ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಕಾರು ಚೆನ್ನೈನಲ್ಲಿ ಪೊಲೀಸರ ವಶಕ್ಕೆ

Former India All-rounder Robin Singhs Car Seized In Chennai

ಕೊರೊನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿದ್ದು ಚೆನ್ನೈನಲ್ಲಿ ಮತ್ತೆ ಹನ್ನೆರಡು ದಿನಗಳ ಕಾಲ ಲಾಕ್‌ಡೌನ್ ಹೇರಲಾಗಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ನಿಯಮವನ್ನು ಉಲ್ಲಂಘನೆ ಮಾಡಿದ ಘಟನೆ ನಡೆದಿದೆ. ಹೀಗಾಗಿ ಚೆನ್ನೈ ಪೊಲೀಸರು ರಾಬಿನ್ ಸಿಂಗ್ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೊರೊನಾ ವೈರಸ್ ಸಂದರ್ಭದಲ್ಲಿ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಚೆನ್ನೈ ನಗರ ಪೊಲೀಸರು ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಅಗತ್ಯ ವಸ್ತುಗಳನ್ನು ತರಲು ಮಾನ್ಯತೆ ಪಡೆದ ಇ-ಪಾಸ್ ಹೊಂದದ ಕಾರಣದಿಂದ ರಾಬಿನ್ ಸಿಂಗ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಐಪಿಎಲ್‌ಗಾಗಿ ಏಷ್ಯಾಕಪ್ ರದ್ದಾಗಲ್ಲ, ಶ್ರೀಲಂಕಾ ಇಲ್ಲವೇ ಯುಎಇನಲ್ಲಿ ಟೂರ್ನಿ: ಪಿಸಿಬಿ ಮುಖ್ಯಸ್ಥಐಪಿಎಲ್‌ಗಾಗಿ ಏಷ್ಯಾಕಪ್ ರದ್ದಾಗಲ್ಲ, ಶ್ರೀಲಂಕಾ ಇಲ್ಲವೇ ಯುಎಇನಲ್ಲಿ ಟೂರ್ನಿ: ಪಿಸಿಬಿ ಮುಖ್ಯಸ್ಥ

ಶನಿವಾರ ಬೆಳಿಗ್ಗೆ ಸಿಂಗ್ ಈಸ್ಟ್ ಕೋಸ್ಟ್ ರೋಡ್ (ಇಸಿಆರ್) ನಿಂದ ಬರುತ್ತಿದ್ದ ರಾಬಿನ್ ಸಿಂಗ್ ಅವರ ಕಾರನ್ನು ವಶಕ್ಕೆ ಪಡೆದಿದ್ದು "ಅವರು ತುಂಬಾ ಸಭ್ಯರಾಗಿದ್ದರು ಮತ್ತು ಯಾವುದೇ ಜಗಳವಾಗಿಲ್ಲ. ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾವು ಅವರ ವಾಹನವನ್ನು ವಶಪಡಿಸಿಕೊಂಡಿದ್ದೇವೆ" ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಪೊಲೀಸ್ ಅಧಿಕಾರಿಯ ಪ್ರಕಾರ, ಸಿಂಗ್ ತನ್ನ ನಿವಾಸದಿಂದ ಎರಡು ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿ ತನ್ನ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಜೂನ್ 19 ರಿಂದ ಚೆನ್ನೈ 12 ದಿನಗಳವರೆಗೆ ಸಂಪೂರ್ಣ ಲಾಕ್ ಡೌನ್ ಆಗಿದೆ.

ಭಾರತ ಮೊದಲ ವಿಶ್ವಕಪ್‌ ಗೆದ್ದ ಅವಿಸ್ಮರಣೀಯ ದಿನ: ಹೇಗಿತ್ತು ಗೊತ್ತಾ ಆ ರೋಚಕ ಹಾದಿ!ಭಾರತ ಮೊದಲ ವಿಶ್ವಕಪ್‌ ಗೆದ್ದ ಅವಿಸ್ಮರಣೀಯ ದಿನ: ಹೇಗಿತ್ತು ಗೊತ್ತಾ ಆ ರೋಚಕ ಹಾದಿ!

ಈ ಹಿಂದೆ ದೇಶಾದ್ಯಂತ ಕಠಿಣ ಲಾಕ್‌ಡೌನ್ ವಿಧಿಸಿದ್ದ ಸಂದರ್ಭದಲ್ಲಿ ಆಲ್‌ರೌಂಡರ್ ರಿಷಿ ಧವನ್ ಕೂಡ ಲಾಕ್‌ಡೌನ್ ಉಲ್ಲಂಘನೆ ಮಾಡಿದ್ದರು. ಹಿಮಾಚಲ ಪ್ರದೇಶದ ತಮ್ಮ ತಮರು ಜಿಲ್ಲೆ ಮಂಡಿಯಲ್ಲಿ ರಿಷಿ ಧವನ್ ಲಾಕ್‌ಡೌನ್ ಉಲ್ಲಂಘನೆ ಮಾಡಿದ ಕಾರಣದಿಂದ ಪೊಲೀಸರು ರಿಷಿ ಧವನ್‌ಗೆ ದಂಡವನ್ನು ವಿಧಿಸಿದ್ದರು.

Story first published: Friday, June 26, 2020, 9:47 [IST]
Other articles published on Jun 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X