ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತಿಯಾದ ನಾಯಕತ್ವ ಬದಲಾವಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ

Former cricketer Deep Dasgupta concerned about unstable captain in Team India

ಭಾರತ ಕ್ರಿಕೆಟ್ ತಂಡ ಇತ್ತೀಚೆಗೆ ಬಿಡುವಿಲ್ಲದ ಸರಣಿಯಲ್ಲಿ ಭಾಗಿಯಾಗುತ್ತಿದೆ. ಟಿ20 ವಿಶ್ವಕಪ್ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಕಾರಣ ಪ್ರತಿ ಸರಣಿಯೂ ಭಾರತಕ್ಕೆ ಬಹಳಷ್ಟು ಪ್ರಮುಖವಾಗಿದೆ. ಈ ಸಂದರ್ಭದಲ್ಲಿ ಮುಂದಿನ ವಿಶ್ವಕಪ್‌ಗೆ ಆಯ್ಕೆ ಮಾಡಬಹುದಾದ ಆಟಗಾರರು ಯಾರು ಎಂಬ ಬಗ್ಗೆ ಸಾಕಷ್ಟು ಪ್ರಯೋಗಗಳು ನಡೆಯುತ್ತಿದೆ. ಆದರೆ ಕಳೆದ ಕೆಲ ತಿಂಗಳಲ್ಲಿ ಭಾರತ ತಂಡದ ನಾಯಕತ್ವದಲ್ಲಿ ಪದೇ ಪದೇ ಬದಲಾವಣೆಯಾಗುತ್ತಿದ್ದು ಈ ಬಗ್ಗೆ ಮಾಜಿ ಕ್ರಿಕೆಟಿಗ ದೀಪ್ ದಾಸ್‌ಗುಪ್ತ ಕಳವಳ ವ್ಯಕ್ತಪಡಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು ಏಕದಿನ ಸರಣಿಯಲ್ಲಿ ಶಿಖರ್ ಧವನ್‌ಗೆ ಭಾರತ ತಂಡದ ಹೊಣೆಗಾರಿಗೆ ನೀಡಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾರಂತಾ ಆಟಗಾರರಿಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು ಧವನ್ ಹೆಗಲಿಗೆ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಬಿದ್ದಿದೆ. ಈ ಮೂಲಕ ಕಳೆದ 7 ತಿಂಗಳಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ 7ನೇ ನಾಯಕನಾಗಿದ್ದಾರೆ.

ಟೆಸ್ಟ್ ಕ್ರಿಕೆಟ್‍ನಲ್ಲಿ ದಾಖಲಾಗಿರುವ ದೊಡ್ಡ ರನ್ ಚೇಸ್‌ಗಳ ಪಟ್ಟಿ; ದೊಡ್ಡ ಚೇಸ್ ಮಾಡಿದ ತಂಡ ಯಾವುದು?ಟೆಸ್ಟ್ ಕ್ರಿಕೆಟ್‍ನಲ್ಲಿ ದಾಖಲಾಗಿರುವ ದೊಡ್ಡ ರನ್ ಚೇಸ್‌ಗಳ ಪಟ್ಟಿ; ದೊಡ್ಡ ಚೇಸ್ ಮಾಡಿದ ತಂಡ ಯಾವುದು?

ಪದೇ ಪದೇ ಬದಲಾಗುತ್ತಿದ್ದಾರೆ ಭಾರತ ತಂಡದ ನಾಯಕರು

ಪದೇ ಪದೇ ಬದಲಾಗುತ್ತಿದ್ದಾರೆ ಭಾರತ ತಂಡದ ನಾಯಕರು

ವಿರಾಟ್ ಕೊಹ್ಲಿ ನಾಯಕತ್ವವನ್ನು ತೊರೆದ ಬಳಿಕ ಎಲ್ಲಾ ಮಾದರಿಗೂ ರೊಹಿತ್ ಶರ್ಮಾ ಅವರನ್ನು ಪೂರ್ಣಪ್ರಮಾಣದ ನಾಯಕನನ್ನಾಗಿ ಘೋಷಣೆ ಮಾಡಲಾಗಿದೆ. ಆದರೆ ಗಾಯದ ಸಮಸ್ಯೆ, ಕೋವಿಡ್ ಹೀಗೆ ಬೇರೆ ಬೇರೆ ಕಾರಣಗಳಿಂದಾಗಿ ಹಲವು ಆಟಗಾರರು ನಾಯಕತ್ವದ ಹೊಣೆಗಾರಿಗೆ ವಹಿಸಿಕೊಂಡಿದ್ದಾರೆ. ಪೂರ್ಣಕಾಲಿಕ ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬೂಮ್ರಾ ಬಳಿಕ ಇದೀಗ ಶಿಖರ ಧವನ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ನಾಯಕತ್ವದಲ್ಲಿ ಸ್ಥಿರತೆ ಬೇಕಿದೆ ಎಂದ ದೀಪ್ ದಾಸ್‌ಗುಪ್ತ

ನಾಯಕತ್ವದಲ್ಲಿ ಸ್ಥಿರತೆ ಬೇಕಿದೆ ಎಂದ ದೀಪ್ ದಾಸ್‌ಗುಪ್ತ

ಗಾಯ ಹಾಗೂ ಕೊರೊನಾವೈರಸ್ ಕಾರಣದಿಂದಾಗಿ ಭಾರತ ತಂಡದ ನಾಯಕತ್ವದಲ್ಲಿ ಈ ಬದಲಾವಣೆಗೆ ಕಾರಣವಾಯಿತು. ಆದರೆ ರಾಷ್ಟ್ರೀಯ ತಮಡದ ನಾಯಕತ್ವದಲ್ಲಿ ಇಷ್ಟು ಬದಲಾವಣೆಯಾದರೆ ತಂಡದಲ್ಲಿ ಅಸ್ಥಿರತೆಯುಂಟಾಗುತ್ತದೆ ಎಂದಿದ್ದಾರೆ ದೀಪ್ ದಾಸ್‌ಗುಪ್ತ. "ತಂಡಕ್ಕೆ ಸ್ಥಿರ ನಾಯಕ ಇರುವುದು ಬಹಳ ಮುಖ್ಯವಾಗುತ್ತದೆ. ಕಳೆದ ಕೆಲ ತಿಂಗಳಿನಿಂದ ಭಾರತ ತಂಡದ ನಾಯಕತ್ವ ಬಹಳಷ್ಟು ಅಸ್ಥಿರವಾಗಿದೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ದೀಪ್ ದಾಸ್‌ಗುಪ್ತ.

ಟಿ20 ವಿಶ್ವಕಪ್ ಬಗ್ಗೆ ದಾಸ್‌ಗುಪ್ತ ಮಾತು

ಟಿ20 ವಿಶ್ವಕಪ್ ಬಗ್ಗೆ ದಾಸ್‌ಗುಪ್ತ ಮಾತು

ಇನ್ನು ಈ ಸಂದರ್ಭದಲ್ಲಿ ಟಿ20 ವಿಶ್ವಕಪ್‌ಗೆ ಭಾರತ ತಂಡದ ಆಯ್ಕೆ ವಿಚಾರವಾಗಿಯೂ ದೀಪ್‌ದಾಸ್ ಗುಪ್ತ ಮಾತನಾಡಿದ್ದಾರೆ. ಟಿ20 ವಿಶ್ವಕಪ್‌ಗೆ ಇನ್ನು ಕೇವಲ ಎರಡ್ಮೂರು ತಿಂಗಳು ಮಾತ್ರವೇ ಬಾಕಿಯಿದೆ. ಈ ಸಂದರ್ಭದಲ್ಲಿ ಹಲವಾರು ಆಟಗಾರರು ತಮ್ಮ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ವಿಶ್ವಕಪ್‌ಗೆ ಮು್ನನ ಭಾರತ ಇನ್ನು ಕೇವಲ 20-22 ಪಂದ್ಯಗಳನ್ನು ಮಾತ್ರವೇ ಆಡಲಿದೆ. ಹಾಗಾಗಿ ಭಾರತ ತಂಡದ ಆಯ್ಕೆ ಸಮಿತಿ ಈಗಾಗಲೇ ವಿಶ್ವಕಪ್‌ಗೆ ಆಯ್ಕೆ ಮಾಡಬಹುದಾದ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸುತ್ತಿರಬಹುದು" ಎಂದಿದ್ದಾರೆ ದೀಪ್ ದಾಸ್‌ಗುಪ್ತ.

ಮುಂದಿನ ಪ್ರತಿ ಪಂದ್ಯಗಳು ಕೂಡ ಮುಖ್ಯ

ಮುಂದಿನ ಪ್ರತಿ ಪಂದ್ಯಗಳು ಕೂಡ ಮುಖ್ಯ

ಇನ್ನು ವಿಶ್ವಕಪ್‌ನ ದೃಷ್ಟಿಯಿಂದ ಭಾರತ ತಂಡಕ್ಕೆ ಮುಂದಿನ ಪ್ರತಿ ಪಂದ್ಯ ಕೂಡ ಬಹಳ ಮುಖ್ಯವಾಗಿದೆ ಎಂದಿದ್ದಾರೆ ದೀಪ್‌ದಾಸ್ ಗುಪ್ತ.ಸದ್ಯ ಭಾರತ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಸಿದ್ಧವಾಗುತ್ತಿದ್ದು ಮೂರು ಪಂದ್ಯಗಳ ಟಿ20 ಸರಣಿಯ ಬಳಿಕ ಭಾರತ ಮೂರು ಏಕದಿನ ಪಂದ್ಯದಲ್ಲಿ ಆಡಲಿದೆ. ಅದಾದ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು ವೈಟ್‌ಬಾಸ್ ಸರಣಿಯನ್ನು ಮುಖಾಮುಖಿಯಾಗಲಿದೆ.

Story first published: Thursday, July 7, 2022, 8:27 [IST]
Other articles published on Jul 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X