ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಜಹೀರ್, ನೆಹ್ರಾ ಮಾತ್ರ ಹಾಗೆ ಮಾಡುತ್ತಿದ್ದರು': ಟಿ20ಗೆ ಆಯ್ಕೆಯಾದ ಈ ಯುವ ವೇಗಿಯ ಬಗ್ಗೆ ಸೆಹ್ವಾಗ್ ಮೆಚ್ಚುಗೆ

Former Cricketer Virender Sehwag Admires This Young Pacer Who Was Selected For T20 India Squad

ಮುಂದಿನ ಜೂನ್ 9 ರಂದು ನವದೆಹಲಿಯಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಐದು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಭಾನುವಾರ ಪ್ರಕಟಿಸಲಾಗಿದೆ.

ಕೆಎಲ್ ರಾಹುಲ್ ನಾಯಕತ್ವದ ಒಟ್ಟು 18 ಸದಸ್ಯರ ತಂಡದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರಲ್ಲಿ ಉತ್ತಮ ಪ್ರದರ್ಶನ ನೀಡಿದ ಹಲವಾರು ಇನ್-ಫಾರ್ಮ್ ಆಟಗಾರರಿಗೆ ಬಿಸಿಸಿಐ ಆಯ್ಕೆಗಾರರು ರಾಷ್ಟ್ರೀಯ ತಂಡಕ್ಕೆ ಬುಲಾವ್ ನೀಡಿದ್ದಾರೆ.ದ.

ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಕೆಎಲ್ ರಾಹುಲ್ ನಾಯಕ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮರಳಿದ ಅನುಭವಿ ಆಟಗಾರಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಕೆಎಲ್ ರಾಹುಲ್ ನಾಯಕ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮರಳಿದ ಅನುಭವಿ ಆಟಗಾರ

ಟಿ20 ಸರಣಿಗೆ ಆಯ್ಕೆಯಾದ ಪ್ರಮುಖರಲ್ಲಿ ದಿನೇಶ್ ಕಾರ್ತಿಕ್, ಉಮ್ರಾನ್ ಮಲಿಕ್ ಮತ್ತು ಅರ್ಶದೀಪ್ ಸಿಂಗ್. ಅನುಭವಿ ದಿನೇಶ್ ಕಾರ್ತಿಕ್ ಕೆಳ ಕ್ರಮಾಂಕದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ತಮ್ಮ ಫಿನಿಶಿಂಗ್ ಕೌಶಲ್ಯದಿಂದ ಪ್ರಭಾವಿತರಾಗಿದ್ದರೆ, ವೇಗಿ ಜೋಡಿ ಉಮ್ರಾನ್ ಮಲಿಕ್ ಮತ್ತು ಅರ್ಶದೀಪ್ ಸಿಂಗ್ ಕ್ರಮವಾಗಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್‌ಗಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಉಮ್ರಾನ್ ಮಲಿಕ್ ಮಾರಕ ವೇಗದ ಬೌಲಿಂಗ್

ಉಮ್ರಾನ್ ಮಲಿಕ್ ಮಾರಕ ವೇಗದ ಬೌಲಿಂಗ್

ಉಮ್ರಾನ್ ಮಲಿಕ್ ತನ್ನ ಬಲಗೈ ಮೂಲಕ ವೇಗದ ಬೌಲಿಂಗ್ ಪ್ರದರ್ಶಿಸಿದರೆ, 23 ವರ್ಷದ ಎಡಗೈ ವೇಗಿ ಅರ್ಶದೀಪ್ ಸಿಂಗ್ ಡೆತ್ ಓವರ್‌ಗಳಲ್ಲಿ ಅದ್ಭುತ ನಿಯಂತ್ರಣವನ್ನು ತೋರಿಸಿದ್ದಾರೆ. ಅವರು 14 ಪಂದ್ಯಗಳಲ್ಲಿ ಕೇವಲ 10 ವಿಕೆಟ್‌ಗಳನ್ನು ಪಡೆದಿದ್ದು, ಅವರ ಎಕಾನಮಿಯು 7.70 RPO ಆಗಿತ್ತು. ಡೆತ್ ಓವರ್‌ನಲ್ಲಿ ಅರ್ಶದೀಪ್ ಸಿಂಗ್ ಹೆಚ್ಚಾಗಿ ಬೌಲಿಂಗ್ ಮಾಡಿದ ಕಾರಣ ಅಂಕಿಅಂಶಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತವೆ.

"ಅರ್ಶದೀಪ್ ಸಿಂಗ್ ಅವರು ಪಂಜಾಬ್ ಕಿಂಗ್ಸ್‌ಗಾಗಿ ಕೊನೆಯ ಮೂರು ಓವರ್‌ಗಳಲ್ಲಿ ಎರಡು ಓವರ್ ಬೌಲ್ ಮಾಡುವ ಕಾರಣ ನನ್ನನ್ನು ಮೆಚ್ಚಿಸಿದ್ದಾರೆ. ಅವರು ಹೆಚ್ಚು ವಿಕೆಟ್‌ಗಳನ್ನು ಹೊಂದಿಲ್ಲದಿರಬಹುದು, ಆದರೆ ಅವರ ಎಕಾನಮಿ ರೇಟ್ ಅದ್ಭುತವಾಗಿದೆ. ಹೊಸ ಬಾಲ್‌ನೊಂದಿಗೆ ಒಂದು ಓವರ್ ಮತ್ತು ಸ್ಲಾಗ್ ಓವರ್‌ಗಳಲ್ಲಿ ಎರಡು ಓವರ್ ಬೌಲಿಂಗ್ ಮಾಡುತ್ತಾರೆ," ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಸ್ಲಾಗ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವುದು ತುಂಬಾ ಕಷ್ಟ

ಸ್ಲಾಗ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವುದು ತುಂಬಾ ಕಷ್ಟ

ನನ್ನ ಕಾಲದಲ್ಲಿ ಜಹೀರ್ ಖಾನ್ ಮತ್ತು ಆಶಿಶ್ ನೆಹ್ರಾ ಮಾತ್ರ ಹಾಗೆ ಮಾಡುವುದನ್ನು ನಾನು ನೋಡಿದ್ದೇನೆ. ಈಗ ಅದರ ಮುಂದುವರೆದ ಭಾಗವಾಗಿ ಅರ್ಶ್‌ದೀಪ್, ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಕೂಡ ಇದ್ದಾರೆ. ಇವರು ಹೊಸ ಚೆಂಡಿನಲ್ಲಿ ಒಂದು ಅಥವಾ ಎರಡು ಓವರ್‌ಗಳನ್ನು ಬೌಲ್ ಮಾಡುವ ಬೌಲರ್‌ಗಳು ಮತ್ತು ನಂತರ ಹಳೆಯ ಚೆಂಡಿನಿಂದಲೂ ಡೆತ್‌ ಓವರ್‌ನಲ್ಲಿ ಬೌಲ್ ಮಾಡುತ್ತಾರೆ. ಸ್ಲಾಗ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವುದು ತುಂಬಾ ಕಷ್ಟದ ಕೆಲಸ. ಅರ್ಶ್‌ದೀಪ್ ಸಿಂಗ್ ಅದನ್ನು ಮಾಡಿದ್ದಾರೆ ಎಂದು ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಕ್ರಿಕ್‌ಬಜ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ಭಾರತದ ಟಿ20 ತಂಡ:

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ಭಾರತದ ಟಿ20 ತಂಡ:

ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ/ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್

Harshal Patel ನಾಳಿನ ಪಂದ್ಯವನ್ನು ಆಡ್ತಾರಾ? | OneIndia Kannada
ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ಗೆ ಭಾರತದ ತಂಡ

ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ಗೆ ಭಾರತದ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ್ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ

Story first published: Tuesday, May 24, 2022, 9:19 [IST]
Other articles published on May 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X