ಧವನ್ ಹಾಗೂ ತೆಂಡೂಲ್ಕರ್ ನಡುವಿನ ಸಾಮ್ಯತೆ ವಿವರಿಸಿದ ಅಜಯ್ ಜಡೇಜಾ

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿದ್ದು 10 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಜಿಂಬಾಬ್ವೆ ಭಾರತ ತಂಡದ ವಿರುದ್ಧ ಯಾವ ಹಂತದಲ್ಲಿಯೂ ಪ್ರತಿರೋಧವನ್ನು ಒಡ್ಡಲಾಗದೆ ವೈಫಲ್ಯತೆಯನ್ನು ಅನುಭವಿಸಿದೆ. ಈ ಪಂದ್ಯದಲ್ಲಿ ಅನುಭವಿ ಆರಂಭಿಕ ಆಟಗಾರ ಶಿಖರ್ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಜಿಂಬಾಬ್ವೆ ನೀಡಿದ ಸುಲಭ ಸವಾಲ್ನನು ಬೆನ್ನಟ್ಟಿದ ಸಂದರ್ಭದಲ್ಲಿ ಧವನ್ 113 ಎಸೆತಗಳಲ್ಲಿ 81 ರನ್‌ ಬಾರಿಸಿ ಮಿಂಚಿದರು. ಈ ಇನ್ನಿಂಗ್ಸ್‌ ಒಂಬತ್ತು ಬೌಂಡರಿಗಳನ್ನುಜ ಒಳಗೊಂಡಿತ್ತು. ಇನ್ನು ಶುಬ್ಮನ್ ಗಿಲ್ ಜೊತೆಗೆ ಸೇರಿಕೊಂಡು 30.5 ಓವರ್‌ಗಳಲ್ಲಿ 192 ರನ್‌ಗಳ ಅಜೇಯ ಜೊತೆಯಾಟವನ್ನು ದಾಖಲಿಸಿದ್ದಾರೆ. ಈ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಪ್ರತಿಕ್ರಿಯಿಸಿದ್ದು ಕಳೆದ ಕೆಲ ವರ್ಷಗಳಲ್ಲಿ ಯುವ ಪ್ರತಿಭಾವಂತರ ಆಗಮನವಾಗುತ್ತಿರುವ ಹಿನ್ನೆಲೆಯಲ್ಲಿ ಧವನ್ ತಮ್ಮ ಆಟದಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

Anil Kumble: ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಿಂದ ಕನ್ನಡಿಗ ಕುಂಬ್ಳೆ ಔಟ್; ಬೇರೆ ಕೋಚ್ ಆಯ್ಕೆ!Anil Kumble: ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಿಂದ ಕನ್ನಡಿಗ ಕುಂಬ್ಳೆ ಔಟ್; ಬೇರೆ ಕೋಚ್ ಆಯ್ಕೆ!

"ಸಚಿನ್ ಮಾಡಿಕೊಂಡಿದ್ದ ಬದಲಾವಣೆ ಮಾಡಿದ್ದಾರೆ ಧವನ್"

"ಕ್ರಿಕೆಟ್‌ನಲ್ಲಿ ಯುವ ಆಟಗಾರರು ಆಗಮನವಾಗುವ ಸಂದರ್ಭದಲ್ಲಿ ನೀವು ಮತ್ತೆ ಹೊಸ ಶಕ್ತಿಯೊಂದಿಗೆ ಮರಳಬೇಕಾಗುತ್ತದೆ. ನಿಮ್ಮ ಆಟದಲ್ಲಿ ನೀವು ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಹೊಸ ತಲೆಮಾರಿನ ಆಟಗಾರರು ತೀಕ್ಷ್ಣವಾಗಿ, ವೇಗವಾಗಿ ಹಾಗೂ ಚತುರತೆಯನ್ನೊಳಗೊಂಡಿರುತ್ತಾರೆ. ಅವರು ನಿಮ್ಮನ್ನು ಯಾವಾಗಲೂ ಮುಂದಕ್ಕೆ ತಳ್ಳುತ್ತಿರುತ್ತಾರೆ. ಅದಕ್ಕೆ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಸಚಿನ್ ತೆಂಡೂಲ್ಕರ್ ಉತ್ತಮ ಉದಾಹರಣೆ" ಎಂದಿದ್ದಾರೆ ಅಜಯ್ ಜಡೇಜಾ.

ಯುವರಾಜ್, ಧೋನಿ ಬಂದಾಗ ಸಚಿನ್ ಮಾಡಿದ್ದು ಇದನ್ನೇ

ಯುವರಾಜ್, ಧೋನಿ ಬಂದಾಗ ಸಚಿನ್ ಮಾಡಿದ್ದು ಇದನ್ನೇ

ಮುಮದುವರಿದು ಮಾತನಾಡಿದ ಅಜಯ್ ಜಡೇಜಾ ಭಾರತ ಕ್ರಿಕೆಟ್ ತಂಡಕ್ಕೆ ಎಂಎಸ್ ಧೋನಿ, ಯುವರಾಜ್ ಸಿಂಗ್ ಅವರಂತಾ ಆಟಗಾರರು ಬಂದಾಗ ಸಚಿನ್ ತೆಂಡೂಲ್ಕರ್ ಇದೇ ರೀತಿ ಮಾಡಿಕೊಂಡಿದ್ದರು. ತಮ್ಮಲ್ಲಿ ಹೊಸ ಚೈತನ್ಯವನ್ನು ತುಂಬಿಸಿಕೊಂಡರು. ಆಟದ ವೇಗದಲ್ಲಿ ಬದಲಾವಣೆಯನ್ನು ಮಾಡಿಕೊಂಡರು. ಈ ಮೂಲಕ ಯುವ ಆಟಗಾರರ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿದರು. ಈಗ ಶಿಖರ್ ಧವನ್ ಕೂಡ ಅದೇ ರೀತಿಯ ಬದಲಾವಣೆ ಮಾಡಿಕೊಂಡಿದ್ದಾರೆ " ಎಂದಿದ್ದಾರೆ ಅಜಯ್ ಜಡೇಜಾ.

12 ವರ್ಷಗಳ ವೃತ್ತಿ ಜೀವನ

12 ವರ್ಷಗಳ ವೃತ್ತಿ ಜೀವನ

ಶಿಖರ್ ಧವನ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಈಗಾಗಲಢ 12 ವರ್ಷಗಳಾಗಿದೆ. 156 ಏಕದಿನ ಪಂದ್ಯಗಳಲ್ಲಿ ದೆಹಲಿ ಮೂಲಕ ಈ ಆಟಗಾರ ಆಡಿದ್ದು 6574 ರನ್‌ಗಳನ್ನು ಗಳಿಸಿದ್ದಾರೆ. 45.97ರ ಸರಾಸರಿಯಲ್ಲಿ ಅವರು ಬ್ಯಾಟಿಂಗ್ ನಡೆಸಿದ್ದು 17 ಶತಕ ಹಾಗೂ 28 ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ.

Ishan Kishan ಹಾಗು KL Rahul ಅವರ ವೀಡಿಯೋ ಎಲ್ಲೆಡೆ ವೈರಲ್ | *Cricket | OneIndia Kannada
ಶನಿವಾರ ನಡೆಯಲಿದೆ ಎರಡನೇ ಪಂದ್ಯ

ಶನಿವಾರ ನಡೆಯಲಿದೆ ಎರಡನೇ ಪಂದ್ಯ

ಇನ್ನು ಜಿಂಬಾಬ್ವೆ ಹಾಗೂ ಭಾರತ ತಂಡದ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯ ಶನಿವಾರ ನಡೆಯಲಿದೆ. ಈ ಪಂದ್ಯ ಕೂಡ ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿಯೇ ನಡೆಯಲಿದೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಕೆಎಲ್ ರಾಹುಲ್ ಮೊದಲ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಇದೇಗ ಮೊದಲ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಶಿಖರ್ ಧವನ್ ಭಾರತ ತಂಡದ ಉಪನಾಯಕನಾಗಿ ಸಾಥ್ ನೀಡುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, August 19, 2022, 13:39 [IST]
Other articles published on Aug 19, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X