ್ಯವಿರುತ್ತಿದ್ದರು. ಇದು ತಂಡದ ಯಶಸ್ಸಿಗೆ ಮಹತ್ತರವಾದ ಕಾರಣವಾಗಿತ್ತು ಎಂದಿದ್ದಾರೆ ಸುನಿಲ್ ಗವಾಸ್ಕರ್.

ಭಾರತ ತಂಡಕ್ಕೆ ಕಾಡುತ್ತಿದೆ ಈ ಕೊರತೆ

ಭಾರತ ತಂಡಕ್ಕೆ ಕಾಡುತ್ತಿದೆ ಈ ಕೊರತೆ

"ಯುವರಾಜ್ ಸಿಂಗ್, ಸುರೇಶ್ ರೈನಾ ಅವರಂತಾ ಬ್ಯಾಟರ್‌ಗಳು ಬೌಲಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಕಳೆದ ಎರಡ್ಮೂರು ವರ್ಷಗಳಲ್ಲಿ ಭಾರತಕ್ಕೆ ಈ ಅಂಶ ಬಹುವಾಗಿ ಕಾಡುತ್ತಿದೆ. ಇದರ ಪರಿಣಾಮವಾಗಿ ನಾಯಕನಿಗೆ ಬೌಲಿಂಗ್ ವಿಚಾರದಲ್ಲಿ ಹೆಚ್ಚಿನ ಆಯ್ಕೆಗಳು ಇರುವುದಿಲ್ಲ. ಇದು ತಂಡದ ಸಮತೋಲನಕ್ಕೆ ಹಿನ್ನಡೆಯಾಗುತ್ತದೆ" ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.

Rohit Sharmaಗೆ ನಾಯಕತ್ವದ ಒತ್ತಡ ತಿಳಿಯೋದು ಆಗ | Oneindia Kannada

Story first published: Friday, January 21, 2022, 13:48 [IST]
Other articles published on Jan 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X