ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಹೀತ್‌ ಸ್ಟ್ರೀಕ್‌ಗೆ 8 ವರ್ಷಗಳ ನಿಷೇಧ

Former Cricketer Heath Streak banned for eight years from cricket

ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ದಿಗ್ಗಜ ಆಟಗಾರ ಹೀತ್ ಸ್ಟ್ರೀಕ್ ಐಸಿಸಿಯ ಭಷ್ಟಾಚಾರ ವಿರೋಧಿ ಕಾನೂನನ್ನು ಹಲವು ಸಂದರ್ಭಗಳಲ್ಲಿ ಉಲ್ಲಂಘಿಸಿದ ಕಾರಣಕ್ಕೆ 8 ವರ್ಷಗಳ ಕಾಲ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಐಪಿಎಲ್‌ನಲ್ಲಿ ಹೀತ್ ಸ್ಟ್ರೀಕ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

47ರ ಹರೆಯದ ಹೀತ್ ಸ್ಟ್ರೀಕ್ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಐಪಿಎಲ್ ಸೇರಿದಂತೆ ಹಲವು ಕ್ರಿಕೆಟ್ ಟೂರ್ನಿಗಳಲ್ಲಿ ಅವರು ಕೋಚ್ ಆಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಹೀತ್ ಸ್ಟ್ರೀಕ್ ಐಸಿಸಿ ಭಷ್ಟಾಚಾರ ಉಲ್ಲಂಘಿಸಿದ ಪ್ರಕರಣಗಳು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆದಿದ್ದು ಇದರಲ್ಲಿ ಹೀತ್ ಸ್ಟ್ರೀಕ್ ತಪ್ಪಿತಸ್ಥ ಎಂದು ಸಾಬೀತಾಗಿದೆ.

ಮೋರಿಸ್‌ಗೆ ಸಿಂಗಲ್‌ ನಿರಾಕರಿಸಿದ ಸಂಜು ಸ್ಯಾಮ್ಸನ್: ನೆಟ್ಟಿಗರ ತಮಾಷೆಮೋರಿಸ್‌ಗೆ ಸಿಂಗಲ್‌ ನಿರಾಕರಿಸಿದ ಸಂಜು ಸ್ಯಾಮ್ಸನ್: ನೆಟ್ಟಿಗರ ತಮಾಷೆ

ಐದು ಪ್ರಕರಣಗಳಲ್ಲಿ ಹೀತ್ ಸ್ಟ್ರೀಕ್ ಐಸಿಸಿ ಭ್ರಷ್ಟಾಚಾರ ಕಾನೂನನ್ನು ಉಲ್ಲಂಘಿಸಿರುವುದನ್ನು ಹೀತ್ ಸ್ಟ್ರೀಕ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಜಿಂಬಾಬ್ವೆಯ ಮಾಜಿ ನಾಯಕನಿಗೆ ಎಲ್ಲಾ ರೀತಿಯ ಸ್ಪರ್ಧಾತ್ಮಕ ಕ್ರಿಕೆಟ್‌ನ ಯಾವುದೇ ರೀತಿಯ ಜವಾಬ್ಧಾರಿಗೂ ಮುಂದಿನ 8 ವರ್ಷಗಳ ಕಾಲ ನಿಷೇಧವನ್ನು ಐಸಿಸಿ ಹೇರಿದೆ.

ಜಿಂಬಾಬ್ವೆ ಕ್ರಿಕೆಟ್ ತಂಡದ ಶ್ರೇಷ್ಠ ಬೌಲರ್ ಎನಿಸಿರುವ ಹೀತ್ ಸ್ಟ್ರೀಕ್ ಆಟಗಾರನಾಗಿ ನಿವೃತ್ತಿ ಪಡೆದ ನಂತರ ಜಿಂಬಾಬ್ವೆ ಕ್ರಿಕೆಟ್ ತಂಡ, ಐಪಿಎಲ್‌ನಲ್ಲಿ ಕೊಲ್ಕತ್ತಾ ತಂಡದ ಪರವಾಗಿ ಸಹಿತ ಹಲವಾರು ಕ್ರಿಕೆಟ್ ಲೀಗ್‌ಗಳಲ್ಲಿ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ಬುಕ್ಕಿಗಳಿಗೆ ತಂಡದೊಳಗೆ ಸಹಕಾರಿಯಾಗುವ ರೀತಿಯಲ್ಲಿ ಬೆಂಬಲಿಸಿದ್ದರು ಎಂಬ ಆರೋಪವನ್ನು ಹೊರಿಸಲಾಗಿತ್ತು.

Story first published: Wednesday, April 14, 2021, 16:34 [IST]
Other articles published on Apr 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X