ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಾರ್ದಿಕ್ ಪಾಂಡ್ಯ ಭವಿಷ್ಯದ ಬಗ್ಗೆ 'ಅಚ್ಚರಿಯಾಗದ' ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ

Former cricketer Scott Styris said he wont be surprised if Hardik Pandya lead Idian t20 side

ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್ ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ, ಹಾರ್ದಿಕ್ ಪಾಂಡ್ಯ ಟಿ20 ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದರೆ ಅಚ್ಚರಿಯಾಗಲಾರದು ಎಂದಿದ್ದಾರೆ. ಹಾರ್ದಿಕ್ ಪಾಂಡ್ಯ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿರುವ ಸ್ಟೈರಿಸ್ ಅವರ ಶೈಲಿ ಸ್ವಾಭಾವಿಕವಾಗಿ ಚುಟುಕು ಮಾದರಿಗೆ ಹೊಂದಿಕೊಳ್ಳುತ್ತದೆ ಎಂದಿದ್ದಾರೆ.

ಐರ್ಲೆಂಡ್ ವಿರುದ್ಧ ಐರ್ಲೆಂಡ್‌ನಲ್ಲಿ ನಡೆದ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದಾರೆ. ಈ ಮೂಲಕ ಲೀಡರ್‌ಶಿಪ್ ಗ್ರೂಪ್‌ಗೆ ಸೇರಿಕೊಂಡಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿಯೂ ಹಾರ್ದಿಕ್ ಪಾಂಡ್ಯ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ರೋಹಿತ್ ಶರ್ನಾ ವಿಶ್ರಾಂತಿ ಪಡೆದಿದ್ದ ಕಾರಣ ಹಾರ್ದಿಕ್‌ಗೆ ಈ ಜವಾಬ್ಧಾರಿ ದೊರೆತಿತ್ತು.

ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸತತ ಸೋಲಿಗೆ ಕಾರಣ ಏನು? ಪಾಕ್ ಕ್ರಿಕೆಟಿಗನ ಉತ್ತರವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸತತ ಸೋಲಿಗೆ ಕಾರಣ ಏನು? ಪಾಕ್ ಕ್ರಿಕೆಟಿಗನ ಉತ್ತರ

ಐಪಿಎಲ್‌ನಲ್ಲಿ ನಾಯಕನಾಗಿ ಮಿಂಚಿದ ಹಾರ್ದಿಕ್

ಐಪಿಎಲ್‌ನಲ್ಲಿ ನಾಯಕನಾಗಿ ಮಿಂಚಿದ ಹಾರ್ದಿಕ್

ಈ ಬಾರಿಯ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗ್ಇ ತಮ್ಮ ಸಾಮರ್ಥ್ಯವನ್ನು ಅದ್ಭುತವಾಗಿ ಪ್ರದರ್ಶಿಸಿದ್ದಾರೆ. ಇದೇ ಮೊದಲ ಬಾರಿಗೆ ಐಪಿಎಲ್‌ನಂತಾ ಪ್ರಮುಖ ವೇದಿಕೆಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಹಾರ್ದಿಕ್ ಪಾಂಡ್ಯ ಹೆಗಲಿಗೇರಿತ್ತು. ಈ ಸವಾಲನ್ನು ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ನಿಭಾಯಿಸಿದ ಹಾರ್ದಿಕ್ ಪಾಂಡ್ಯ ಚೊಚ್ಚಲ ಪ್ರಯತ್ನದಲ್ಲಿಯೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಮಾತ್ರವಲ್ಲದೆ ಆಟಗಾರನಾಗಿಯೂ ಅದ್ಭುತ ಯಶಸ್ಸು ಸಾಧಿಸುವ ಮೂಲಕ ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕತ್ವದ ಸ್ಪರ್ಧೆಯಲ್ಲಿ ಕಾಣಿಸಿಕೊಂಡರು.

ಹಾರ್ದಿಕ್ ಪಾಂಡ್ಯ ಬಗ್ಗೆ ಸ್ಟೈರಿಸ್ ಮಾತು

ಹಾರ್ದಿಕ್ ಪಾಂಡ್ಯ ಬಗ್ಗೆ ಸ್ಟೈರಿಸ್ ಮಾತು

"ಈ ಬಾರಿ ಅಲ್ಲದಿದ್ದರೂ ಭವಿಷ್ಯದಲ್ಲಿ ಹಾರ್ದಿಕ್ ಪಾಂಡ್ಯ ಟಿ20 ಮಾದರಿಯಲ್ಲಿ ಭಾರತವನ್ನು ಮುನ್ನಡೆಸಿದರೆ ನನಗೆ ಅಚ್ಚರಿಯಾಗಲಾರದು. ಇದು ಈಗ ಕುತೂಹಲಕಾರಿಯಾದ ಚರ್ಚೆಯಾಗಿದೆ. ಯಾಕೆಂದರೆ ಆರು ತಿಂಗಳ ಹಿಂದೆ ನಾವ್ಯಾರು ಕೂಡ ಹಾರ್ದಿಕ್ ಪಾಂಡ್ಯ ಬಗ್ಗೆ ಚರ್ಚೆ ನಡೆಸಿರಲಿಲ್ಲ. ಆದರೆ ಹಾರ್ದಿಕ್ ಪಾಂಡ್ಯ ಆ ಸಾಧನೆ ಮಾಡಿದ್ದಾರೆ. ಫುಟ್ಬಾಲ್‌ನಲ್ಲಿ ನಾಯಕನಾಗಿ ಒಮ್ಮೆ ಜವಾಬ್ಧಾರಿ ನೀಡಿದರೆ ಬಳಿಕ ಆತನಲ್ಲಿ ಆ ಜವಾಬ್ಧಾರಿ ಇದ್ದೇ ಇರುತ್ತದೆ. ಇಲ್ಲಿ ಕೂಡ ಆತನಿಗೆ ಜವಾಬ್ಧಾರಿ ತೆಗೆದುಕೊಳ್ಳಲು ಅವಕಾಶ ನೀಡಬೇಕು" ಎಂದಿದ್ದಾರೆ ಸ್ಕಾಟ್ ಸ್ಟೈರಿಸ್.

Asia Cup 2022: ಭಾರತದಿಂದ ಮೊಹಮ್ಮದ್ ಶಮಿ ಕೈಬಿಟ್ಟಿದ್ದನ್ನು ಬೆಂಬಲಿಸಿ ಕಾರಣ ಕೊಟ್ಟ ಪಾಕ್ ಕ್ರಿಕೆಟಿಗ

ನಾಯಕತ್ವದ ಬಗ್ಗೆ ಒಲವು ವ್ಯಕ್ತಪಡಿಸಿದ್ದ ಹಾರ್ದಿಕ್

ನಾಯಕತ್ವದ ಬಗ್ಗೆ ಒಲವು ವ್ಯಕ್ತಪಡಿಸಿದ್ದ ಹಾರ್ದಿಕ್

ಇನ್ನು ಭಾರತ ತಂಡದ ನಾಯಕತ್ವವನ್ನು ವಹಿಸಿಕೊಳ್ಳುವ ಬಗ್ಗೆ ಹಾರ್ದಿಕ್ ಪಾಂಡ್ಯ ಬಳಿ ಪ್ರಶ್ನಿಸಿದಾಗ ನಾಯಕತ್ವವನ್ನು ವಹಿಸಿಕೊಳ್ಳುವ ಬಗ್ಗೆ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ನಾಯಕತ್ವವನ್ನು ವಹಿಸಿಕೊಂಡ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ ಬಳಿಕ ಈ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಹಾರ್ದಿಕ್, "ಖಂಡಿತಾ, ಯಾಕಿಲ್ಲ. ನನಗೆ ಆ ಅವಕಾಶ ದೊರೆತರೆ ಅತ್ಯಂತ ಖುಷಿಯಿಂದ ನಿರ್ವಹಿಸುತ್ತೇನೆ" ಎಂದಿದ್ದರು ಹಾರ್ದಿಕ್ ಪಾಂಡ್ಯ.

ಕಳೆದ ಬಾರಿ ಏಷ್ಯಾಕಪ್ ಆಡಿದ್ದ ಭಾರತ ಆಟಗಾರರ ಪೈಕಿ 9 ಆಟಗಾರರು ಈ ಬಾರಿ ತಂಡದಲ್ಲಿಲ್ಲ!

ಏಷ್ಯಾ ಕಪ್‌ಗೆ ರಾಹುಲ್ ಉಪನಾಯಕ

ಏಷ್ಯಾ ಕಪ್‌ಗೆ ರಾಹುಲ್ ಉಪನಾಯಕ

ಇನ್ನು ಮುಂಬರುವ ಏಷ್ಯಾಕಪ್‌ನಲ್ಲಿ ಹಾರ್ದಿಕ್ ಪಾಂಡ್ಯಾಗೆ ಉಪನಾಯಕನ ಜವಾಬ್ಧಾರಿ ದೊರೆಯುವ ಸಾಧ್ಯತೆಯಿದೆ ಎಂಬ ವರದಿಗಳು ಬಂದಿತ್ತು. ಆದರೆ ಅಂತಿಮವಾಗಿ ಬಿಸಿಸಿಐ ಕೆಎಲ್ ರಾಹುಲ್ ಅವರನ್ನೇ ಉಪ ನಾಯಕನನ್ನಾಗಿ ಮುಂದುವರಿಸಿದೆ. ಗಾಯದಿಮದಾಗಿ ಕೆಎಲ್ ರಾಹುಲ್ ಸುದೀರ್ಘ ಕಾಲದಿಂದ ಭಾರತ ತಂಡದಿಂದ ಹೊರಗುಳಿದಿದ್ದರು. ಇದೀಗ ಏಷ್ಯಾಕಪ್ ಮೂಲಕ ಅವರು ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.

Story first published: Thursday, August 11, 2022, 10:30 [IST]
Other articles published on Aug 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X