ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೀವನದುದ್ದಕ್ಕೂ ವರ್ಣಭೇದ ತಾರತಮ್ಯಕ್ಕೆ ಒಳಗಾಗಿದ್ದೇನೆ: ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್

Former crickter Laxman Sivaramakrishnan says have been colour discriminated all my life

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಲಕ್ಷ್ಮಣ್ ಶಿವರಾಮಕೃಷ್ಣನ್ ತಾನು ಜೀವದುದ್ದಕ್ಕೂ ವರ್ಣಭೇದ ತಾರತಮ್ಯಕ್ಕೆ ಒಳಗಾಗುತ್ತಲೇ ಬಂದಿದ್ದೇನೆ ಎಂದು ಬೇಸರದಿಂದ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕ್ರಿಕೆಟ್ ಕಾಮೆಂಟೇಟರ್ ಆಗಿ ಖ್ಯಾತವಾಗಿರುವ ಶಿವರಾಮಕೃಷ್ಣನ್ ವೀಕ್ಷಕ ವಿವರಣೆಕಾರನಾಗಿ ಕಾಮೆಂಟರಿ ವೇಳೆ ಮಾಡುವ ಪ್ರತಿಕ್ರಿಯೆಗಳಿಗೆ ಆನ್‌ಲೈನ್‌ನಲ್ಲಿ ಟ್ರೋಲ್‌ಗೆ ಒಳಗಾಗುವ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಾ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಈ ಪ್ರಶ್ನೆಗೆ ಟ್ವಿಟ್ಟರ್‌ನಲ್ಲಿ ಶಿವರಾಮಕೃಷ್ಣನ್ ಅವರು "ನಾನು ಜೀವನದುದ್ದಕ್ಕೂ ಟೀಕೆ ಹಾಗೂ ವರ್ಣಭೇದ ತಾರತಮ್ಯಕ್ಕೆ ಒಳಗಾಗುತ್ತಲೇ ಬಂದಿದ್ದೇನೆ. ಹಾಗಾಗಿ ಇದ್ಯಾವುದೂ ನನಗೆ ತಲ್ಲಣವುಂಟು ಮಾಡುವುದಿಲ್ಲ. ದುರದೃಷ್ಟವಶಾತ್ ಇದು ನಮ್ಮ ದೇಶದಲ್ಲಿಯೇ ನಡೆಯುತ್ತಿದೆ" ಎಂದಿದ್ದಾರೆ ಲಕ್ಷ್ಮಣ್ ಶಿವರಾಮಕೃಷ್ಣನ್.

5ನೇ ದಿನವೂ ವಿಕೆಟ್ ಕೀಪಿಂಗ್‌ಗೆ ಕಣಕ್ಕಿಳಿಯದ ವೃದ್ದಿಮಾನ್ ಸಾಹ: ಕೆ.ಎಸ್‌ ಭರತ್‌ ಕಣಕ್ಕೆ5ನೇ ದಿನವೂ ವಿಕೆಟ್ ಕೀಪಿಂಗ್‌ಗೆ ಕಣಕ್ಕಿಳಿಯದ ವೃದ್ದಿಮಾನ್ ಸಾಹ: ಕೆ.ಎಸ್‌ ಭರತ್‌ ಕಣಕ್ಕೆ

ಇನ್ನು ಇದೇ ವಿಚಾರಬಾಗಿ ಇದಕ್ಕೂ ಮುನ್ನ ಭಾರತದ ಮಾಜಿ ಆರಂಭಿಕ ಆಟಗಾರ ಅಭಿನವ್ ಮುಕುಂದ್ ಕೂಡ ಪ್ರತಿಕ್ರಿಯಿಸಿದ್ದರು. ಸುದೀರ್ಘವಾಗಿ ಅವರು ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿ ಬೇಸರವನ್ನು ಹೊರಹಾಕಿದ್ದರು. "ನಾನು 15 ವರ್ಷ ವಯಸ್ಸಿನ ನಂತರ ನಮ್ಮ ದೇಶದ ಒಳಗೆ ಹಾಗೂ ಹೊರಗೆ ಸಾಕಷ್ಟು ಪ್ರಯಾಣ ಮಾಡಿದ್ದೇನೆ. ನಾನು ಸಣ್ಣವನಿದ್ದಾಗಿನಿಂದಲೇ ನನ್ನ ಚರ್ಮದ ಬಣ್ಣದ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದರು. ಇದು ನನಗೆ ಯಾವಾಗಲೂ ರಹಸ್ಯವಾಗಿಯೇ ಉಳಿದುಕೊಂಡಿದೆ. ಕ್ರಿಕೆಟ್‌ಅನ್ನು ಸಾಕಷ್ಟು ಗಮನಿಸುತ್ತಾ ಬರುವವರಿಗೆ ಇದು ಸಹಜವಾಗಿ ಅರ್ಥವಾಗುತ್ತದೆ. ಆದರೆ ನಾನು ಸತತವಾಗಿ ಮೈದಾನದಲ್ಲಿ ಅಭ್ಯಾಸವನ್ನು ಮಾಡುತ್ತಿರುತ್ತೇನೆ. ನಾನು ಯಾವತ್ತು ಕೂಡ ನನ್ನ ಬಣ್ಣವನ್ನು ಕಳೆದುಕೊಂಡ ಬಗ್ಗೆ ಬೇಸರವನ್ನು ಮಾಡಿಕೊಂಡಿಲ್ಲ" ಎಂದು ಅಭಿನವ್ ಮುಕುಂದ್ ಬರೆದುಕೊಂಡಿದ್ದರು.

ಮುಂದುವರಿದು ಅವರು "ಇದಕ್ಕೆ ಕಾರಣವೇನೆಮದರೆ ನಾನು ಏನು ಮಾಡಿತ್ತಿದ್ದೇನೋ ಅದನ್ನು ಪ್ರೀತಿಸುತ್ತೇನೆ. ನಾನು ಏನಾದರೂ ವಿಶೇಷವಾಗಿ ಸಾಧನೆ ಮಾಡಲು ಸಾಧ್ಯವಾಗುವುದು ಹೊರಾಂಗಣದಲ್ಲಿ ಅಭ್ಯಾಸವನ್ನು ನಡೆಸಿದರೆ ಮಾತ್ರ. ನಾನು ದೇಶದ ಅತ್ಯಂತ ಬಿಸಿಲಿನ ಪ್ರದೇಶವಾದ ಚೆನ್ನೈ ಭಾಗದಿಂದ ಬಂದಿರುವುದು ಕೂಡ ಅದಕ್ಕೆ ಕಾರಣವಾಗಿದೆ. ನಾನು ನನ್ನ ಯೌವ್ವನದ ಬಹುತೇಕ ಕಾಲವನ್ನು ಮೈದಾನದಲ್ಲಿಯೇ ಕಳೆದಿದ್ದೇನೆ" ಎಂದಿದ್ದಾರೆ ಅಭಿನವ್ ಮುಕುಂದ್.

ಬಹುಕಾಲದ ಗೆಳತಿ ಜೊತೆಗೆ, ಟೀಂ ಇಂಡಿಯಾ ಬೌಲರ್ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥಬಹುಕಾಲದ ಗೆಳತಿ ಜೊತೆಗೆ, ಟೀಂ ಇಂಡಿಯಾ ಬೌಲರ್ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ

ಕ್ರಿಕೆಟ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ವರ್ಣಭೇದ ಧೋರನೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ಅನೇಕ ಆಟಗಾರರು ಈ ಬಗ್ಗೆ ಧ್ವನಿಯೆತ್ತಿದ್ದಾರೆ. ಅಲ್ಲದೆ ಕಳೆದ ವರ್ಷ ಅಮೇರಿಕಾದಲ್ಲಿ ಕಪ್ಪುವರ್ಣೀಯ ವ್ಯಕ್ತಿಯೋರ್ವನನ್ನು ಹಾಡಹಗಲೇ ಪೊಲೀಸ್ ಅಧಿಕಾರೊಯೋರ್ವ ಮೊಣಕಾಲೂರಿ ಉಸಿರುಗಟ್ಟಿಸಿ ಕೊಂದ ನಂತರ ಈ ವರ್ಣಭೇದ ಧೋರಣೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ನಂತರ ಬ್ಲ್ಕಾಕ್ ಲೈವ್ಸ್ ಮ್ಯಾಟರ್ ಎಂದು ದೊಡ್ಡ ಅಭಿಯಾನವೇ ನಡೆಯಿತು. ಕ್ರಿಕೆಟ್‌ನಲ್ಲಿ ಕೂಡ ಇದಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ ಕೆಲ ಕ್ರಿಕೆಟಿಗರು ತಾವು ಅನುಭವಿಸಿದ ವರ್ಣಭೇದ ಧೋರಣೆಯ ಬಗ್ಗೆಯೂ ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ಮೂಲಕ ಸಾಕಷ್ಟು ಚರ್ಚೆಗಳು ನಡೆದಿತ್ತು. ಇದೀಗ ಭಾರತೀಯ ಕ್ರಿಕೆಟ್ ತಂಡದ ಇಬ್ಬರು ಮಾಜಿ ಆಟಗಾರರು ಈ ಬಗ್ಗೆ ಧ್ವನಿಯೆತ್ತಿದ್ದಾರೆ.

KL Rahul ಹಾಗು Rashid Khanಗೆ ಎದುರಾಯಿತು ಭಾರೀ ಕಂಟಕ | Oneindia Kannada

Story first published: Monday, November 29, 2021, 23:23 [IST]
Other articles published on Nov 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X