ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್ ಯಾದವ್ ಸಾಮರ್ಥ್ಯ, ಭವಿಷ್ಯದ ಬಗ್ಗೆ ಆಶಿಶ್ ನೆಹ್ರಾ ನೀಡಿದ ಸಲಹೆ ಏನು?

Former Cricketer Ashish Nehra Reaction On Suryakumar Yadavs Batting Form And Capability

ಭಾರತದ ಸ್ಫೋಟಕ ಬಲಗೈ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರು 2022ರ ಐಸಿಸಿ ಪುರುಷರ ಟಿ20 ಕ್ರಿಕೆಟಿಗ ಪ್ರಶಸ್ತಿ ವಿಜೇತರಾಗಿದ್ದಾರೆ. ಈ ಐಸಿಸಿ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಸೂರ್ಯಕುಮಾರ್ ಪಾತ್ರರಾಗಿದ್ದಾರೆ.

ಸೂರ್ಯಕುಮಾರ್ ಯಾದವ್ ತಮ್ಮ ಪ್ರತಿಸ್ಪರ್ಧಿಗಳಾದ ಇಂಗ್ಲೆಂಡ್‌ನ ಎಡಗೈ ವೇಗದ ಆಲ್‌ರೌಂಡರ್ ಸ್ಯಾಮ್ ಕರ್ರಾನ್, ಜಿಂಬಾಬ್ವೆಯ ಆಫ್-ಸ್ಪಿನ್ ಆಲ್‌ರೌಂಡರ್ ಸಿಕಂದರ್ ರಾಝಾ ಮತ್ತು 2021ರ ಪ್ರಶಸ್ತಿ ವಿಜೇತ, ಪಾಕಿಸ್ತಾನದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಅವರನ್ನು ಹಿಂದಿಕ್ಕಿ 2022ರ ಪ್ರಶಸ್ತಿಗೆ ಭಾಜನಾರದರು.

ICC Men's Test Cricketer of 2022: ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಬೆನ್ ಸ್ಟೋಕ್ಸ್ICC Men's Test Cricketer of 2022: ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಬೆನ್ ಸ್ಟೋಕ್ಸ್

ಇದೇ ವೇಳೆ ಸೂರ್ಯಕುಮಾರ್ ಯಾದವ್ ಅವರು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಯಶಸ್ವಿಯಾಗಲು ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಬೆಂಬಲಿಸಿದ್ದಾರೆ. ಸೂರ್ಯಕುಮಾರ್ ಅಂತಹ ಸಾಮರ್ಥ್ಯವನ್ನು ಹೊಂದಿರುವುದರಿಂದ ಈಗಿರುವ ಟಿ20 ಫಾರ್ಮ್‌ ಅನ್ನು ಎಲ್ಲ ಸ್ವರೂಪಗಳಲ್ಲಿ ಮುಂದುವರೆಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಐಸಿಸಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಮಾತನಾಡಿದ ಆಶಿಶ್ ನೆಹ್ರಾ ತಿಳಿಸಿದ್ದಾರೆ.

Former Cricketer Ashish Nehra Reaction On Suryakumar Yadavs Batting Form And Capability


"ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಸದ್ಯ ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಇತ್ತೀಚಿಗೆ ಕೆಲವು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟಿ20 ಆಟವನ್ನು ಇಲ್ಲಿಯೂ ಮುಂದುವರೆಸಿದರೆ, ಆಡುವ 11ರ ಬಳಗದಲ್ಲಿ ಸ್ವಾಭಾವಿಕವಾಗಿ ಸ್ಥಾನ ದೊರೆಯುತ್ತದೆ," ಎಂದು ಆಶಿಶ್ ನೆಹ್ರಾ ಅಭಿಪ್ರಾಯಪಟ್ಟರು.

ಇತರ ಆಟಗಾರರು ಉತ್ತಮ ಪ್ರದರ್ಶನ ನೀಡಲು ವಿಫಲವಾದರೆ, ತಂಡದಲ್ಲಿ ಸ್ಥಾನ ಪಡೆಯಲು ಸೂರ್ಯಕುಮಾರ್ ಯಾದವ್ ಸದಾ ಸಿದ್ಧರಿರುತ್ತಾರೆ ಎಂದು ಗುಜರಾತ್ ಟೈಟನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಹೇಳಿದರು.

"ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಪಡೆದಿರುವುದರಲ್ಲಿ ಆಶ್ಚರ್ಯವೇನಿಲ್ಲ. ಕಳೆದೆರಡು ವರ್ಷಗಳಿಂದ ಸೂರ್ಯಕುಮಾರ್ ಯಾದವ್ ಸತತವಾಗಿ ಮಿಂಚಿದ್ದಾನೆ. ಆಶಾದಾಯಕವಾಗಿ, ಇದೆ ಫಾರ್ಮ್‌ ಅನ್ನು ಮುಂದುವರಿಸಬಹುದು ಏಕೆಂದರೆ ಅವನು ಅಂತಹ ಉನ್ನತ ಮಟ್ಟದಲ್ಲಿ ಆಡಿದ್ದಾನೆ. ಸ್ಟ್ರೈಕ್‌ರೇಟ್ ಅತ್ಯುತ್ತಮವಾಗಿದೆ," ಎಂದು ನೆಹ್ರಾ ತಿಳಿಸಿದರು.

ICC Men's ODI Cricketer Of 2022: ಸತತ 2ನೇ ಬಾರಿ ಐಸಿಸಿ ಪ್ರಶಸ್ತಿ ಗೆದ್ದ ಬಾಬರ್ ಅಜಂ

"ಸೂರ್ಯಕುಮಾರ್ ಯಾದವ್ ಅವರ ಆತ್ಮವಿಶ್ವಾಸವು ಸಾರ್ವಕಾಲಿಕ ಉತ್ತುಂಗದಲ್ಲಿದೆ ಮತ್ತು ಇದು ಯಾವುದೇ ಆಟಗಾರನಿಗಿಂತ ಅದ್ಭುತವಾದ ಸಾಧನೆಯಾಗಿದೆ. ಚುಟುಕು ಕ್ರಿಕೆಟ್‌ನಲ್ಲಿ ಅನೇಕ ಹಿಟ್ಟಿಂಗ್ ಬ್ಯಾಟರ್‌ಗಳನ್ನು ಹಿಂದಿಕ್ಕಿದ್ದಾನೆ," ಎಂದು ಆಶಿಶ್ ನೆಹ್ರಾ ಹೇಳಿದರು.

Story first published: Thursday, January 26, 2023, 17:30 [IST]
Other articles published on Jan 26, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X