ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಂಡ್ಯದ ಕಾಮೇಗೌಡರನ್ನು ಹೊಗಳಿದ ವಿವಿಎಸ್ ಲಕ್ಷ್ಮಣ್

By Mahesh

ಬೆಂಗಳೂರು, ಜುಲೈ 30: ಟೀಂ ಇಂಡಿಯಾದ ಮಾಜಿ ಆಟಗಾರ, ಸ್ಟೈಲಿಶ್ ಬ್ಯಾಟ್ಸ್ ಮನ್ ವಿವಿಎಸ್​ ಲಕ್ಷ್ಮಣ್ ಅವರು​ ಮಂಡ್ಯದ ಗೌಡರೊಬ್ಬರನ್ನು ಹಾಡಿ ಹೊಗಳಿ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಕಾರ್ಯದಲ್ಲಿ ತೊಡಗಿದವರನ್ನು ಗುರುತಿಸಿ ಬೆನ್ನುತಟ್ಟುವ ಕೆಲಸವನ್ನು ಮಾಡಿಕೊಂಡು ಬಂದಿರುವ ಲಕ್ಷ್ಮಣ್ ಅವರು ಈ ಬಾರಿ ಕನ್ನಡಿಗ ಕೆರೆ ಕಾಮೇಗೌಡರ ಬಗ್ಗೆ ಬರೆದಿದ್ದಾರೆ.

ಮಳವಳ್ಳಿಯ ರೈತ, ಪರಿಸರ ಸಂರಕ್ಷಕ, ಬಸವಶ್ರೀ ಪುರಸ್ಕೃತ ಕಾಮೇಗೌಡರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

82 ವರ್ಷದ ಕಾಮೇಗೌಡ ಅವರು ಸುಮಾರು 14 ಕೆರೆಗಳನ್ನು ನಿರ್ಮಿಸಿ, ಬೇಸಿಗೆಯಲ್ಲೂ ಅದರಲ್ಲಿ ನೀರು ಉಳಿಯುವ ಹಾಗೇ ನೋಡಿಕೊಳ್ಳುತ್ತಿದ್ದಾರೆ. ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಕೆರೆಗಳ ನಿರ್ವಹಣೆ ಮಾಡುತ್ತಿದ್ದಾರೆ. ಪ್ರಶಸ್ತಿಗಳಿಂದ ಬಂದ ಮೊತ್ತವನ್ನು ಕೆರೆಗಳ ಅಭಿವೃದ್ಧಿಗೆ ಬಳಸುತ್ತಿರುವ ಅವರಿಗೆ ಪ್ರಣಾಮಗಳು ಎಂದು ಅಭಿನಂದನೆ ಸಲ್ಲಿಸಿದ್ದಾರೆ.

ಮಳವಳ್ಳಿ ತಾಲ್ಲೂಕಿನ ಕುಂದನಿ ಪರ್ವತದ ಮೇಲೆ ಕೆರೆ, ಕಟ್ಟೆ ಕಟ್ಟಿರುವ ಕಾಮೇಗೌಡ ಅವರು ಪ್ರಕೃತಿ ಸಂರಕ್ಷಕ ಎಂದೇ ಪ್ರಖ್ಯಾತರಾಗಿದ್ದಾರೆ. ಬಸವಣ್ಣನವರ ಕಾಯಕ ತತ್ವ ಪಾಲನೆಯಲ್ಲಿ ತೊಡಗಿರುವ ಕಾಮೇಗೌಡ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇನ್ನೂ ಹತ್ತು ಕೆರೆ ಕಟ್ಟುತ್ತೇನೆ

ಇನ್ನೂ ಹತ್ತು ಕೆರೆ ಕಟ್ಟುತ್ತೇನೆ

ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಪ್ರಕೃತಿ ಸಂರಕ್ಷಕ ಕಾಮೇಗೌಡ ಅವರು, 'ಮಹಾಭಾರತದಲ್ಲಿ ಧರ್ಮರಾಯ ಕೆರೆ-ಕಟ್ಟೆ ಕಟ್ಟಿಸು ಎಂದು ಕರೆ ಕೊಟ್ಟಿದ್ದಾರೆ. ಅದರಂತೆ ನಮ್ಮೂರಿನ ಬೆಟ್ಟದ ಮೇಲೆ ಏಳು ಕೆರೆ ಕಟ್ಟಿಸಿದ್ದೇನೆ. ಪ್ರಶಸ್ತಿ ಕೊಟ್ಟರೆ ಸಂತೋಷ, ಇನ್ನೂ ಹತ್ತು ಕೆರೆ ಕಟ್ಟುತ್ತೇನೆ' ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ಕೆರೆ ಕಟ್ಟಿರುವ ಕಾಮೇಗೌಡರಿಗೆ ಪ್ರಣಾಮಗಳು

82 ವರ್ಷದ ಕಾಮೇಗೌಡ ಅವರು ಸುಮಾರು 14 ಕೆರೆಗಳನ್ನು ನಿರ್ಮಿಸಿ, ಬೇಸಿಗೆಯಲ್ಲೂ ಅದರಲ್ಲಿ ನೀರು ಉಳಿಯುವ ಹಾಗೇ ನೋಡಿಕೊಳ್ಳುತ್ತಿದ್ದಾರೆ. ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಕೆರೆಗಳ ನಿರ್ವಹಣೆ ಮಾಡುತ್ತಿದ್ದಾರೆ. ಪ್ರಶಸ್ತಿಗಳಿಂದ ಬಂದ ಮೊತ್ತವನ್ನು ಕೆರೆಗಳ ಅಭಿವೃದ್ಧಿಗೆ ಬಳಸುತ್ತಿರುವ ಅವರಿಗೆ ಪ್ರಣಾಮಗಳು ಎಂದು ಟ್ವೀಟ್ ಮಾಡಿದ್ದಾರೆ

ಸ್ಫೂರ್ತಿ ತುಂಬವ ವಿಷಯ ಇದು

ಸ್ಫೂರ್ತಿ ತುಂಬವ ವಿಷಯ ಇದು, ಇಂಥ ವಿಷಯ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು, ಇಂಥ ವ್ಯಕ್ತಿಗಳಿಂದಲೆ ಪರಿಸರ ಉಳಿದಿರುವುದು ಎಂದು ಲಕ್ಷ್ಮಣ್ ಅವರ ಟ್ವೀಟ್ ಗೆ ಪ್ರತಿಕ್ರಿಯೆ ಬಂದಿದೆ.

ತೆಲಂಗಾಣದ ರಾಜ್ಯದ ಅಭಿಯಾನಕ್ಕೆ ಸಾಥ್

ತೆಲಂಗಾಣದ ರಾಜ್ಯದ ಅಭಿಯಾನ ಹರಿತ ಹರಮ್ ಹಸಿರು ಅಭಿಯಾನಕ್ಕೆ ಲಕ್ಷ್ಮಣ್ ಅವರು ಸಾಥ್ ನೀಡಿ, ತಮ್ಮ ಮನೆಯಲ್ಲಿ ಗಿಡಗಳನ್ನು ನೆಡುತ್ತಿರುವ ಚಿತ್ರವನ್ನು ಈ ಹಿಂದೆ ಟ್ವೀಟ್ ಮಾಡಿದ್ದರು.

ಸಚಿನ್ ತೆಂಡೂಲ್ಕರ್ ರಿಂದಲೂ ಬೆಂಬಲ

ಅಗಸ್ಟ್ 01ರಿಂದ ಆರಂಭವಾಗಲಿರುವ ತೆಲಂಗಾಣ ರಾಜ್ಯದ ಹಸಿರು ಅಭಿಯಾನದ ಮೂಲಕ ನಾಲ್ಕು ವರ್ಷಗಳಲ್ಲಿ 230ಕೋಟಿ ಸಸಿ ನೆಡುವ ಬೃಹತ್ ಅಭಿಯಾನ ಇದಾಗಿದೆ, ಸದ್ಯಕ್ಕೆ 80 ಕೋಟಿ ಸಸಿ ನೆಟ್ಟಾಗಿದೆ. ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್ ,ಸೈನಾ ನೆಹ್ವಾಲ್ ಮುಂತಾದವರು ಈ ಯೋಜನೆಗೆ ಕೈಜೋಡಿಸಿದ್ದಾರೆ.

Story first published: Monday, July 30, 2018, 13:41 [IST]
Other articles published on Jul 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X