ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಮಾಜಿ ಆಲ್ ರೌಂಡರ್ ಬಾಪು ನಾಡಕರ್ಣಿ ನಿಧನ

Former India all-rounder Bapu Nadkarni passes away

ಮುಂಬೈ, ಜನವರಿ 18: ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಬಾಪು ನಾಡಕರ್ಣಿ ಅವರು ನಿಧನರಾಗಿದ್ದಾರೆ. ನಾಡಕರ್ಣಿಯವರಿಗೆ 87 ವರ್ಷ ವಯಸ್ಸಾಗಿತ್ತು. 1955 ಮತ್ತು 1968ರ ನಡುವೆ ಬಾಪು ಒಟ್ಟು 41 ಟೆಸ್ಟ್ ಪಂದ್ಯಗಳಲ್ಲಿ ಭಾರತ ರಾಷ್ಟ್ರೀಯ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸಿದ್ದರು.

ಸಚಿನ್, ಆಮ್ಲಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!ಸಚಿನ್, ಆಮ್ಲಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!

ದೇಸಿ ಕ್ರಿಕೆಟ್‌ನಲ್ಲಿ ಮುಂಬೈ ಮತ್ತು ಮಹಾರಾಷ್ಟ್ರ ತಂಡಗಳನ್ನು ಪ್ರತಿನಿಧಿಸಿದ್ದ ಬಾಪು ನಾಡಕರ್ಣಿ, 41 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 88 ವಿಕೆಟ್‌ಗಳನ್ನು ಪಡೆದಿದ್ದಾರೆ. 1968ರಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ 63 ರನ್‌ಗೆ 6 ವಿಕೆಟ್‌ ಉರುಳಿಸಿದ್ದು ಬಾಪು ಅವರ ವೃತ್ತಿ ಜೀವನದ ಅತ್ಯುತ್ತಮ ಸಾಧನೆ.

67 ಟೆಸ್ಟ್ ಇನ್ನಿಂಗ್ಸ್‌ನಲ್ಲಿ 25.70ರ ಸರಾಸರಿಯಂತೆ ನಾಡಕರ್ಣಿ 1,414 ರನ್ ಗಳಿಸಿದ್ದಾರೆ. ಇದರಲ್ಲಿ 7 ಅರ್ಧ ಶತಕಗಳು ಮತ್ತು 1 ಅಜೇಯ ಶತಕ ಸೇರಿದೆ. 1964ರ ಫೆಬ್ರವರಿಯಲ್ಲಿ ಕಾನ್‌ಪುರ್‌ನಲ್ಲಿ ನಡೆದಿದ್ದ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಡಕರ್ಣಿ ಅಜೇಯ ಶತಕ ಬಾರಿಸಿದ್ದರು.

ಭಾರತ vs ಆಸ್ಟ್ರೇಲಿಯಾ: ಕೆಟ್ಟ ದಾಖಲೆಗೆ ಕಾರಣರಾದ ವಿರಾಟ್ ಕೊಹ್ಲಿ!ಭಾರತ vs ಆಸ್ಟ್ರೇಲಿಯಾ: ಕೆಟ್ಟ ದಾಖಲೆಗೆ ಕಾರಣರಾದ ವಿರಾಟ್ ಕೊಹ್ಲಿ!

1964ರಲ್ಲಿ ಚೆನ್ನೈ(ಆಗಿನ ಮದ್ರಾಸ್)ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಡಕರ್ಣಿ 21 ಮೇಡನ್‌ಗಳ ಮೂಲಕ ಗಮನ ಸೆಳೆದಿದ್ದರು. ಆವತ್ತು ಬಾಪು 32-27-5-0ರ ಬೌಲಿಂಗ್ ಸಾಧನೆ ತೋರಿದ್ದರು. ಮುಂಬೈನಲ್ಲಿನ ಪುತ್ರಿಯ ನಿವಾಸದಲ್ಲಿದ್ದ ನಾಡಕರ್ಣಿಗೆ ಬಹಳ ಕಾಲದಿಂದ ಅನಾರೋಗ್ಯವಿತ್ತು. ಮುಂಬೈಯ ಆಸ್ಪತ್ರೆಯಲ್ಲಿ ಬಾಪು ಶುಕ್ರವಾರ (ಜ.17) ಕೊನೆಯುಸಿರೆಳೆದಿದ್ದಾರೆ.

Story first published: Saturday, January 18, 2020, 11:35 [IST]
Other articles published on Jan 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X