ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: ಡೆಲ್ಲಿ ಕ್ಯಾಪಿಟಲ್ಸ್ ಅಣಕಿಸಿದ ಇಂಗ್ಲೆಂಡ್ ಮಾಜಿ ನಾಯಕ!

Former England skipper trolls Delhi Capitals after collapse against Kings XI Punjab

ನವದೆಹಲಿ, ಏಪ್ರಿಲ್ 2: ಐಪಿಎಲ್ 13ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತಿತ್ತು. ಈ ಪಂದ್ಯದಲ್ಲಿ ನಿಜವಾಗಿ ಡೆಲ್ಲಿಯೇ ಗೆಲ್ಲಬೇಕಿತ್ತು. ಆದರೂ ಕೊನೇ ಘಳಿಗೆಯಲ್ಲಿ ಡೆಲ್ಲಿ ಪಂದ್ಯವನ್ನು ಕೈ ಚೆಲ್ಲಿತ್ತು. ಪಂಜಾಬ್ ಎದುರು ಸೋತ ಡೆಲ್ಲಿ ತಂಡವನ್ನು ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾಘನ್ ಅಣಕಿಸಿದ್ದಾರೆ.

ಐಪಿಎಲ್ 2019 ಮೈಖೇಲ್ ಕನ್ನಡ 'ವಿಶೇಷ ಮುಖಪುಟ' (ಫಲಿತಾಂಶಗಳು, ಪಾಯಿಂಟ್ ಟೇಬಲ್, ಕುತೂಹಲಕಾರಿ ಅಂಶಗಳು ಇಲ್ಲಿವೆ!)

ಸೋಮವಾರದ (ಏಪ್ರಿಲ್ 1) ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ಕೆ‍XIಪಿ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದು 166 ರನ್ ಕಲೆ ಹಾಕಿತ್ತು. ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ 16.5ನೇ ಓವರ್‌ನಲ್ಲಿ 5ನೇ ವಿಕೆಟ್ ಆಗಿ ಕ್ರಿಸ್ ಮೋರಿಸ್ ಅವರನ್ನು ಕಳೆದುಕೊಳ್ಳುವಾಗ ಖಾತೆಯಲ್ಲಿ 144 ರನ್‌ಗಳಿದ್ದವು. ಆಗ ಡೆಲ್ಲಿ ಖಾತೆಯಲ್ಲಿ ಇನ್ನೂ 6 ವಿಕೆಟ್‌ಗಳಿದ್ದವು.

ಆರ್‌ಸಿಬಿ ಟ್ರೋಲ್ ಆಗೋದಕ್ಕೂ ನೆಹ್ರಾ ಹೀಗ್ ಹೇಳೋದಕ್ಕೂ ಸರಿಹೋಯ್ತು!ಆರ್‌ಸಿಬಿ ಟ್ರೋಲ್ ಆಗೋದಕ್ಕೂ ನೆಹ್ರಾ ಹೀಗ್ ಹೇಳೋದಕ್ಕೂ ಸರಿಹೋಯ್ತು!

ಆದರೆ ಅಂತಿಮ 4 ಓವರ್‌ನಲ್ಲಿ ಸ್ಯಾಮ್ ಕರನ್ ಒಟ್ಟು 4, ಮೊಹಮ್ಮದ್ ಶಮಿ 1 ವಿಕೆಟ್ ಉರುಳಿಸಿದ್ದರಿಂದ ಡೆಲ್ಲಿ 19.2 ಓವರ್‌ಗೆ ಸರ್ವ ಪತನ ಕಂಡು 152 ರನ್ ಪೇರಿಸಿ ಶರಣಾಗಿತ್ತು. ಡೆಲ್ಲಿ ತಂಡದ ಈ ಸೋಲನ್ನು ವಾಘನ್ ಅಣಕಿಸಿ ಟ್ವೀಟ್ ಮಾಡಿದ್ದಾರೆ.

'ಇವತ್ತು ರಾತ್ರಿ ಹಿಂದಿನ ಅದೇ ಡೆಲ್ಲಿ ಡೇರ್ ಡೆವಿಲ್ಸ್‌ನ (ಕಳಪೆ) ಆಟವನ್ನು ನೋಡಲು ಖುಷಿಯೆನಿಸಿತು' ಎಂಬರ್ಥದಲ್ಲಿ ವಾಘನ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಐಪಿಎಲ್‌ನಲ್ಲಿ ಈವರೆಗೂ ಫೈನಲ್ ಪ್ರವೇಶಿಸದ ಒಂದೇ ತಂಡವಾಗಿ ಡೆಲ್ಲಿ ಗುರುತಿಸಿಕೊಂಡಿದೆ.

ಟ್ವಿಟ್ಟರ್‌ನಲ್ಲಿ ಆರ್‌ಸಿಬಿಯ ಜನ್ಮ ಜಾಲಾಡಿದ ನೆಟ್ಟಿಗರುಟ್ವಿಟ್ಟರ್‌ನಲ್ಲಿ ಆರ್‌ಸಿಬಿಯ ಜನ್ಮ ಜಾಲಾಡಿದ ನೆಟ್ಟಿಗರು

ಈ ಬಾರಿ ಉತ್ತಮ ಪ್ರದರ್ಶನ ನೀಡಬೇಕೆಂದು ಡೆಲ್ಲಿ ತನ್ನ ಹೆಸರನ್ನು 'ಡೆಲ್ಲಿ ಕ್ಯಾಪಿಟಲ್ಸ್' ಎಂದು ಬದಲಿಸಿಕೊಂಡಿತ್ತು. ಆದರೆ ಹೆಸರು ಬದಲಿಸಿಕೊಂಡರೂ ಡೆಲ್ಲಿಯನ್ನು ಸೋಲು ಬೆನ್ನು ಬಿಡುತ್ತಿಲ್ಲ. ಗೆಲ್ಲಬೇಕಾದ ಪಂದ್ಯವನ್ನೂ ಸೋತು ಮತ್ತದೇ ಹಿಂದಿನ ತಂಡದ ಪ್ರದರ್ಶನವನ್ನೇ ಡೆಲ್ಲಿ ನೀಡುತ್ತಿದೆ ಎಂದು ವಾಘನ್ ಟ್ವೀಟ್ ಮಾಡಿದ್ದರು.

Story first published: Tuesday, April 2, 2019, 18:17 [IST]
Other articles published on Apr 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X