ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನೋಡ್ಕೊಂಡು ಮಾತಾಡ್ರೋ...ಕರ್ನಾಟಕದ ಹುಡ್ಗರಿಗೆ ಗಣೇಶ್ ಕಿವಿಮಾತು!

ದುಬೈ, ಸೆ. 21: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020ರ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಪಂಜಾಬ್ ಗೆಲ್ಲಬೇಕಿತ್ತು, ಮಯಾಂಕ್ ಆಟ, ಅಂಪೈರ್ ಪ್ರಮಾದ ಅಡ್ಡಿಯಾಯಿತು ಎಂದು ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ನಡುವೆ ಪಂಜಾಬ್ ತಂಡದ ಹೊಸ ನಾಯಕರಾಗಿ ಕನ್ನಡಿಗ ಲೋಕೇಶ್ ರಾಹುಲ್ ಕಣಕ್ಕಿಳಿದಿದ್ದು ವಿಶೇಷ. ಜೊತೆಗೆ ಇದೇ ಪಂದ್ಯದ ಮೂಲಕ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಮೊದಲ ಬಾರಿಗೆ ಐಪಿಎಲ್ ತಂಡ ಕೋಚ್ ಆಗಿ ತಮ್ಮ ಇನ್ನಿಂಗ್ ಆರಂಭಿಸಿದರು. ಜೊತೆಗೆ ಈ ಪಂದ್ಯಕ್ಕೆ ರೆಫ್ರಿ ಆಗಿದ್ದವರು ಜಾವಗಲ್ ಎಕ್ಸ್ ಪ್ರೆಸ್.

ಡೆಲ್ಲಿ ಹಿಂದಿಕ್ಕಿ ದಾಖಲೆ ಬರೆದ ಕಿಂಗ್ಸ್ ಎಲೆವನ್ ''ಕ್ಯಾಪ್ಟನ್''ಡೆಲ್ಲಿ ಹಿಂದಿಕ್ಕಿ ದಾಖಲೆ ಬರೆದ ಕಿಂಗ್ಸ್ ಎಲೆವನ್ ''ಕ್ಯಾಪ್ಟನ್''

ಪಂಜಾಬ್ ತಂಡದ ತುಂಬಾ ಬರೀ ಕರ್ನಾಟಕದ ಆಟಗಾರರೇ ತುಂಬಿದ್ದಾರೆ. ಕಿಂಗ್ಸ್ ಎಲೆವನ್ ಪಂಜಾಬ್ ಬದಲು ಕರ್ನಾಟಕ್ ಎಲೆವನ್ ಪಂಜಾಬ್ ಎಂದು ಕರೆದುಬಿಡೋಣ ಎಂದು ಫ್ಯಾನ್ಸ್ ಹೇಳಿಕೊಂಡು ಖುಷಿ ಪಡುತ್ತಿದ್ದಾರೆ. ಈ ನಡುವೆ ಕರ್ನಾಟಕದ ಹುಡುಗರ ಬೆನ್ನು ತಟ್ಟುತ್ತಾ ಮಾಜಿ ಕ್ರಿಕೆಟರ್ ದೊಡ್ಡ ಗಣೇಶ್ ಅವರು ಕಿವಿಮಾತನ್ನು ಹೇಳಿದ್ದಾರೆ.

 ಕರ್ನಾಟಕದ ಆಟಗಾರರೇ ಅಧಿಕ

ಕರ್ನಾಟಕದ ಆಟಗಾರರೇ ಅಧಿಕ

ಕೆಎಲ್ ರಾಹುಲ್, ಕರುಣ್ ನಾಯರ್, ಮಯಾಂಕ್ ಅಗರವಾಲ್, ಕೃಷ್ಣಪ್ಪ ಗೌತಮ್ ತಂಡದಲ್ಲಿದ್ದು, ಎಲ್ಲರೂ ಕನ್ನಡದಲ್ಲೇ ಮಾತನಾಡುತ್ತಾರೆ. ಫೀಲ್ಡ್ ಸೆಟ್ ಮಾಡುವಾಗ ಬಹುಶಃ ಗೌತಮ್ ಹಾಗೂ ಮತ್ತೊಬ್ಬ ಆಟಗಾರರನ್ನು ಕುರಿತು ಮುಂದೆ ಬರೋ l*wd@" ಎಂದು ರಾಹುಲ್ ಕರೆದಿದ್ದಾರೆ. ಸ್ಟಂಪ್ ಮೈಕ್ ನಿಂದ ಬಹಳ ದೂರ ಇದ್ದರೂ, ಮೈದಾನದಲ್ಲಿ ಪ್ರೇಕ್ಷಕರ ಗದ್ದಲವಿಲ್ಲದ ಕಾರಣ, ರಾಹುಲ್ ದನಿ ಸ್ಪಷ್ಟವಾಗಿ ರೆಕಾರ್ಡ್ ಆಗಿದೆ.

ಕೆಎಲ್ ರಾಹುಲ್ ಸ್ಟಂಪ್ ಮೈಕ್ ಘಟನೆ

ನಾಯಕ ಕೆಎಲ್ ರಾಹುಲ್ ಅವರು ಪಂದ್ಯದ ನಡುವೆ ಕರ್ನಾಟಕದ ಇತರೆ ಆಟಗಾರರ ಜೊತೆಗೆ ಕನ್ನಡದಲ್ಲೇ ಮಾತನಾಡುತ್ತಾರೆ. ಅದರಂತೆ ಫೀಲ್ಡ್ ಸೆಟ್ ಮಾಡುವಾಗ ಮಾತನಾಡಿದ್ದು ಈಗ ಸಕತ್ ವೈರಲ್ ಆಗಿದೆ. ಈ ವಿಡಿಯೋ ಕ್ಲಿಪ್ ನೋಡಿದ ದೊಡ್ಡ ಗಣೇಶ್ ಅವರು ಟ್ವೀಟ್ ಮಾಡಿ, Stump mic ಹತ್ರ ಇರುವಾಗ ಸ್ವಲ್ಪ ನೋಡ್ಕೊಂಡು ಮಾತಾಡ್ರೋ ಹುಡುಗ್ರಾ 😁 ಎಂದಿದ್ದಾರೆ

ಐಪಿಎಲ್ 2020: ಬುಕ್ಕಿಗಳ ಪ್ರಕಾರ ಕಪ್ ಗೆಲ್ಲೋ ಫೇವರಿಟ್ ತಂಡ?

ಗಣೇಶ್ ಕಿವಿಮಾತಿಗೆ ಪ್ರತಿಕ್ರಿಯೆ

ಇರಲಿ ಬಿಡಿ ಸರ್ ಅದೆಲ್ಲಾ ಸಹಜ ನಾವು ಕೂಡ ಗೆಳೆಯರ ಜೊತೆ ಇದ್ದಾಗ ಈ ರೀತಿಯಲ್ಲಿ ಮಾತನಾಡುತ್ತೇವೆ.ಮೈ ರೋಮಾಂಚನ ಆಗುತ್ತೆ ಅವರು ಕನ್ನಡ ಮಾತನಾಡಿದಾಗ ನಮಗೆ ಎದು ಮಂಜು ಮಧುಗಿರಿ ಟ್ವೀಟ್ ಮಾಡಿದ್ದಾರೆ.

ಆರ್ ಸಿಬಿ ಸಾಂಗ್ ಜೊತೆ ಹೋಲಿಕೆ

ಇತ್ತೀಚೆಗೆ ಬಿಡುಗಡೆಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಥೀಮ್ ಸಾಂಗ್ ಗಿಂತ ರಾಹುಲ್ ಮಾತನಾಡಿದ್ದರಲ್ಲಿ ಹೆಚ್ಚಿನ ಕನ್ನಡ ಪದಗಳಿವೆ ಎಂದು ಆರ್ ಸಿಬಿಗೆ ಟಾಂಗ್ ನೀಡಲಾಗಿದೆ.

ಹೇಳೋದು ಹೇಳಿ ಬಾಯ್ಮಿಚ್ಚಿಕೊಂಡ ರಾಹುಲ್

ಸಾಮಾನ್ಯವಾಗಿ ಆಡು ಭಾಷೆಯಲ್ಲಿ ಹುಡುಗರು ಬಳಸುವ ಪದವನ್ನು ಬಳಸಿದ್ದ ರಾಹುಲ್, ನಂತರ ತಾನು ಮೈದಾನದಲ್ಲಿ ಸ್ಟಂಪ್ ಮೈಕ್ ಬಳಿ ಇದ್ದೀನಿ ಎಂಬ ಮನವರಿಕೆ ಆಗಿದ್ದರಿಂದಲೋ ಏನೋ ಆ ಡೈಲಾಗ್ ಹೇಳಿ ನಂತರ ಬಾಯಿಗೆ ಕೈ ಅಡ್ಡ ಇಟ್ಟುಕೊಂಡಿದ್ದಾರೆ. ರಾಹುಲ್ ನಡೆ ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Story first published: Monday, September 21, 2020, 16:21 [IST]
Other articles published on Sep 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X