ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವುದು 'ಮಹಾ ಅಪರಾಧ' ಎಂದ ಇಂಗ್ಲೆಂಡ್ ಕ್ರಿಕೆಟಿಗ

Former England cricketer greame swann backed virat kohli as captain
Virat Kohli ನಾಯಕತ್ವದಿಂದ ಕೆಳಗಿಳಿಯಬೇಕು ಅಂದವರಿಗೆ ಇಲ್ಲಿದೆ ಉತ್ತರ | Oneindia Kannada

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್‌ಗೆ ಶರಣಾದ ನಂತರ ಟೀಮ್ ಇಂಡಿಯಾ ನಾಯಕತ್ವ ಬದಲಾವಣೆ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ವಿರಾಟ್ ಕೊಹ್ಲಿ ಬದಲಿಗೆ ಬೇರೆ ಯಾರಿಗಾದರೂ ನಾಯಕತ್ವ ಪಟ್ಟ ನೀಡಿ ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ. ಆದರೆ ಇನ್ನು ಕೆಲವರು ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಸಂಪೂರ್ಣ ಅಂಕವನ್ನು ನೀಡಿ ಬೆಂಬಲಿಸುತ್ತಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಗ್ರೇಮ್ ಸ್ವಾನ್ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ.

ನಾಯಕನಾಗಿ ವಿರಾಟ್ ಕೊಹ್ಲಿ ಸಾಧಿಸಿದ ಸಾಧನೆಗೆ ಗ್ರೇಮ್ ಸ್ವಾನ್ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕತ್ವ ಬದಲಾವಣೆಯ ಅಭಿಪ್ರಾಯಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಅತ್ಯುತ್ತಮ ಟೆಸ್ಟ್ ತಂಡವನ್ನು ಕನಿಷ್ಠ 3 ಪಂದ್ಯಗಳಿಂದ ನಿರ್ಧರಿಸಬೇಕು: ಕೊಹ್ಲಿಅತ್ಯುತ್ತಮ ಟೆಸ್ಟ್ ತಂಡವನ್ನು ಕನಿಷ್ಠ 3 ಪಂದ್ಯಗಳಿಂದ ನಿರ್ಧರಿಸಬೇಕು: ಕೊಹ್ಲಿ

ಭಾರತ ನ್ಯೂಜಿಲೆಂಡ್ ತಂಡದ ವಿರುದ್ಧ ಫಐನಲ್ ಪಂದ್ಯದಲ್ಲಿ ಸೋಲು ಕಂಡಿತು ಎಂಬ ಒಂದು ಕಾರಣಕ್ಕೆ ಈ ಹಿಂದಿನ ಸಾಧನೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಸ್ವಾನ್ ಹೇಳಿದ್ದಾರೆ. ಭಾರತ ಈ ಹಂತಕ್ಕೆ ತಲುಪಲು ವಿರಾಟ್ ಕೊಹ್ಲಯ ನಿರ್ಭೀತ ನಾಯಕತ್ವವೇ ಕಾರಣ. ಅವರು ಇಡೀ ತಂಡವನ್ನು ಈ ಹಂತಕ್ಕೆ ತಲುಪಿಸಿದ್ದಾರೆ ಎಂದು ಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಸ್ವಾನ್ ವಿರಾಟ್ ಕೊಹ್ಲಿಯನ್ನು ಈ ಕಾರಣಕ್ಕಾಗಿ ನಾಯಕತ್ವದಿಂದ ಕೆಳಗಿಳಿಸಿದರೆ ಅದು "ಕ್ರಿಕೆಟ್‌ಗೆ ಮಾಡಿದ ಮಹಾ ಅಪರಾಧ" ಎಂದು ಸ್ವಾನ್ ಹೇಳಿದ್ದಾರೆ. "ವಿರಾಟ್ ಕೊಹ್ಲಿ ಓರ್ವ ದೊಡ್ಡ ಚಾಂಪಿಯನ್ ಹಾಗೂ ಸೂಪರ್ ಸ್ಟಾರ್. ಆತ ಭಾರತೀಯ ಕ್ರಿಕೆಟ್ ತಂಡಕ್ಕೆ ಹೊಸ ಶಕ್ತಿಯನ್ನು ತುಂಬಿದ್ದಾರೆ. ಆತನ ಬದ್ಧತೆ ಏನು ಎಂಬುದು ನೀವು ವಿಕೆಟ್ ಕಳೆದುಕೊಂಡಾಗ ಹಾಗೂ ಫೀಲ್ಡಿಂಗ್‌ನಲ್ಲಿ ಎಡವಿದಾಗ ಅರಿವಾಗುತ್ತದೆ. ಆತ ತನ್ನ ಕರ್ತವ್ಯಕ್ಕೆ ಸಂಪೂರ್ಣ ಬದ್ಧವಾಗಿರುತ್ತಾನೆ" ಎಂದು ಗ್ರೇಮ್ ಸ್ವಾನ್ 'ಸ್ಪೋರ್ಟ್ಸ್ ಕೀಡಾ'ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ನೀವು ವಿರಾಟ್ ಕೊಹ್ಲಿಯಂಥಾ ಅದ್ಭುತವಾದ ನಾಯಕನನ್ನು ಹೊಂದಿರುವಾಗ ಆ ಸ್ಥಾನದಿಂದ ಆತನನ್ನು ಕೆಳಗಿಳಿಸುವುದು ಕ್ರಿಕೆಟ್‌ಗೆ ಮಾಡುವ ದೊಡ್ಡ ಅಪರಾಧವಾಗುತ್ತದೆ. ಭಾರತ ಈ ಟೆಸ್ಟ್ ಪಂದ್ಯವನ್ನು ಸೊಲಲು ಕಾರಣ ಅವರು ಉತ್ತಮ ಮಟ್ಟದ ಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ" ಎಂದು ಗ್ರೇಮ್ ಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.

Story first published: Friday, June 25, 2021, 17:14 [IST]
Other articles published on Jun 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X