ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಮುಖ್ಯ ಆಯ್ಕೆದಾರ ಸ್ಥಾನದಿಂದ ಕೆಳಗಿಳಿಯಲು ಮಿಸ್ಬಾ ನಿರ್ಧಾರ

Former cricketer Misbah-ul-Haq to step down as Pakistans chief selector

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಮುಖ್ಯ ಆಯ್ಕೆದಾರ ಜವಾಬ್ದಾರಿಯಿಂದ ತಾನು ಕೆಳಗಿಳಿಯಲಿರುವುದಾಗಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಮಿಸ್ಬಾ ಉಲ್ ಹಕ್ ತಿಳಿಸಿದ್ದಾರೆ. ಆದರೆ ತಂಡದ ಮುಖ್ಯ ಕೋಚ್‌ ಆಗಿ ಮಿಸ್ಬಾ ಮುಂದುವರೆಯಲಿದ್ದಾರೆ. 2019ರಿಂದಲೂ ಹಕ್ ಅವರು ಪಾಕ್‌ ಮುಖ್ಯ ಕೋಚ್ ಮತ್ತು ಮುಖ್ಯ ಆಯ್ಕೆದಾರ ಜವಾಬ್ದಾರಿ ನಿರ್ವಹಿಸಿದ್ದರು.

ದ್ವಿತೀಯಾರ್ಧದಲ್ಲಿ ತಾಹಿರ್ ಆಟವನ್ನು ಕಣ್ತುಂಬಿಕೊಳ್ಳಲಿದ್ದೀರಿ: ಸಿಎಸ್‌ಕೆ ಸಿಇಒ ಹೇಳಿಕೆದ್ವಿತೀಯಾರ್ಧದಲ್ಲಿ ತಾಹಿರ್ ಆಟವನ್ನು ಕಣ್ತುಂಬಿಕೊಳ್ಳಲಿದ್ದೀರಿ: ಸಿಎಸ್‌ಕೆ ಸಿಇಒ ಹೇಳಿಕೆ

ಚೀಫ್ ಸೆಲೆಕ್ಟರ್ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿರುವ ಮಿಸ್ಬಾ ತಾನು ಮುಂದಿನ ಎರಡು ವರ್ಷಗಳ ಕೆಲಸದ ಹೊರೆ ಗಮನದಲ್ಲಿಟ್ಟುಕೊಂಡು ಮತ್ತು ಸಂಪೂರ್ಣ ಗಮನವನ್ನು ಮುಖ್ಯ ಕೋಚ್‌ ಜವಾಬ್ದಾರಿಯತ್ತ ಹರಿಸಲು ಯೋಚಿಸಿರುವುದರಿಂದ ಈ ನಿರ್ಧಾರ ತಾಳಿರುವುದಾಗಿ ತಿಳಿಸಿದ್ದಾರೆ.

ಪಾಕ್ ಕ್ರಿಕೆಟ್ ತಂಡಕ್ಕೆ ಮುಖ್ಯ ಆಯ್ಕೆಯಾಗಿ ಬೇರೆಯವರು ಜವಾಬ್ದಾರಿ ಹೊರುವವರೆಗೆ ಅಂದರೆ ಡಿಸೆಂಬರ್ 1ರ ತನಕ ಮಿಸ್ಬಾ ಅವರೇ ಮುಖ್ಯ ಆಯ್ದೆದಾರನಾಗಿ ಇರಲಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡ ಅಕ್ಟೋಬರ್ 30ರಿಂದ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದು ತಂಡ ಆಯ್ಕೆಯ ಹೊಣೆಗಾರಿಕೆ ಸದ್ಯ ಮಿಸ್ಬಾ ಮೇಲಿದೆ.

ಕೊಹ್ಲಿ ಕ್ರಿಕೆಟ್ ಕಿಟ್‌ನಲ್ಲಿ ಏನೇನಿದೆ? ಕುತೂಹಲ ತಣಿಸಿದ್ದಾರೆ ಸ್ವತಃ ಆರ್‌ಸಿಬಿ ನಾಯಕ: ವಿಡಿಯೋಕೊಹ್ಲಿ ಕ್ರಿಕೆಟ್ ಕಿಟ್‌ನಲ್ಲಿ ಏನೇನಿದೆ? ಕುತೂಹಲ ತಣಿಸಿದ್ದಾರೆ ಸ್ವತಃ ಆರ್‌ಸಿಬಿ ನಾಯಕ: ವಿಡಿಯೋ

ಜಿಂಬಾಬ್ವೆ ಬಳಿಕ ಪಾಕ್ ತಂಡ ನ್ಯೂಜಿಲೆಂಡ್‌ಗೆ ಪ್ರವಾಸ ಹೋಗಲಿದ್ದು, ಅಲ್ಲಿ ಮೂರು ಟಿ20ಐ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನಾಡಲಿದೆ. ಈ ಸರಣಿಗಳು ಡಿಸೆಂಬರ್-ಜನವರಿಯಲ್ಲಿ ನಡೆಯಲಿದೆ. ಈ ಸರಣಿಗೂ ಸಂಬಂಧಿಸಿ ತಂಡಗಳನ್ನು ಮಿಸ್ಬಾ ಅವರೇ ಆರಿಸಲಿದ್ದಾರೆ. ಹೊಸದಾಗಿ ಆಯ್ಕೆಯಾಗೋ ಸೆಲೆಕ್ಟರ್ ಜನವರಿಯಲ್ಲಿ ಪಾಕ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ತಂಡಗಳನ್ನು ಆರಿಸಲಿದ್ದಾರೆ.

Story first published: Wednesday, October 14, 2020, 17:38 [IST]
Other articles published on Oct 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X